ಅಂಕೋಲಾ : ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಬಗೆಹರಿಯುವವರೆಗೆ ಹಳೆಯ ಪಠ್ಯವನ್ನೇ ಮುಂದುವರೆಸುಂತೆ ಒತ್ತಾಯಿಸಿ ಅಂಕೋಲಾದ ಪ್ರಮುಖರು ಮಂಗಳವಾರ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ತಹಶೀಲ್ದಾರ ಮೂಲಕ ಮಮವಿ ಸಲ್ಲಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಕರ್ನಾಟಕ ಸರಕಾರ ಜನ ವಿರೋಧದ ನಡುವೆಯೂ ವಿಧಾನ ಸಭೆಯಲ್ಲಿ ಚರ್ಚೆಯನ್ನೂ ಮಾಡದೆ, ಏಕಪಕ್ಷೀಯವಾಗಿ ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉನ್ನತ ಶಿಕ್ಷಣದಲ್ಲಿ ತರಾತುರಿಯಲ್ಲಿ ಜಾರಿ ಮಾಡಿದೆ. ಅದರಿಂದಾಗುತ್ತಿರುವ ತೊಂದರೆಗಳು ನಮ್ಮೆದುರಿಗಿವೆ. ಅದನ್ನೀಗ ಪ್ರಾಥಮಿಕ ಶಿಕ್ಷಣಕ್ಕೂ ಅನ್ವಯಿಸಲು ಯಾವ ಚರ್ಚೆಗಳೂ ಇಲ್ಲದೆಯೇ ಸಮಿತಿಯನ್ನು ನೇಮಕ ಮಾಡಿದೆ. ಅದರ ಶಿಫಾರಸುಗಳಿಗೆ ಅನುಗುಣವಾಗಿ ಮತ್ತೆ ನೀವು ಹೊಸ ಪಠ್ಯ ಪುಸ್ತಕಗಳನ್ನು ರಚಿಸುವವರಿದ್ದೀರಿ. ಹಾಗಿದ್ದೂ ಕೇವಲ ಒಂದು ವರ್ಷಕ್ಕಾಗಿ ಪಠ್ಯ ಮರುಪರಿಷ್ಕರಣೆಯ ವ್ಯರ್ಥ ಅಗತ್ಯವೇನಿತ್ತು? ಇದಕ್ಕೆ ಖರ್ಚು ಮಾಡಿದ ಹಣದಿಂದ ಸಾರ್ವಜನಿಕ ಬೊಕ್ಕಸಕ್ಕೆ ಆದ ನಷ್ಟಕ್ಕೆ ಯಾರು ಹೊಣೆ? ಈ ಎಲ್ಲಾ ವಿವಾದಗಳು ಕೊನೆಗೊಳ್ಳುವವರೆಗೂ ಹಳೆಯ ಪಠ್ಯಪುಸ್ತಕಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಸಂದರ್ಭದಲ್ಲಿ ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ, ಹಿರಿಯ ಕಥೆಗಾರ ಡಾ. ಆರ್.ಜಿ. ಗುಂದಿ, ಮಹಾಂತೇಶ ರೇವಡಿ, ಪ್ರೊ. ಮೋಹನ ಹಬ್ಬು, ಗೋಪಾಲಕೃಷ್ಣ ನಾಯಕ ವಾಸರೆ, ಕೃಷ್ಣಾ ನಾಯಕ ಹಿಚಕಡ, ನಾಗೇಂದ್ರ ನಾಯಕ ತೊರ್ಕೆ, ನಾಗರಾಜ ಮಂಜಗುಣಿ, ರಮೇಶ ಗೌಡ ಶಿರೂರು, ಶ್ರೀಪಾದ ನಾಯ್ಕ, ಮಂಜಗುಣಿ, ಸಂತೋಷ ನಾಯ್ಕ ಬಾಳೆಗುಳಿ, ಬೋಳಾ ಗೌಡ, ಬೇಲೇಕೇರಿ, ಎಚ್.ಬಿ. ನಾಯಕ, ಕೆ. ರಮೇಶ, ವಸಂತ ನಾಯಕ ಸೂರ್ವೆ, ಸುರೇಶ ಎಸ್. ನಾಯ್ಕ ಅಸ್ಲೆಗದ್ದೆ, ರಾಜೇಶ ಮಿತ್ರಾ ನಾಯ್ಕ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.