ಅಂಕೋಲಾ : ತಾಲೂಕಿನ ಜಮಗೋಡದ ಬೊಳೆಯಲ್ಲಿ ಮಂಗಳವಾರ ನಡೆದ ಗೂಳಿ ಕಾಳಗವು ಸಾರ್ವಜನಿಕರನ್ನು ರೋಮಾಂಚನಗೊಳಿಸಿತು.

ಸತತ 3 ಘಂಟೆಯ ದೀರ್ಘ ಕಾಲ ನಡೆದ ಗೂಳಿ ಕಾಳಗವನ್ನು ನೋಡಲು ಜನರು ತಂಡೋಪತAಡವಾಗಿ ನರೆದಿದ್ದರು. ಮುದ್ಯಾಹ್ನ 11-30 ಘಂಟೆಗೆ ಪ್ರಾರಂಭಗೊA ಗೂಳಿ ಕಾಳಗವು ಮದ್ಯಾಹ್ನ 2-30 ರವರೆಗೂ ಮುಂದುವರೆದಿತ್ತು. ಹಿಚ್ಕಡದ ರಂಜನ ನಾಯಕ ಅವರು ನೀಡಿದ ಮಾಹಿತಿಯಂತೆ ಪತ್ರಿಕೆ ಸ್ಥಳಕ್ಕೆ ಹೋದಾಗ ನೆರೆದ ಸಾರ್ವಜನಿಕರೆಲ್ಲರೂ ಆತಂಕದಿAದಲೇ ಕಾಳಗವನ್ನು ನೊಡುತ್ತ ಪುಕ್ಕಟ್ಟೆ ಮನರಂಜನೆ ಅನುಭವಿಸುತ್ತಿದ್ದರು.

ಈ ಗೂಳಿಗಳು ತಮ್ಮ ಕಾಳಗವನ್ನು ಮುಂದುವರೆಸುತ್ತಾ ಜಮಗೋಡದ ಬೊಳೆ ಕೇರಿಯಲ್ಲಿ ಆತಂಕಮಯ ವಾತಾವರಣ ಸೃಷ್ಟಿಸಿದ್ದವು. ರಸ್ತೆಯಲ್ಲಿ ಈ ಗೂಳಿಗಳು ರಸ್ತೆಯಲ್ಲೆ ಕಾಳಗಕ್ಕೆ ನಿಂತಿದ್ದರಿAದ, ಪಾದಾಚಾರಿಗಳಿಗೆ, ಸವಾರರಿಗೆ ವಿದ್ಯಾರ್ಥಿಗಳಿಗೆ ತೊಡುಕುಂಟಾಯಿತು. ಅಂತೂ ಇಂತೂ ಇಲ್ಲಿನ ನಾಗರಿಕರೆ ಗೂಳಿಗಳನ್ನು ಬೆದರಿಸಿ ಕಾಳಗವನ್ನು ತಪ್ಪಿಸಿ ನೆಮ್ಮದಿಗೆ ಕಾರಣರಾದರು.