ಅಂಕೋಲಾ : ಗುಜೋರಿಯೋ ಕರಾಟೆ ಡೋ ಅಸೋಸಿಯೇಷನ್ ಆಫ್ ಕರ್ನಾಟಕ ಡೋಜೋ (ಕ್ಲಾಸ್) ಅಂಕೋಲಾದ ಐವರು ವಿದ್ಯಾರ್ಥಿಗಳು ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿ ಬ್ಲಾಕ್ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಅಜ್ಜಿಕಟ್ಟಾದ ಹಿ. ಪ್ರಾ. ಶಾಲೆಯ 7 ನೇ ತರಗತಿಯ ವಿದ್ಯಾರ್ಥಿ ಭರತ ಎಸ್. ಹುಲಸ್ವಾರ, ಜೈ ಹಿಂದ್ ಆಂಗ್ಲ ಮಾಧ್ಯಮದ 8 ನೇ ತರಗತಿಯ ವಿದ್ಯಾರ್ಥಿ ಮನಹಾನ ಶಬ್ಬೀರ ಅಹಮದ್, ಮಿರ್ಜಾನ ಬಿ. ಜಿ. ಎಸ್. ಶಾಲೆಯ 6 ನೇ ತರಗತಿಯ ವಿದ್ಯಾರ್ಥಿ ಸೋನಾಕ್ಷಿ ಆರ್. ನಾಯ್ಕ, ಪಿಎಂ ಪ್ರೌಡಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಜಾಹ್ನವಿ ಎನ್. ಮೋರೆ ಹಾಗೂ ದಿನಕರ ದೇಸಾಯಿ ಸ್ಮಾರಕ ಪ್ರಾಥಮಿಕ ಶಾಲೆಯ 7 ನೇ ತರಗತಿಯ ಚೈತ್ರಾ ಆರ್. ನಾಯ್ಕ ಬ್ಲಾಕ್ ಬೆಲ್ಟ್ ಪಡೆದು ಸಾಧನೆ ಪ್ರಕಟಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಗುಜೋ ರಿಯೋ ಕರಾಟೆ ಡೋ ಅಸೋಸಿಯೇಷನ್ ಆಫ್ ಕರ್ನಾಟಕ ಅವರ ಆಶ್ರಯದಲ್ಲಿ ಸಂಘಟಿಸಿದ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿಗಳು ಉತ್ತೀಣರಾಗಿದ್ದಾರೆ. ಹಂಷಿ ಅನ್ನಪ್ಪ ಮಾರ್ಕಲ್ ಅವರು ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ವಿತರಿಸಿದರು. ಸಾಧನೆಗೈದ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಕರಾಟೆ ತರಬೇತಿದಾರ 4 ನೇ ಡಾನ್ ಬ್ಲಾಕ್ ಬೆಲ್ಟ್ ಶಾಂತರಾಮ ಎ. ಹುಲಸ್ವಾರ ನೀಲಂಪುರ ತರಭೇತಿ ನೀಡಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.