ಅಂಕೋಲಾ : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪರ್ಸನಲ್ಲಿ ಸಿಕ್ಕ ಸಾವಿರಾರು ರೂಪಾಯಿ ಹಣವನ್ನು ಮರಳಿ ಸಂಬಂಧಿಸಿದವರಿಗೆ ಮರಳಿಸಿ ಇಲ್ಲಿನ ಆಸ್ಪತ್ರೆಯ ಸಿಬ್ಬಂದಿ ನಿಖಿತಾ ಪೆಡ್ನೇಕರ ಪ್ರಾಮಾಣಿಕತೆ ಮೆರೆದಿದ್ದಾರೆ.

                ಗೋಕರ್ಣದ ಬೇಲೆಕಾನ್‌ಸುನೀಲ ಎನ್ನುವವರು ಸಾಗುತ್ತಿದ್ದ ವಾಹನ ಅಫಘಾತಗೊಂಡಿತ್ತು. ಅವರನ್ನು ತಕ್ಷಣ ಅಂಕೋಲಾದ ಸರಕಾರಿ ಆಸ್ಪತ್ರಗೆ ದಾಖಲಿಸಿದ್ದರು. ಅವರಿಗೆ ಕೂಡಲೆ ಹೆಚ್ಚಿನ ಚಿಕಿತ್ಸೆಗಾಗಿ ಅವರ ಸಹೋದರ ಸೂರಜ್ ನಾಯ್ಕ ಅವರು ಕುಮಟಾದ ಆಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ಪ್ಯಾಂಟ್ ಕಿಸೆಯಲ್ಲಿದ್ದ ಪರ್ಸ್ನ್ನು ಆಸ್ಪತ್ರೆಯ ಆವರಣದಲ್ಲೆ ಕಳೆದುಕೊಂಡಿದ್ದರು.

                ಶನಿವಾರ ಬೆಳಿಗ್ಗೆ ಆಸ್ಪತ್ರೆಯ ಕರ್ತವ್ಯಕ್ಕೆ ಆಗಮಿಸುತ್ತಿದ್ದ ನಿಖಿತಾ ಪೆಡ್ನೇಕರ ಅವರಿಗೆ ಈ ಪರ್ಸ್ ಕಂಡಿದೆ. ಪರ್ಸ್ನಲ್ಲಿ 11000 ರೂ ಹಣ ಹಾಗೂ ಡ್ರೆöÊವಿಂಗ್ ಲೈಸನ್ಸ್ ಇತ್ತು. ಸಿಕ್ಕ ಗುರುತಿನ ಚೀಟಿಯ ಆದಾರದ ಮೇಲೆ ಸೂರಜ್ ನಾಯ್ಕ ಅವರನ್ನು ಸಂಪರ್ಕಿಸಿ ಹಣವನ್ನು ಮರಳಿಸಿ ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದಾರೆ.

                ಸಂದರ್ಭಲ್ಲಿ ತಾಲೂಕಾಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂತೋಷಕುಮಾರ, ಸಿಬ್ಬಂದಿ ನಿತ್ಯಾನಂದ ನಾಯ್ಕ ಉಪಸ್ಥಿತರಿದ್ದರು.