ಅಂಕೋಲಾ : ಪುರಸಭೆಯ 17 ನೇ (ಗುಡಿಗಾರಗಲ್ಲಿ) ವಾರ್ಡ್ನಲ್ಲಿ ನಡೆಯಲಿರುವ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಹಳೆ ಬಜಾರಿನ ವಿಶ್ವನಾಥ ಟಿ. ನಾಯ್ಕ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿಯಾಗಿರುವ ವಿಶ್ವನಾಥ ನಾಯ್ಕ ಸ್ನೇಹಜೀವಿ. ತನ್ನದೇ ಆದ ಸ್ನೇಹಿತರ ಬಳಗವನ್ನು ಹೊಂದಿರುವ ವಿಶ್ವನಾಥ ಮಾನವೀಯ ಮನುಷ್ಯ. ತನ್ನ ಸಹಾಯ ಹಾಗೂ ಸಹಕಾರದ ಮೂಲಕ ಜನಮನ ಗೆದ್ದಿರುವ ವಿಶ್ವನಾಥ ನಾಯ್ಕ ಎರಡು ಭಾರಿ ಪುರಸಭೆಯ ಸದಸ್ಯರಾಗಿ ಆಯ್ಕೆಯಾದವರಾಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ತಮ್ಮ ಪುರಸಬೆಯ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿ, ಬಿಜೆಪಿಗೆ ಸೇರಿದ್ದ ವಿಶ್ವನಾಥ, ಕಮಲ ಪಾಳಯಕ್ಕೆ ಬಲ ತುಂಬಲು ಕಾರಣೀಕರ್ತರಾಗಿದ್ದರು. ಹಳೇ ಬಜಾರಿನ ಶ್ರೀ ವಿಘ್ನೇಶ್ವರ ನಾಟ್ಯ ಮಂಡಳಿಯನ್ನು ಕಳೆದ ೩ ದಶಕಗಳ ಕಾಲದಿಂದ ಯಶಸ್ವಿಯಾಗಿ ಮುನ್ನೆಡಿಸಿಕೊಂಡು ಬಂದು ಧಾರ್ಮಿಕ ಕ್ಷೇತ್ರ, ಸಾಮಾಜಿಕ ಕ್ಷೇತ್ರಕ್ಕೆ ತಮ್ಮ ಕೊಡುಗೆ ಪ್ರಕಟಿಸುತ್ತ ಬಂದಿದ್ದಾರೆ.
ವಿಶ್ವನಾಥ ನಾಯ್ಕ ಅವರ ತಾಯಿ ಗೀರಿಜಾ ತುಕ್ಕಪ್ಪಾ ನಾಯ್ಕ ಪಟ್ಟಣ ಪಂಚಾಯತದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ವಿಶ್ವನಾಥ ನಾಯ್ಕ ಅವರು ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ, ದಹಿಂಕಾಲ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಎಲೆಮರೆಯ ಕಾಯಿಯಂತೆ ಗುರುತಿಸಿಕೊಂಡು ಜನಪ್ರೀಯ ವ್ಯಕ್ತಿತ್ವಕ್ಕೆ ಕನ್ನಡಿಯಾಗಿದ್ದಾರೆ.
ವಿಶ್ವನಾಥ ನಾಯ್ಕ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಶಾಸಕಿ ರೂಪಾಲಿ ನಾಯ್ಕ, ಬಿಜೆಪಿ ಅಂಕೋಲಾ ತಾಲೂಕಾಧ್ಯಕ್ಷ ಸಂಜಯ ನಾಯ್ಕ. ಭಾವಿಕೇರಿ, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಣಿ ಸದಸ್ಯ ರಾಜೇಂದ್ರ ನಾಯ್ಕ, ಪುರಸಭೆಯ ಮಾಜಿ ಸದಸ್ಯ ಕೃಷ್ಣಕುಮಾರ ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
