ಹಳಿಯಾಳ : ತಂತ್ರಜ್ಞಾನ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ತಾಲೂಕಿನ ಹವಗಿ ಗ್ರಾಮದಲ್ಲಿನ ಉನ್ನತೀಕರಿಸಿದ ಸರ್ಕಾರಿ ಐಟಿಐ ಕಾಲೇಜನ್ಬು ಲೋಕಾರ್ಪಣೆಗೊಳಿಸಿ ಮಾತನಾಡಿ, ದೇಶದಲ್ಲಿ ಈಗ ಜಾರಿಯಲ್ಲಿರುವ ಐಟಿ ನೀತಿ, ಉದ್ಯಮ ನೀತಿ ಮತ್ತು ಇಲೆಕ್ಟ್ರಾನಿಕ್ ವೆಕಲ್ಸ್ ನೀತಿಯನ್ನು ಮೊದಲು ಜಾರಿಗೊಳಿಸಿದ್ದೆ ಕರ್ನಾಟಕದಲ್ಲಿ. ಈ ಎಲ್ಲಾ ಯೋಜನೆಗಳನ್ನು ನಾನು ಬೃಹತ್ ಕೈಗಾರಿಕಾ ಸಚಿವರಾಗಿದ್ದಾಗ ನಿಮ್ಮೆಲ್ಲರ ಸಹಕಾರ ಆಶೀರ್ವಾದದಿಂದ ಜಾರಿಗೊಳಿಸಿದ್ದೆ ಎಂದು ನೆನಪಿಸಿ ಕೊಂಡರು.ಜಿಲ್ಲೆಯಲ್ಲಿ ಏಳು ಐಟಿಐ ಕಾಲೇಜುಗಳು ಉನ್ನತೀಕರಿಸಲಾಗಿದ್ದು, ಅದರಲ್ಲಿ ಮೂರು ಐಟಿಐ ಕಾಲೇಜುಗಳು ಹಳಿಯಾಳ ವಿಧಾನ ಸಭಾ ಕ್ಷೇತ್ರದಲ್ಲಿವೆ ಎಂದರು.
ಕೈಗಾರಿಕಾ ವಲಯದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಕ್ರಾಂತಿಗಳನ್ನು ಅವಲಂಬಿಸಿ ನೀಡಲಾಗುತ್ತಿರುವ ನೂತನ ಕೌಶಲ್ಯ ಅವಿಷ್ಕಾರಗಳ ಈ ತರಬೇತಿಯ ಸದುಪಯೋಗ ವನ್ನು ಯುವಸಮೂಹ ಪಡೆಯಬೇಕು ಎಂದರು.
ಉಪನ್ಯಾಸಕ ಆರ್
ಬಿ.ಪತ್ತಾರ ರಾಜ್ಯ ಸರ್ಕಾರ ಮತ್ತು ಟಾಟಾ ಮತ್ತು ಇತರ 20 ಉದ್ತಮಗಳ ಸಹಭಾಗಿತ್ಯದಲ್ಲಿ ಕೈಗೊಂಡಿರುವ ಐಟಿಐ ಉನ್ನತೀಕರಣದ ಸಮಗ್ರ ವಿವರವನ್ನು ನೀಡಿದರು.
ಐಟಿಐ ಪ್ರಾಚಾರ್ಯ ರವೀಂದ್ರನಾಥ ಶಿಗ್ಗಾಂವಕರ, ಜಿ.ಪಂ ಮಾಜಿ ಉಪಾಧ್ಯಕ್ಷ ಸಂತೀಷ ರೇಣಕೆ, ತಾಪಂ ಮಾಜಿ ಅಧ್ಯಕ್ಷ ದೇಮಾಣಿ ಶಿರೋಜಿ, ಪುರಸಭಾ ಉಪಾಧ್ಯಕ್ಷೆ ಸುವರ್ಣ ಮಾದರ, ಸದಸ್ಯರಾದ ನುಸ್ರತ ಬಸ್ಸಾಪುರ, ದ್ರೌಪದಿ ಅಗಸರ, ಶಮೀಮಬಾನು ಜಂಬುವಾಲೆ, ನಿರ್ಮಿತಿ ಇಂಜಿನಿಯರ್ ಗಂಗಾಧರ ಕುಂಬಾರ ಇದ್ದರು.
ಉಪನ್ಯಾಸಕ ಮಹಾಲಿಂಗೇಶ ಓಶೀಮಠ ಕಾರ್ಯಕ್ರಮ ನಿರ್ವಹಿಸಿದರು.
