
ನಾಪತ್ತೆಯಾದ ಅಧಿಕಾರಿಗಳು : ರದ್ದಾದ ಹಟ್ಟಿಕೇರಿ ಗ್ರಾಪಂನ ಗ್ರಾಮ ಸಭೆ
ಅಂಕೋಲಾ : ಗ್ರಾಮದ ಸಮಸ್ಯೆಗಳಿಗೆ ಪರಿಹಾರದ ಆಶಾಕಿರಣವಾಗಿ ಹಟ್ಟಿಕೇರಿ ಗ್ರಾಪಂನಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಭೆಯು ಅಧಿಕಾರಿಗಳ ಗೈರು ಕಾರಣಕ್ಕೆ ಗ್ರಾಮ ಸಭೆ ರದ್ದಾದ ಘಟನೆ ಮಂಗಳವಾರ ನಡೆದಿದೆ.
ಹಟ್ಟಿಕೇರಿ ಗ್ರಾಪಂ ಸಭಾಭವನದಲ್ಲಿ 2023-24 ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಸಭೆಯಲ್ಲಿ ಪಾಲ್ಗೊಳ್ಳಲು ಜಮಾಯಿಸಿದ್ದರು. ಗ್ರಾಪಂ ಅಧ್ಯಕ್ಷೆ ಹಾಗೂ ಸದಸ್ಯರು, ಗ್ರಾಪಂನ ಸಿಬ್ಬಂದಿಗಳು ಹಾಜರಿದ್ದರು. ಆದರೆ ಹೆಸ್ಕಾಂ, ಕೃಷಿ, ತೋಟಗಾರಿಕೆ, ಹಾಗೂ ಕುಡಿಯುವ ನೀರು (ಆರ್.ಎಸ್.ಡಬ್ಯೂ) ಇಲಾಖೆಗೆ ಸಂಬಂದಪಟ್ಟ ಅಧಿಕಾರಿಗಳ ಮಾತ್ರ ಸಭೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮ ಸಭೆ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಮದ್ಯಾಹ್ನ 12-15 ಕಳೆದರೂ ಗ್ರಾಮ ಸಭೆಯತ್ತ ಅಧಿಕಾರಿಗಳು ಮುಖ ತೋರಿಸದೇ ಇರುವದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಸಭೆಗೆ ಪ್ರಮುಖ ಇಲಾಖೆಯ ಅಧಿಕಾರಿಗಳು ಹಾಜರಾಗದೇ ಇರುವದರಿಂದ ಗ್ರಾಮ ಸಭೆಯನ್ನು ನೆಡಸದಂತೆ ನಾಗರಿಕರು ಪಟ್ಟು ಹಿಡಿದರು.
ಎಲ್ಲ ಇಲಾಖೆಗಳ ಸಮಕ್ಷಮದಲ್ಲಿ ಸಭೆ ನಡೆಯಬೇಕು ಎದು ಜನರು ಒಕ್ಕೊರಲಿನಿಂದ ಆಗ್ರಹಿಸಿದರಿಂದ ನೋಡೆಲ ಅಧಿಕಾರಿ ಸಿಡಿಪಿಓ ಸವಿತಾ ಶಾಸ್ತ್ರಿಮಠ, ಗ್ರಾಪಂ ಅಧ್ಯಕ್ಷೆ ನಿಶಾ ನಾಗರಾಜ್ ನಾಯ್ಕ, ಸದಸ್ಯರಾದ ವಿನೋದ ನಾಯ್ಕ, ಶಾಂತೇಶ ನಾಯ್ಕ, ಅನುರಾಧಾ ನಾಯ್ಕ, ವಸಂತ ಗೌಡ, ರಾಜು ಗೌಡ, ನೀಲಾ ಆಗೇರ, ಇಂದಿರಾ ಲಾಂಚೇಕರ, ಪಿಡಿಓ ಲೀಲಾ ಆಗೇರ, ಕಾರ್ಯದರ್ಶಿ ಮೀನಾಕ್ಷಿ ಗೌಡ ಅವರು ಗ್ರಾಮಸ್ಥರು ಅಭಿಪ್ರಾಯ ಪಡೆದು ವಿಶೇಷ ಠರಾವು ಅನುಮೋದಿಸಿ ಮುಂದಿನ ದಿನ ಪಡಿಸುವವರೆಗೆ ಸಭೆಯನ್ನು ರದ್ದು ಪಡಿಸಿ, ಮುಂದೂಡಲಾಯಿತು.
ಗ್ರಾಮದ ಪ್ರಮುಖ ಪ್ರಮೋದ ಶಿವಾ ನಾಯ್ಕ ಮಾತನಾಡಿ ಅಧಿಕಾರಿಗಳ ಅಸಡ್ಡೆತನದಿಂದಾಗಿ ಗ್ರಾಮ ಸಭೆ ರದ್ದಾಗುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ ಸರಿಯಲ್ಲ. ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಲ್ಲಿನ ಬಡ ಜನರು ಒಂದು ದಿನದ ಕೂಲಿ ಬಿಟ್ಟು ಬಂದಿದ್ದರು. ಇತಂಹ ವಿದ್ಯಮಾನ ಮತ್ತೆ ಮರುಕಳಿಸಲು ಬಿಡಬಾರದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ದೇವೇಂದ್ರ ನಾಯ್ಕ, ಮೋಹಿನಿ ನಾಯ್ಕ, ಲಕ್ಷ್ಮೀದಾಸ ಪೈ, ನಾರಾಯಣ ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.


