ಅಂಕೋಲಾ : ಯೋಗ ಆಚರಣೆ ಕೇವಲ ಒಂದು ದಿನದ ಕಾಯಕವಾಗಿರದೇ ದಿನನಿತ್ಯ ಯಾವುದೇ ಹಿಂಜರಿಕೆಯಿಲ್ಲದೇ ಮಾಡುವದರ ಮೂಲಕ ಯೋಗದ ಮಹತ್ವವನ್ನು ಸಾರಬೇಕು. ಶಿಕ್ಷಕರು ಶಿಕ್ಷಣದ ಜೊತೆ ಇತರೇ ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ವಿಜಯ ಕರ್ನಾಟಕ ದಿನಪತ್ರಿಕೆಯ ಜಿಲ್ಲಾ ಹಿರಿಯ ವರದಿಗಾರ ಪ್ರಮೋದ ಹರಿಕಾಂತ ಹೇಳಿದರು.

 ಪಟ್ಟಣದ ಕೆ.ಎಲ್.ಇ. ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಜಯ ಕರ್ನಾಟಕ ದಿನ ಪತ್ರಿಕೆಯ ಸಹಯೋಗದಲ್ಲಿ 8 ನೇ ಅಂತರಾಷ್ಟಿçÃಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಪತಂಜಲಿ ಯೋಗ ಪೀಠದ ಅಂಕೋಲಾ ಪ್ರಭಾರಿ ವಿನಾಯಕ ಗುಡಿಗಾರ ಮಾತನಾಡಿ ಯೋಗವನ್ನು ಪಾಶ್ಚಾತ್ಯರು ತಮ್ಮ ಸಂಸ್ಕöತಿಯನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಭಾರತೀಯರಾದ ನಾವು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ವಿಷಾದಿಸಿದರು.

ಅಧ್ಯಕ್ಷತೆವಹಿಸಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಜಿ.ಹೆಗಡೆ ಮಾತನಾಡಿ ಯೋಗದ ಬೀಜ ಸಸಿಯಾಗಿದ್ದು ಭಾರತದಲ್ಲಾದರೂ ಅದರ ನೆರಳನ್ನು ವಿದೇಶಿಗರು ಬಳಸಿಕೊಳ್ಳುತ್ತಿದ್ದಾರೆ. ಯೋಗದಿಂದ ಮನಸ್ಸನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು ಎಂದರು.

 ಶಾಂತಲಾ ಸಂಗಡಿಗರು ಪ್ರಾರ್ಥಿಸಿದರು, ಮನೋಜ ಗೌಡ ಸ್ವಾಗತಿಸಿದರು. ನೇಹಾ ನಾಯಕ ವಂದಿಸಿದರು, ವೈಶಾಲಿ ಗುನಗಿ ನಿರೂಪಿಸಿದರು. ವಿಜಯ ಕರ್ನಾಟಕ ಪತ್ರಿಕೆಯ ಶುಶಾಂತ, ವಿದ್ಯಾರ್ಥಿ ಸಂಘದ ಕಾರ್ಯದ್ಯಕ್ಷೆ ಡಾ.ಪುಷ್ಪಾ ನಾಯ್ಕ, ಎನ್.ಎಸ್.ಎಸ್.ಅಧಿಕಾರಿಗಳಾದ ರಾಘವೇಂದ್ರ ಅಂಕೋಲೇಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.