ಅಂಕೋಲಾ : ಪಟ್ಟಣದ ಪ್ರತಿಷ್ಠಿತ ಶಾಂತಿನಿಕೇತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಪುಟಾಣಿ ಮಕ್ಕಳೆಲ್ಲ ಬಿಳಿ ಬಣ್ಣದ ಸಮವಸ್ತ್ರ ಧರಿಸಿ, ಯೋಗಬ್ಯಾಸ ನಡೆಸಿದರು.

ಶಿಕ್ಷಕಿಯರಾದ ಶೀತಲ್ ನಾಯ್ಕ, ಮಮತಾ ನಾಯ್ಕ, ಸಹನಾ ನಾಯಕ, ದಿವ್ಯಾ ಅನ್ವೇಕರ, ಶ್ರದ್ಧಾ ಆಚಾರ್ಯ ಎಲ್ಲಾ ಮಕ್ಕಳಿಗೆ ಯೋಗದ ಮಹತ್ವ ತಿಳಿಸಿ , ಆಸನದ ಬಗ್ಗೆ ತಿಳಿಹೇಳಿದರು.

ಈ ಸಂದರ್ಭದಲ್ಲಿ ಶಾಂತಿಕೇತನ ಟ್ರಸ್ಟ್ನ ಅಧ್ಯಕ್ಷ ಟಿ.ಬಿ.ನಾಯಕ, ವ್ಯವಸ್ಥಾಪಕ ನಿರ್ದೇಶಕ ಸಂಜು ಟಿ. ನಾಯಕ ಉಪಸ್ಥಿತರಿದ್ದರು.