ಅಂಕೋಲಾ ; ಸಮಾಜ ಸೇವೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿಯು ತಾಲೂಕಿನ ಹೊಸಗದ್ದೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕ್ರೀಡಾ ಸಾಮಗ್ರಿ ಹಾಗೂ ಪುಸ್ತಕಗಳನ್ನು ನೀಡಿ ತನ್ನ ಶೈಕ್ಷಣಿಕ ಪ್ರೇಮವನ್ನು ಪ್ರಚುರಪಡಿಸಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಲಾಯನ್ಸ್ ಝೋನ್ ಚೇರ ಪರ್ಸನ್ ಮಹಾಂತೇಶ ರೇವಡಿ ಮಾತನಾಡಿ ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಯಾವ ಪ್ರತಿಫಲ ಬಯಸದೇ ಮಾಡುವ ಸೇವಾ ಕಾರ್ಯವೇ ಸರ್ವಶ್ರೇಷ್ಠ ಸಮಾಜ ಸೇವೆಯಾಗಿದೆ. ಕನ್ನಡ ಶಾಲೆ ಉಳಿಸುವ–ಬೆಳೆಸುವ ಅಭಿಯಾನವನ್ನು ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿ ಹಮ್ಮಿಕೊಂಡಿರುವುದು ಶ್ಲಾಘನೀಯ ಸಂಗತಿ ಎಂದರು.
ಲಾಯನ್ಸ್ ಕ್ಲಬ್ ಕಾರ್ಯದರ್ಶಿ ಸದಾನಂದ ಶೆಟ್ಟಿ ಮಾತನಾಡಿ, ದೇವರ ಪೂಜೆಗಿಂತ ಸಮಾಜ ಸೇವೆಯೇ ಮಿಗಿಲಾಗಿದೆ ಎಂದರು.
ಹಸನ್ ಶೇಖ್, ಗಣಪತಿ ನಾಯಕ ಮಾತನಾಡಿದರು. ಮುಖ್ಯಾಧ್ಯಾಪಕ ಸಂಜೀವ ನಾಯಕ ಸ್ವಾಗತಿಸಿದರು. ಶಿಕ್ಷಕಿ ಸಾವಿತ್ರಿ ಸಭಾಹಿತ ವಂದಿಸಿದರು.
