ಅಂಕೋಲಾ : ಇಲ್ಲಿಯ ಪೊಲೀಸ್ ಠಾಣೆಯ ಎಸೈ ಆಗಿದ್ದ ಬಾಬು ಆಗೇರ ಅವರು ಪಿಎಸೈ ಮುಂಭಡ್ತಿ ಪಡೆದಿದ್ದಾರೆ.
ಮಂಗಳೂರಿನ ಪಶ್ಚಿಮ ವಲಯ ಕಛೇರಿಯ ಪೊಲೀಸ್ ನೀರಿಕ್ಷಕರು ಈ ಬಗ್ಗೆ ಆದೇಶ ಹೊರಡಿಸಿದ್ದು, ತಕ್ಷಣ ಮಂಗಳೂರಿನ ವಲಯ ಕಛೇರಿಯಲ್ಲಿ ಹಾಜರಾಗುವಂತೆ ಆದೇಶ ಪತ್ರದಲ್ಲಿ ತಿಳಿಸಲಾಗಿದೆ
ಬಾಬು ಆಗೇರ ಅವರು ಮೂಲತ: ಅಂಕೋಲಾ ಅಲಗೇರಿಯವರಾಗಿದ್ದು, ಉತ್ತಮ ಕರ್ತವ್ಯ ಶೈಲಿಯ ಮೂಲಕ ಜನಸ್ನೇಹಿ ಪೊಲೀಸ್ ಆಗಿ ಜನಪ್ರೀಯತೆಗೆ ಕಾರಣರಾಗಿದ್ದಾರೆ.೧೯೯೬ ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಬಾಬು ಆಗೇರ ಅವರು ಮುಂಡಗೋಡ. ಗೋಕರ್ಣ, ಕುಮಟಾ, ಬನವಾಸಿ, ಅಂಕೋಲಾ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಅಂಕೋಲೆಯ ಸಾಂಸ್ಕçತಿಕ, ಜಾನಪದ ಕ್ಷೇತ್ರಕ್ಕೆ ಆದ ಕೊಡುಗೆ ನೀಡಿದ ಹೆಮ್ಮೆಯ ಅತಿ ಹಿಂದುಳಿದ ಆಗೇರ ಸಮಾಜದವರಾದ ಬಾಬು ಆಗೇರ ಅವರು ಪದೋನ್ನತಿಗೆ ಕಾರಣರಾಗಿರುವದು ಹರ್ಷಕ್ಕೆ ಕಾರಣವಾಗಿದೆ.
