ಅಂಕೋಲಾ. : ಹಾರುವ ಅಪರೂಪದ ಗಿರಿ ಮೀನು (ಹಕ್ಕಿ ಮೀನು) ಭಾವಿಕೇರಿಯ ಕಡಲ ಕಿನಾರೆಯಲಿ ಶುಕ್ರವಾರ ಮೀನುಗಾರದ ಬಲೆಗೆ ಬಿದ್ದು ಗಮನ ಸೆಳೆದಿದೆ.

ಭಾರಿ ಅಪೂರೂಪದ ಹಾಗೂ ಗಿರಿ ಮೀನುಗಳಲ್ಲೆ ಅತಿ ದೊಡ್ಡದಾದ ( 1.5 ಅಡಿ ಉದ್ದದ ) ಗಿರಿ ಮೀನು ಆಳ ಸಮುದ್ರದ ಪ್ರದೇಶದಲ್ಲಿ ಕಾಣು ಸಿಗುತ್ತದೆ. ಆದರೆ ಕಡಲ ಕಿನಾರೆಯ ಸಮೀಪದಲ್ಲೆ ಮೀನು ದೊರೆತಿದ್ದು ಕೂತೂಹಲಕ್ಕೆ ಕಾರಣವಾಗಿದೆ.

ಈ ಮೀನು ಸಮುದ್ರ ಮಟ್ಟದಿಂದ 50 ಮೀ ನಷ್ಟು ದೂರ ಹಕ್ಕಿಯಂತೆ ಹಾರುವ ವೈಶಿ಼ಷ್ಠತೆ ಹೊಂದಿದೆ. ಸಮುದ್ರದ ಮೇಲ್ಮಟ್ಟದಲ್ಲಿ ಹಾರಲು ಅನೂಕೂಲವಾಗುವಂತೆ ಹಕ್ಕೆಯಂತೆ ರಕ್ಕೆಯು ಹೊಂದಿದ್ದು ಅತಿ ಚುರುಕು ಮೀನುಗಳಲ್ಲಿ ಬಂದಾಗಿದೆ.