ದಿನಕರ ನಾಯ್ಕ. ಅಲಗೇರಿ.
ಅಂಕೋಲಾ : ಮಟ್ಕಾ ಚೀಟಿ ಬರೆದುಕೊಳ್ಳುವ ಮನೆಯಲ್ಲಿ ಯಾರಿಲ್ಲದ ವೇಳೆಯಲ್ಲಿ ಒಳನುಗ್ಗಿ ಆತನ ಹೆಂಡತಿಯ ಮೈಮುಟ್ಟಿ ಮಜಾ ತೆಗೆದುಕೊಳ್ಳಲು ಯತ್ನಿಸಿದ ಮಟ್ಕಾ ಬುಕ್ಕಿಗೆ ಧರ್ಮದೇಟು ನೀಡಿ ಮೈ ಚಳಿ ಬಿಡಿಸಿದ ಘಟನೆ ತಾಲೂಕಿನ ರಾಮನಗುಳಿಯ ಸಮೀಪ ನಡೆದಿದೆ.
ಮೈ ಸವರಲು ಹೋದ ಮಟ್ಕಾ ಬುಕ್ಕಿ ;
ಮಟ್ಕಾ ಬುಕ್ಕಿಯೊಬ್ಬ ದಿನದ ವ್ಯವಹಾರಕ್ಕಾಗಿ ಮಟ್ಕಾ ಬರೆದುಕೊಳ್ಳುವ ಮನೆಗೆ ತೆರಳಿದ್ದ. ಈ ವೇಳೆ ಪತಿ ಮಹಾಶಯ ಇಲ್ಲದನ್ನು ಖಚಿತಪಡಿಸಿಕೊಂಡು, ಸಾವಕಾಶವಾಗಿ ಕಳ್ಳ ಬೆಕ್ಕಿನಂತೆ ಮನೆಯೊಳಕ್ಕೆ ಹೆಜ್ಜೆ ಹಾಕಿದ್ದಾನೆ.
ನಿಧಾನವಾಗಿ ಮನೆಯಲ್ಲಿದ್ದ ಮಹಿಳೆಯ (ನಯನದಂತ ಕಣ್ಣುವಳು) ಮೈ ಸವರಲು ಮುಂದಾದಾಗ ಭದ್ರಕಾಳಿಯ ರೂಪ ತಾಳಿದ ಈಕೆ ಹಿಡಿಮುಟ್ಟೆಯ (ಪೊರಕೆ) ಶಾಸ್ತç ನಡೆಸಿ, ಧರ್ಮದೇಟು ನೀಡಿದ್ದಾಳೆ. ಈಕೆಯಿಂದ ಹೇಗೊ ತಪ್ಪಿಸಿಕೊಂಡು ಬೈಕ್ ಏರಿ ತೆರಳಿದ್ದ ಈ ಬುಕ್ಕಿ ಜೀವ ತಪ್ಪಿಸಿಕೊಂಡು ಅಂತೂ ಮನೆ ಸೇರಿಕೊಂಡಿದ್ದಾನೆ.
ಹೊಡೆತ ಬಿದ್ದಿದ್ದನ್ನು ಅರಗಿಸಿಕೊಳ್ಳಲಾಗದ ಈ ಬುಕ್ಕಿ ಮಹಾಶಯ ಮಹಿಳೆಯ ಪತಿಗೆ ಪೋನ್ ಮಾಡಿ ಇನ್ನು ಮುಂದೆ ನನಗೆ ಮಟ್ಕಾ ಚೀಟಿ ಕೊಡುವುದು ಬೇಡಾ. ನೀವು ಮಟ್ಕಾ ತೆಗೆದುಕೊಂಡರೆ ಬೀಟ್ ಪೊಲೀಸ್ಗೆ ಹೇಳಿ ನಾನೆ ಹಿಡಿಯಿಸಿಕೊಡುತ್ತೇನೆ ಎಂದು ಆವಾಜ್ ಹಾಕಿದ್ದಾನೆ.
ಮಟ್ಕಾ ಬುಕ್ಕಿಗೆ ನಡೆದ ಹಿಡೆಮುಟ್ಟೆಯ ಶಾಸ್ತç ಹಾಗೂ ದಮದೇಟಿನ ಕಜ್ಜಾಯದ ಎಲ್ಲಾ ಸನ್ನಿವೇಶಗಳು ಮೋಬೈಲನಲ್ಲಿ ರೇಕಾರ್ಡ್ ಆಗಿರುವ ದೃಶ್ಯದ ತುಣಕನ್ನು ವಾಟ್ಸ್ಪನಲ್ಲಿ ಕಳುಹಿಸದ್ದೆ ತಡ ಮೀಟರ್ ಆಪ್ ಆದ ಬುಕ್ಕಿ ಇಂಗು ತಿಂದ ಮಂಗನ0ತಾಗಿದ್ದಾನೆ.
