ಅಂಕೋಲಾ : ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿ ಎಂದು ಹೇಳಿಕೊಂಡು, ಮೊಬೈಲ ಮೂಲಕ ಜೀವ ಬೆದರಿಕೆ ಹಾಗೂ ಬ್ಲಾಕಮೇಲ ಮಾಡಿದ ಪ್ರಕರಣಕ್ಕೆ ಸಂಬಂದಿದಂತೆ ಇಲ್ಲಿನ ತಹಸೀಲ್ದಾರ ಕಚೇರಿಯ ಒರ್ವ ನೌಕರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಅಂಕೋಲಾ ಪೊಲೀಸರು ಸಿಬಿಐ ಅಧಿಕಾರಿಯೆಂದು ಕರೆ ಮಾಡಿದ ಮೊಬೈಲ ನಂಬರನ ತಾಂತ್ರಿಕ ಮಾಹಿತಿಯನ್ನು ಕಲೆ ಹಾಕಿದಾಗ, ಪೊಲೀಸರೆ ಈ ಪ್ರಕರಣದಿಂದ ಹೌಹ್ಹಾರಿದ್ದಾರೆ.
ಏಕೆಂದರೆ ಈ ಮೊಬೈಲ ಪೊಲೀಸ್ ಠಾಣೆಯ ಪಕ್ಕದ ತಹಸೀಲ್ದಾರ ಕಚೇರಿಯ ಖಾಯಂ ನೌಕರನಿಂದಲೆ ಹೋಗಿರುವದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಸಿಪಿಐ ಸಂತೋಷ ಶೆಟ್ಟಿ ಈ ಮೊಬೈಲ ಬಳಸುತ್ತಿದ್ದ ನೌಕರನ್ನು ಗುರುವಾರ ಸಂಜೆಯಿಂದ ಠಾಣೆಗೆ ಕರೆಯಿಸಿ ತೀವ್ರ ವಿಚಾರಣೆ ನಡೆಸಿ ರಾತ್ರಿ ಮನೆಗೆ ಕಳುಹಿಸಿದ್ದಾರೆ.
ಇಂದು ಶುಕ್ರವಾರ ಮತ್ತೆ ಠಾಣೆಗೆ ವಿಚಾರಣೆಗೆ ಬರುವಂತೆ ಸೂಚಿಸಿರುವ ಠಾಣಾಧಿಕಾರಿ ಸಂತೋಷ ಶೆಟ್ಟಿ ಸಿಬಿಐ ಅಧಿಕಾರಿಯ ಪ್ರಕರಣದ ಅಸಲಿ ವೇಷಕ್ಕೆ ಪೈನಲ ಟಚ್ ನೀಡಲಿದ್ದಾರೆ.
ಲೋಕಾಯುಕ್ತ ಪ್ರಕರಣ ರಮೇಶ ನಾಯಕರಿಗೆ ಮುಳುವಾಯಿತೆ..?
ಜಮೀನೊಂದರ ಬದಲಿ ನಕ್ಷೆಯನ್ನು ತಯಾರಿಸಿಕೊಡಲು ಸರ್ವೆ ಅಧಿಕಾರಿ ಪುಟ್ಟಸ್ವಾಮಿ ಅವರು ಲಂಚ ಕೇಳಿದಾಗ ರಮೇಶ ನಾಯಕ ಅವರು ಲೋಕಾಯುತಕ್ಕೆ ದೂರು ನೀಡಿ ಲಂಚದ ಹಣದ ಸಮೇತ ಸರ್ವೆಯರನ್ನು ಬಂಧಿಸುವಲ್ಲಿ ಕಾರಣರಾಗಿದ್ದರು.
ಈ ಘಟನೆ ನಡೆದಿದ್ದು 2023 ಜನವರಿ 6 ರಂದು. ಅಂದಿನಿಂದ ರಮೇಶ ನಾಯಕ ಅವರು ಭೂ ಮಾಫಿಯಾ ಕರಾಳ ದೃಷ್ಟಿಯಲ್ಲೆ ಕಾಲ ಕಳೆಯುತ್ತ ಬರುವಂತಾಗಿತ್ತು.
ರಮೇಶ ನಾಯಕ ಅವರನ್ನು ಹೆದರಿಸಿ, ಈ ಪ್ರಕರಣದಿಂದ ಬಾಯಿ ಮುಚ್ಚಿಸಲು ಸಿಬಿಐ ಅಧಿಕಾರಿಯ ಪಾತ್ರ ಸೃಷ್ಟಿಯಾಯಿತೆ ಎಂದು ಪೊಲೀಸರು ಇನ್ನೊಂದು ದೃಷ್ಟಿಕೋನದಿಂದ ತನಿಖೆ ಚುರುಕುಗೊಳಿಸಿದ್ದಾರೆ.
ಬೆದರಿಕೆ ಕರೆ ಮಾಡಿದ ಮೊಬೈಲ ಸ್ವೀಚ್ಡ್ ಆಪ್ :
ಈ ಪ್ರಕರಣದ ಅಸಲಿಯತ್ತು ಭೇಧಿಸಲು ಮುಂದಾಗಿರುವ ಪೊಲೀಸರು ಕರೆ ಮಾಡಲು ಬಳಸಿದ ಸಿಮ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲು ಕಾರ್ಯಪ್ರವೃತ್ತರಾಗಿದ್ದಾರೆ.
ಆದರೆ ವಿಚಾರಣೆ ಬಂದ ಸರಕಾರಿ ನೌಕರ ಮಾತ್ರ ಇದನ್ನು ಇಲ್ಲಿಗೆ ನಿಲ್ಲಿಸಿ, ನನ್ನನ್ನು ಬಚಾವ್ ಮಾಡಿ ಎಂದು ತನಿಖಾಧಿಕಾರಿಗಳ ಮುಂದೆ ಅವಲೊತ್ತಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಅಂತೂ ಈ ಪ್ರಕರಣವು ತೀವ್ರ ಕೂತುಹಲ ಮೂಡಿಸಿದ್ದು, ಸಿಬಿಐ ಆಧಿಕಾರಿಯೆಂದು ಬೆದರಿಕೆ ಹಾಗೂ ಬ್ಲಾಕಮೇಲ ಪ್ರಕರಣ ಯಾವ ಹಾದಿಯಲ್ಲಿ ಸಾಗುವದೆಂದು ಕಾದು ನೋಡಬೇಕಿದೆ.
