ವರದಿ : ರಾಘು ಕಾಕರಮಠ.

ಅಂಕೋಲಾ ; ತಾಲೂಕಿನ ಬೇಲೆಕೇರಿಯಲ್ಲಿ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಅಂಕೋಲಾ ಪೊಲೀಸರು ದಾಳಿ ನಡೆಸಿ ಇಬ್ಬರು ಯವತಿಯರನ್ನು ರಕ್ಷಿಸಿ, ವೇಶ್ಯಾವಾಟಿಕೆ ನಡೆಸುತ್ತಿದ್ದ ಒರ್ವ ಹಾಗು ಗಿರಾಕಿಗಳೆಂದು ಸಂಶಯ ವ್ಯಕ್ತಪಡಿಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇಬ್ಬರು ಸಂತ್ರಸ್ತ ಯುವತಿಯರು ಬೆಂಗಳೂರು, ಬಳ್ಳಾರಿ ಮೂಲದವರೆಂದು ತಿಳಿದು ಬಂದಿದ್ದು, ಅವರನ್ನು ಅಂಕೋಲಾ ಠಾಣೆಗೆ ಕರೆ ತಂದು ಮಾಹಿತಿ ಪಡೆಯಲಾಗುತ್ತಿದೆ.

ಪ್ರಕರಣಕ್ಕೆ ಸಂಬAದಿಸಿದAತೆ ಮೊಬೈಲ್, ಬೈಕ್ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಸಿಪಿಐ ಸಂತೋಷ ಶೆಟ್ಟಿ ಸಮಗ್ರ ಮಾಹಿತಿ ಪಡೆದು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ.

ವೇಶ್ಯಾವಾಟಿಕೆ ಆರೋಪ ಅಡ್ಡೆಯಲ್ಲಿ ಒಟ್ಟು ಐವರು ಪುರುಷರಿದ್ದು, ಇಬ್ಬರು ಪರಾರಿಯಾಗಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಸಿಪಿಐ ಸಂತೋಷ ಶೆಟ್ಟಿ ಅವರಿಗೆ ದಾಳಿ ನಡೆಸಿದ ಸಂದರ್ಭದಲ್ಲಿ ತಮ್ಮನ್ನು ಬಿಟ್ಟು ಬಿಡುವಂತೆ ಪ್ರಭಾವಿ ರಾಜಕಾರಣಿಗಳಿಂದ ಒತ್ತಡ ಹಾಗೂ ಲಕ್ಷಾಂತರ ರೂಪಾಯಿಯ ಆಮಿಷ ಒಡ್ಡಿದರೂ ಸಹ, ಕೊರಳು ಪಟ್ಟಿ ಹಿಡಿದು ಆರೋಪಿಗಳನ್ನು ಠಾಣೆಗೆ ಕರೆ ತಂದು ದಕ್ಷತೆ ಮೆರೆದಿರುವದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.