ರಾಘು ಕಾಕರಮಠ.
ಇಲ್ಲಿಯ ರಾಷ್ಟಿçÃಯ ಹೆದ್ದಾರಿಯಲ್ಲಿ ಹೊಸ ವರ್ಷದ ಮೊದಲ ದಿನದಂದು ಪೊಲೀಸರು ಗುಲಾಬಿ ಹೂ ಹಿಡಿದು ನಿಂತಿದ್ದರು. ಹೆಲ್ಮೆಟ್ ಧರಿಸದೇ ಇದ್ದ ಸವಾರರು ತಮಗೆಲ್ಲಿ ಪೊಲೀಸರು ಪೈನ್ (ದಂಡ) ಹಾಕುತ್ತಾರೋ ಎಂಬ ಆತಂಕದಲ್ಲಿವರಿಗೆ ಪೊಲೀಸರು ಗುಲಾಬಿ ಹೂ ನೀಡಿ ಹೆಲ್ಮೆಟ್ ಧರಿಸುವಂತೆ ಅಂಕೋಲಾ ಪೊಲೀಸರು ವಿನೂತನವಾಗಿ ಜಾಗೃತಿ ಮೂಡಿಸಿ ಗಮನ ಸೆಳೆದರು.
ಅಂಕೋಲಾದ ರಾಷ್ಟಿçÃಯ ಹೆದ್ದಾರಿಯಲ್ಲಿ ಇಲ್ಲಿಯ ಠಾಣೆಯ ಎಎಸೈ ಲಲಿತಾ ರಜಪೂತ್ ಹಾಗೂ ಎಚ್.ಆರ್.ಪಿ. ವಾಹನ ಸಿಬ್ಬಂದಿ ಸಂತೋಷ ಪ್ರೇಮಾನಂದ ನಾಯ್ಕ ಬೈಕ್ ಸವಾರರಿಗೆ ಗುಲಾಬಿ ನೀಡಿ ಕಿವಿಮಾತು ಹೇಳಿ, ಕಾನೂನು ಪಾಲನೆ ಮಾಡುವಂತೆ ಮನವಿ ಮಾಡಿದರು.
ಹೆಲ್ಮೆಟ್ ಧರಿಸದೇ ಬಂದವರು ಪೊಲೀಸರರನ್ನು ಹೆದ್ದಾರಿಯಲ್ಲಿ ದೂರದಲ್ಲೆ ಕಂಡು ಏನ್ ಮಾಡೋದಪ್ಪಾ ಈಗ ಎಂದು ಮನದಲ್ಲಿ ಎನ್ನುತ್ತಿರುವಾಗಲೆ, ಪೊಲೀಸರ ಕೈ ಯಲ್ಲಿ ಹೂವನ್ನು ಕಂಡು ಸವಾರರು ಸಮಾಧಾನದ ನಿಟ್ಟಿಸಿರು ಬಿಟ್ಟರು. ಪೊಲೀಸರಿಂದ ಹೆಲ್ಮೆಟ್ ಧರಿಸದೇ ಇರುವದರಿಂದ ಆಗುವ ಅನಾಹುತದಿಂದ ಪರಿಣಾಮದ ಬಗ್ಗೆ ನೀತಿ ಪಾಠವನ್ನು ಕೆಲಿ, ಇನ್ನು ಮುಂದೆ ಹೆಲ್ಮೆಟ್ ಧರಿಸುವದಾಗಿ ಹೇಳಿ ಬೈಕ್ ಚಲಾಯಿಸಿ ಮುಂದೆ ಸಾಗಿದ್ದು ಕಂಡು ಬಂತು.
ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಬೈಕ್ ಅಪಘಾತಗಳಲ್ಲಿ ಬೈಕ್ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದರಲ್ಲಿ ಬಹುತೇಕರಿಗೆ ತಲೆಗೆ ಪೆಟ್ಟಾಗಿ ಹೆಚ್ಚಿನ ತೊಂದರೆ ಎದುರಿಸುವಂತಾಗಿದೆ. ಹೀಗಾಗಿ ಅಂಕೋಲಾ ಪೊಲೀಸರು ಈಗ ಬೈಕ್ ಸವಾರರಲ್ಲಿ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಿದರು.
