ವರದಿ : ದಿನಕರ ನಾಯ್ಕ. ಅಲಗೇರಿ

ಅಂಕೋಲಾ : ಟ್ರಿಪ್ ಗೆ ತೆರಳಿದ್ದ ವೇಳೆ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕ ಶವವಾಗಿ ಹೊಸಕಂಬಿ ಬ್ರೀಜ್ ಬಳಿ ಸೋಮವಾರ ಮದ್ಯಾಹ್ನ ಪತ್ತೆಯಾಗಿದ್ದಾನೆ.ಬೊಬ್ರವಾಡದ ಸುಹಾಸ ಕೃಷ್ಣ ( ಪಾಂಡುರಂಗ) ನಾಯ್ಕ (28) ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಕೋಲಾದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.

ಪ್ರಕರಣ ಏನಾಗಿತ್ತು.?

ಅಂಕೋಲಾದ 15 ಜನರ ಗೆಳೆಯರ ತಂಡ ಹೊಸಕಂಬಿಯ ಹಳ್ಳದ ವಿಹಂಗಮ ಪ್ರದೇಶದಲ್ಲಿ ಪಾರ್ಟಿ ಮಾಡಲೆಂದು ತೆರಳಿದ್ದರು. ಈ ವೇಳೆ ಚಿಪ್ಪೆಕಲ್ಲನ್ನು ಆರಿಸಲು ಸುಹಾಸ ನಾಯ್ಕ ಗೆಳಯನೊಂದಿಗೆ ಇನ್ನೊಂದು ಬದಿಗೆ ನೀರಿಗೆ ಇಳಿದಿದ್ದ.

ಈ ವೇಳೆ ಇಬ್ಬರು ನೀರಿನ ಹರಿವಿಗೆ ಸಿಲುಕಿದ್ದಾರೆ. ಹರಸಾಹಸ ಪಟ್ಟು ದಡ ಸೇರಿದ್ದಾನೆ. ಆದರೆ ಸುಹಾಸಗೆ ಸರಿಯಾಗಿ ಈಜು ಬರದೇ ಇರುವದರಿಂದ ನೋಡು ನೋಡುತ್ತಲೆ ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾಗಿದ್ದಾನೆ.ಸುಹಾಸನ ಪತ್ತೆಗಾಗಿ ಬೊಬ್ರವಾಡ ಜನತೆ ಹಾಗೂ ಕುಟುಂಬದವರು ಮತ್ತು ಗೆಳೆಯರು ಅಗ್ಬಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ನೆರವಿನಿಂದ ಕಾರ್ಯಾಚರಣೆಗೆ ಇಳಿದಿದ್ದರು.

ಸೋಮವಾರ ಮದ್ಯಾಹ್ನ 3-15 ರ ಸುಮಾರಿಗೆ ಹೊಸಕಂಬಿಯ ಬ್ರೀಜ್ ಬಳಿ ಸುಹಾಸನ ಶವ ತೇಲುತ್ತ ಇರುವದು ಕಂಡು ಬಂದಿದೆ. ಶವವನ್ನು ಮೇಲೆತ್ತಲಾಗಿದ್ದು ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.ತಹಸೀಲ್ದಾರ ಅಶೋಕ ಭಟ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ತಾಲೂಕಾಡಳಿತದಿಂದ ಎಲ್ಲ ರೀತಿಯ ನೆರವನ್ನು ನೀಡಿದ್ದರು.