ಕಾರವಾರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಅವಹೇಳನಕಾರಿಯಾಗಿ ಭಾಷಣ ಮಾಡಿದ ಯುವ ಬ್ರೀಗೇಡ್ನ ಸಂಸ್ಥಾಪಕ ಅಧ್ಯಕ್ಷ ಚಕ್ರವರ್ತಿ ಸೂಲೆಬೆಲೆ ಅವರ ಮೇಲೆ ಕಾರವಾರದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಕ್ರವರ್ತಿ ಸೂಲೆಬೆಲೆ ಅವರು ಇತ್ತೀಚಿಗೆ ಅಂಕೋಲಾ ಹಾಗೂ ಕಾರವಾರಕ್ಕೆ ಆಗಮಿಸಿದ್ದರು. ಈ ವೇಳೆ ಕಾರವಾರ ತಾಲೂಕಿನ ಕಡವಾಡದ ಬೋವಿವಾಡದಲ್ಲಿರುವ ಶ್ರೀ ಆದಿ ದೇವಸ್ಥಾನಕ್ಕೆ ಭೇಟಿ ನೀಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಿರುತ್ತಾರೋ ಆ ಸಂದರ್ಭದಲ್ಲಿ ಹಿಂದುಗಳು ಬದುಕಲು ಕಷ್ಟವಾಗುತ್ತದೆ. ಹೀಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ದ ಅನೇಕ ರೀತಿಯಲ್ಲಿ ಅಸಭ್ಯವಾಗಿ ಮಾತನಾಡಿ, ಹಿಂದು-ಮುಸ್ಲಿ0 ಧರ್ಮಗಳ ನಡುವೆ ವೈಮನ್ಸು ಉಂಟು ಮಾಡುವ ಹೇಳಿಕೆ ನೀಡಿದ್ದಾರೆ. ಈ ಆರೋಪದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಡವಾಡದ ಬೋವಿವಾಡದ ಉಲ್ಲಾಸ ತೋಕು ನಾಯ್ಕ ದೂರು ನೀಡಿದ್ದಾರೆ.
ಈ ಹೇಳಿಕೆ ಸಾಮಾಜಿಕ ಜಾಲತಾಣದಲಿವೈರಲ್ ಆಗಿದ್ದು, ಎಎಸೈ ವಿದ್ಯಾ ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಕ್ರವರ್ತಿ ಸೂಲೆಬೆಲೆ ಅವರ ವಿರುದ್ದ ಐಪಿಸಿ 1860 ಅಡಿಯಲ್ಲಿ 505(2) ಪ್ರಕರಣ ದಾಖಲಾಗಿದೆ.
