ಅಂಕೋಲಾ ; ದಾವಣಗೆರೆಯಲ್ಲಿ ನಡೆದ ಪೂರ್ವ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ ಸ್ಪರ್ಧೆಯಲ್ಲಿ ಸಿಪಿಐ ಶ್ರೀಧರ ಎಸ್. ಆರ್. ಅವರು ಅತ್ತುತ್ಯಮ ಸಾಧನೆ ಪ್ರಕಟಿಸಿ ಪೊಲೀಸ್ ಇಲಾಖೆಯ ಖದರ್ ಇನ್ನಷು ಹೆಚ್ಚಿಸುವಲ್ಲಿ ಕಾರಣರಾಗಿದ್ದಾರೆ.

ಎರಡು ದಿನಗಳ ಕಾಲ ನಡೆದ ಪೊಲೀಸ್ ವೃತ್ತಿಪರತೆಗೆ ಸಂಬ0ಧಿಸಿದ ” ಪೂರ್ವ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಪ್ರಥಮ ಸ್ಥಾನ -03, ದ್ವಿತೀಯ ಸ್ಥಾನ -01, ತೃತೀಯ ಸ್ಥಾನ -01 ಪಡೆದು ತಮ್ಮ ಕ್ರೀಯಾಶೀಲತೆಯನ್ನು ಪ್ರಕಟಿಸಿದ್ದಾರೆ. ಸಾಧನೆಗೈದ ಸಿಪಿಐ ಶ್ರೀಧರ ಅವರಿಗೆ ದಾವಣಗೆರೆಯ ಪೂರ್ವ ವಲಯದ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ. ಕೆ. ತ್ಯಾಗರಾಜನ್ ಪ್ರಶಸ್ತಿ ನೀಡಿ ಗೌರವಿಸಿದರು.
ಸಿಪಿಐ ಶ್ರೀಧರ ಅವರು ಅಂಕೋಲಾದ ಠಾಣೆಯಲ್ಲಿ ಪಿಎಸೈ ಆಗಿ ಹಾಗೂ ಬೇಲೆಕೇರಿಯ ಕರಾವಳಿ ಕಾವಲು ಪಡೆಯ ಠಾಣೆಯಲ್ಲಿ ಪೊಲೀಸ್ ನೀರಿಕ್ಷಕರಾಗಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯೊಂದಿಗೆ ಕಾರ್ಯ ನಿರ್ವಹಿಸಿ ಜನಪ್ರೀಯ ಅಧಿಕಾರಿಯಾಗಿ ಹೆಸರು ಗಳಿಸಿದ್ದರು. ಪ್ರಸ್ತುತ ಶ್ರೀಧರ ಅವರು ಹಾನಗಲದ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.
ಪೊಲೀಸ್ ವೃತ್ತಿ ನೈಪುಣ್ಯತೆಯೊಂದಿಗೆ ಕೈಗೊಳ್ಳಬೇಕಾದ ವೈಜ್ಞಾನಿಕ ಕಾನೂನು ತನಿಖೆಯ ವಿವಿಧ ಮಜಲುಗಳು, ಕಾನೂನು ಜ್ಞಾನ, ಸಾಕ್ಷಿಗಳ ಸಂಗ್ರಹದಲ್ಲಿ ನೈಪುಣ್ಯತೆ, ಬೆರಳಚ್ಚು ತನಿಖೆ ಸೇರಿದಂತೆ ಹಲವು ಮಹತ್ವದ ಪರೀಕ್ಷೆಯಲ್ಲಿ ಸಿಪಿಐ ಶ್ರೀಧರ ಅತ್ಯುತ್ತಮವಾಗಿ ತಮ್ಮ ಸಾಧನೆ ಪ್ರಕಟಿಸಿ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ.
