ವರದಿ: ದಿನಕರ ನಾಯ್ಕ ಅಲಗೇರಿ

ಅಂಕೋಲಾ : ತಾಯಿ ಹಾಗೂ ಮಗಳು ಮನೆಯಿಂದ ನಾಪತ್ತೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಕೋಲಾದ‌ ಲಕ್ಷ್ಮೇಶ್ವರದ ಗಜಾಲಾ ಸೈಯ್ಯದ ಮಹಮ್ನದ ಇಕ್ಬಾಲ ಪಿರಜಾದೆ (43ವರ್ಷ) ಹಾಗೂ ಈಕೆಯ ಮಗ ಅರೀಜ್ ಸಯ್ಯದ್ ಮಹಮ್ನದ ಇಕ್ಬಾಲ ಪಿರಜಾದೆ ( 4 ವರ್ಷ 6 ತಿಂಗಳು) ನಾಪತ್ತೆಯಾದವರು.

ಪ್ರಕರಣವೇನು..?

ಅಂಕೋಲಾದ ಬೊಬ್ರವಾಡದ ಉರ್ದು ಶಾಲೆಯ ಹಿಂಬದಿಯವರಾದ
ಸೈಯ್ಯದ ಮಹಮ್ನದ ಇಕ್ಬಾಲ್ ಪಿರಜಾದೆ ಅವರು ಹಾಲಿ ಲಕ್ಷ್ಮೇಶ್ವರದಲ್ಲಿ ತನ್ಬ ಪತ್ನಿ ಗಜಾಲಾ ಹಾಗೂ ಮಗನೊಂದಿಗೆ ಲಕ್ಷ್ನೇಶ್ವರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.

ನವಂವರ 22 ರ ಬುಧವಾರದಂದು ಬಾಡಿಗೆ ಮನೆಯಿಂದ ಬೆಳಿಗ್ಗೆ 10-00 ರ ಸುಮಾರಿಗೆ ಯಾರಿಗೂ ಹೇಳದೆ ಕೇಳದೆ ತನ್ನ ಪತ್ನಿ ಮಗನನ್ನು ಕರೆದುಕೊಂಡು ಎಲ್ಲಿಯೋ ಹೋಗಿ ನಾಪತ್ತೆಯಾಗಿದ್ದಾಳೆ. ತನ್ನ ಪತ್ನಿ ಹಾಗೂ ಮಗುವನ್ನು ಹುಡುಕಿಕೊಡುವಂತೆ ಪತಿ ಮಹಮದ ಇಕ್ಬಾಲ ಪಿರಜಾದೆ ಪೊಲೀಸ್ ದೂರು ದಾಖಲಿಸಿದ್ದಾರೆ.

ಗಜಾಲಾ 5 ಪುಟ್ ಎತ್ತರವಿದ್ದು, ಹಿಂದಿ ಹಾಗೂ ಉರ್ದು ಭಾಷೆ ಬಲ್ಲವಳಾಗಿದ್ದು, ಗೋದಿ ಮೈಕಟ್ಟು,ಗೋಲು ಮುಖ, ಸದೃಡ ಮೈ ಕಟ್ಟು ಹೊಂದಿದ್ದಾಳೆ. ನಾಪತ್ತೆಯಾಗುವ ವೇಳೆಯಲ್ಲಿ ಗುಲಾಬಿ ಬಣ್ಣದ ಚೂಡಿದಾರ, ಕೆಂಪು ಬಣ್ಣದ ಪ್ಯಾಂಟ ಹಾಗೂ ಕೆಂಪು ಬಣ್ಣದ ವೇಲ್ ಧರಿಸಿದ್ದಾಳೆ.

ಹಾಗೆ ಮಗು 3 ಪೂಟ್ 6 ಇಂಚ್ ಎತ್ತರವಿದ್ದು, ಹಿಂದಿ ಹಾಗೂ ಉರ್ದು ಭಾಷೆ ಮಾತನಾಡುತ್ತಾಳೆ. ಬಿಳಿ ಮೈ ಬಣ್ಣ ಉದ್ದನೆಯ ಮುಖ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ನಾಪತ್ತೆಯಾದ ವೇಳೆಯಲ್ಲಿ ನೀಲಿ ಬಣ್ಣದ ಟೀಶರ್ಟ್ , ನೀಲಿ ಬಣ್ಣದ ಪ್ಯಾಂಟ ಧರಿಸಿರುತ್ತಾನೆ ಎಂದು
ಮಹಮ್ನದ ಇಕ್ಬಾಲ ಪಿರಜಾದೆ ತನ್ನ ದೂರಿನಲ್ಲಿ ವಿವರಿಸಿದ್ದಾರೆ.

ಇವರ ಬಗ್ಗೆ ಎಲ್ಲಾದರೂ ಮಾಹಿತಿ ಕಂಡು ಬಂದಲ್ಲಿ ಅಂಕೋಲಾ ಠಾಣೆಯ ಮೊಬೈಲ ಸಂಖ್ಯೆ 9480805250 _ಅಥವಾ 9480805268 ನಂಬರಗೆ ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.