ರಾಘು ಕಾಕರಮಠ.

ಅಂಕೋಲಾ : ನೀವು ಮಾವಿನಕಾಯಿ, ನಿಂಬೆಕಾಯಿ, ಕಂಚಿಕಾಯಿಯ ಉಪ್ಪಿನಕಾಯಿಯ ಸವಿಯನ್ನು ನೋಡಿರಬಹುದು. ಆದರೆ ಅಂಕೋಲಾದಲ್ಲಿ ಸಿಗಡಿ ಮೀನಿನ ಉಪ್ಪಿನ ಕಾಯಿಯು ಬಾಯಿಗೆ ಸವಿಯನ್ನು ನೀಡುತ್ತ ಗಮನ ಸೆಳೆದಿದೆ. ಅಂಕೋಲಾದಲ್ಲಿ ತಯಾರಾದ ಈ ಸಿಗಡಿ ಉಪ್ಪಿನ ಕಾಯಿ ( PRAWNS PICKLE ) ಈಗ ಲಂಡನ್ ವಾಸಿಗಳಿಗೂ ( londan country ) ಇಷ್ಟವಾಗಿದ್ದು ಅಲ್ಲಿಯ ಜನರಿಗೆ ಬಹು ಇಷ್ಟವಾದ ಖಾದ್ಯವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಹೌದು.. ಊಟದೊಂದಿಗೆ ಉಪ್ಪಿನಕಾಯಿ ಇದ್ದರಷ್ಟೇ ಊಟ ಪರಿಪೂರ್ಣ. ಹೀಗಾಗಿ ಉಪ್ಪಿನ ಕಾಯಿಯ ರುಚಿಗೆ ಮನ ಸೋಲದವರಿಲ್ಲ. ನಾನಾ ರೀತಿಯ ಉಪ್ಪಿನ ಕಾಯಿಗಳು ಅವರವರ ಇಷ್ಠಕ್ಕೆ ತಕ್ಕಂತೆ ನಾಲಿಗೆಗೆ ರುಚಿ ನೀಡುತ್ತದೆ. ಆದರೆ ಮಾಂಸಹಾರವಾದ ಸಿಗಡಿ (ಶೆಟ್ಲಿ) ಉಪ್ಪಿನ ಕಾಯಿಯ ಸ್ವಾದವು ಸಹ ಜನರನ್ನು ಆಕರ್ಷಿಸಿಸುತ್ತಿದೆ.

ಸಿಗಡಿ ಉಪ್ಪಿನಕಾಯಿಯನ್ನು ಅಂಕೋಲಾದಲ್ಲಿ ಕಳೆದ 7-8 ವರ್ಷಗಳಿಂದ ಶೋಭಾ ಹರಿಕಾಂತ ಅವರು ಸಿದ್ಧಪಡಿಸುತ್ತಿದ್ದಾರೆ. ಅನೇಕ ಜನರು ಸಿಗಡಿ ಉಪ್ಪಿನ ಕಾಯಿಯ ರುಚಿಯನ್ನು ಸವಿದು, ಆರ್ಡರ್ ನೀಡಿ ಉಪ್ಪಿನ ಕಾಯಿಯನ್ನು ಒಯ್ಯುತ್ತಿದ್ದಾರೆ.

ಲಂಡನ್ನಲ್ಲಿ ಅಂಕೋಲೆ ಸಿಗಡಿ ಉಪ್ಪಿನಕಾಯಿ:

ಲಂಡನ ದೇಶದ ಹೈಟೆಕ್ ಆಸ್ಪತ್ರೆಯಲ್ಲಿ ಶೂಶ್ರಷಕಿಯಾಗಿ ಸೇವೆ ಸಲ್ಲಿಸುತ್ತಿರುವÀ ಉಕ ಜಿಲ್ಲೆಯವರೇ ಆದ ಚೈತ್ರಾ ಕುವಾಳೇಕರ ಅವರು ಅಲ್ಲಿಯ ಜನರಿಗೆ ಸಿಗಡಿ ಉಪ್ಪಿನಕಾಯಿಯನ್ನು ಪರಿಚಯಿಸಿದ್ದರು. ಅದು ಈಗ ಅಲ್ಲಿಯ ಜನರಿಗೆ ಬಹು ಇಷ್ಟವಾದ ಖಾದ್ಯವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಸಿಗಡಿ ಉಪ್ಪಿನ ಕಾಯಿಗೆ ಮನ ಸೋತ ಲಂಡನ್ ವಾಸಿಗಳು ತಮಗೆ ಇಷ್ಟವಾದ ಆಹಾರವನ್ನು ಚೈತ್ರಾ ಕುವಾಳೇಕರ ಅವರಿಂದ ತರಿಸಿಕೊಂಡು ಸ್ವಾದ ಸವಿಯುತ್ತಿದ್ದಾರೆ.

ಶೋಭಾ ಅವರು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ್ ಅವರು ಸ್ನೇಹಕುಂಜ ಸಂಸ್ಥೆಯ ಮೂಲಕ ನೀಡಿದ ತರಬೇತಿಯನ್ನು ಪಡೆದುಕೊಂಡಿದ್ದರು. ಸ್ವ ಉದ್ಯೋಗವನ್ನು ಮಾಡಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿರುವ ಶೋಭಾ ಅವರು ಸಿಗಡಿ ಉಪ್ಪಿನ ಕಾಯಿಯ ಮೂಲಕ ದೇಶದ ಗಮನ ಸೆಳೆಯುವಂತಾಗಿದ್ದಾರೆ. ಉಪ್ಪಿನಕಾಯಿ ಬೇಕಾದಲ್ಲಿ 9902043452 ನಂಬರಗೆ ಸಂಪರ್ಕಿಸಬಹುದಾಗಿದೆ.

ನಾನು ಬಿ.ಎಸ್ಸಿ ನರ್ಸಿಂಗ್ ಮಾಡುವ ಕಾಲೇಜು ದಿನಗಳಲ್ಲಿಯೇ ಸಿಗಡಿ ಉಪ್ಪಿನಕಾಯಿಯನ್ನು ಇಷ್ಟ ಪಡುತ್ತಿದ್ದೆ. ಲಂಡನನಲ್ಲಿ ನನಗೆ ಸೇವೆ ಸಲ್ಲಿಸಲು ಅವಕಾಶ ದೊರೆತಾದ ನಾನು ಊಟಕ್ಕೆಂದು ಇಲ್ಲಿನ ಸಿಗಡಿ ಉಪ್ಪಿನ ಕಾಯಿಯನ್ನು ಒಯ್ದಿದ್ದೆ. ಇದರ ಸವಿಯನ್ನು ಲಂಡನ ವಾಸಿಗಳು ಸವಿದಿದ್ದರು. ಈ ಉಪ್ಪಿನ ಕಾಯಿಗೆ ಲಂಡನ ವಾಸಿಗಳು ಮನ ಸೋತರಿಂದ ಉಪ್ಪಿನ ಕಾಯಿಯನ್ನು ತರಿಸಿಕೊಂಡು ಇಲ್ಲಿಯ ಜನತೆಗೆ ನೀಡುತ್ತೀದ್ದೆನೆ.

 ಚೈತ್ರಾ ಕುವಾಳೇಕರ

ಸ್ಥಳೀಯ ಖಾದ್ಯ ಇಂದು ವಿದೇಶಮಟ್ಟದಲ್ಲಿ ಪರಿಚಯಗೊಂಡಿರುವುದು ನನ್ನಲ್ಲಿ ಖುಷಿ ತಂದಿದೆ. ಸಿಗಡಿ (ಶೆಟ್ಲಿ)ಯ ಹಾಗೂ ಅದಕ್ಕೆ ಬಳಸುವ ಸಾಮಗ್ರಿಗಳ ದರವು ದುಬಾರಿಯಾಗಿದೆ. ಆದರೂ ಸಹ ಉಪ್ಪಿನಕಾಯಿಯ ತಾಯಾರಿಕೆಯನ್ನು ಕೈ ಬಿಟ್ಟಿಲ್ಲ. ಚೈತ್ರಾ ಕುವಾಳೇಕರ ಅವರಿಂದ ಅಂಕೋಲೆಯ ಉಪ್ಪಿನ ಕಾಯಿ ವಿಧೇಶದಲ್ಲಿ ಘಮಘಮಿಸುವಂತಾಗಿದೆ.

 ಶೋಭಾ ಹರಿಕಾಂತ

ಸಿಗಡಿಯ ಉಪ್ಪಿನ ಕಾಯಿಯನ್ನು ಆರು ತಿಂಗಳ ಕಾಲ ಫ್ರಿಜ್ ಇಲ್ಲದೇ ಇಡಬಹುದು. ಬಾಟಲ ಒಳಗೆ ಗಾಳಿ ಹೋಗದಂತೆ ಮುಚ್ಚಳವನ್ನು ಹಾಕಿರಬೇಕು. ಸಮುದ್ರ ಹಾಗೂ ಜಲ ಮಾಲಿನ್ಯದ ಪರಿಣಾಮವಾಗಿ ಸಿಗಡಿಯ ಕೃಷಿಯು ಅವನತಿಯನ್ನ ಸಾಗಿತ್ತಿರುವದಕ್ಕೆ ಪರಿಸರ ತಜ್ಷರು ಆತಂಕ ವ್ಯಕ್ತಪಡಿದ್ದಾರೆ.