ವರದಿ : ಬಸವೇಂದ್ರಯ್ಯ ಕುಲಕರ್ಣಿ
ಮುಂಡಗೋಡ : ಮುಸ್ಲಿಂ ಸಮುದಾಯದ ಖಬರಸ್ಥಾನದಲ್ಲಿ ಯಾರೋ ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡಿ ಅಲ್ಲಿರುವ ಗೋರಿಗಳನ್ನು ದುರುದ್ದೇಶದಿಂದ ಕಿತ್ತು ಗೋರಿಗಳ ಮೇಲೆ ಹಾಕಿದ್ದ ಪಾಟಿ ಕಲ್ಲುಗಳನ್ನು ಒಡೆದು ಬೀಸಾಕಿ ನಾಶ ಪಡಿಸಿದ ಘಟನೆ ತಾಲೂಕಿನ ಅಂದಲಗಿ ಗ್ರಾಮದಿಂದ ಹೋಗುವ ಸಾಲಗಾಂವ ರಸ್ತೆಯ ಪಕ್ಕದಲ್ಲಿರುವ ಖಬರಸ್ಥಾನದಲ್ಲಿ ನಡೆದಿದೆ.
ಮುಸ್ಲಿಂ ಸಮಾಜದ ಭಾವನೆಗಳಿಗೆ ಧಕ್ಕೆ ಬರುವಂತೆ ಘಟನೆ ನಡೆದಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಸಮಾಜದ ಮುಖಂಡರ ಅಶ್ರಪ್ ಅಲಿ ಮತ್ತಿಗಟ್ಟಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಿಎಸೈ ಯಳ್ಳಲಿಂಗ ಕಣ್ಣೂರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ
