ಅಂಕೋಲಾ : ಕೇಣಿಯ ಶ್ರೀ ದತ್ತಾತ್ರೇಯ ದೇವರ ಪಲ್ಲಕಿ ಮತ್ತು ರಥೋತ್ಸವವು ಭಾನುವಾರದಂದು ಸಂಭ್ರಮದಿ0ದ ನಡೆಯಿತು.
ಶ್ರೀ ದೇವರನ್ನು ದೇವಸ್ಥಾನದಿಂದ ಪಲ್ಲಕಿಯಲ್ಲಿ ವಿರಾಜಮಿಸಿ, ಅಲ್ಲಿಂದ ಶ್ರೀ ಕೋಟೆ ನರಸಿಂಹ ದೇವಸ್ಥಾನಕ್ಕೆ ಅಲ್ಲಿಂದ ನಾಗದೇವತಾ ಕಟ್ಟೆಗೆ ತಂದು, ಅಲ್ಲಿಂದ ರಥದ ಮೂಲಕ ಶ್ರೀ ಮದ್ದಲೇಶ್ವರ ದೇವಸ್ಥಾನ ಹಾಗೂ ಗಾಬಿತ ಕೇಣಿಗೆ ಸಾಗಿ ಅಲ್ಲಿಂದ ಮೂಲ ದೇವಸ್ಥಾನಕ್ಕೆ ಶ್ರೀ ಧತ್ತಾತ್ರೇಯ ದೇವರ ದೇವರ ರಥವು ಸಾಗಿ ಬಂದಿತು.
ಗ್ರಾಮದಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು. ಶ್ರೀ ದೇವರಿಗೆ ಆರತಿ, ಸಂಕಲ್ಪಿತ ಹರಕೆಗಳನ್ನು ಭಕ್ತಾಧಿಗಳು ಸಮರ್ಪಿಸಿ ಧನ್ಯತೆ ಮೆರೆದರು. ಈ ಸಂದರ್ಭದಲ್ಲಿ ಶ್ರೀ ದತ್ತಾತ್ರೇಯ ದೇವಸ್ಥಾನದ ಅಧ್ಯಕ್ಷ ರವಿ ತಿಮ್ಮಪ್ಪ ನಾಯ್ಕ, ಉಪಾಧ್ಯಕ್ಷ ಗಜಾನನ ಆರ್. ನಾಯ್ಕ, ಕಾರ್ಯದಶಿ ಮೋಹನ ಎನ್. ನಾಯ್ಕ ಸೇರಿದಂತೆ, ಸಮಿತಿಯ ಇನ್ನಿತರ ಪದಾಧಿಕಾರಿಗಳು, ಸದಸ್ಯರು, ಊರ ನಾಗರಿಕರು ಉಪಸ್ಥಿತರಿದ್ದರು.
