ರಾಘು ಕಾಕರಮಠ.
ಅಂಕೋಲಾ : ತಾಲೂಕನ್ನೆ ಬೆಚ್ಚಿ ಬಿಳಿಸಿದ್ದ ವೃದ್ಧ ದಂಪತಿಗಳ ಬರ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಸುಖೇಶ ನಾಯಕ ಗ್ಯಾಂಗ್‌ಗೆ ಗಲ್ಲು ಶಿಕ್ಷೆಯೊ ಅಥವಾ ಜೀವಾವಧಿಯ ಶಿಕ್ಷೆಯೊ ಎನ್ನುವದನ್ನು ಜನವರಿ 9 ರಂದು ತಿರ್ಪು ಹೊರ ಬೀಳಲಿದೆ.

ತೀವ್ರ ಆತಂಕ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ ಆಂದ್ಲೆಯಲ್ಲಿ ನಡೆದ ವೃದ್ಧ ದಂಪತಿಗಳ ಬರ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳು, ಅಪಧಾರಿಗಳೆಂದು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಅವರು ಡಿ. 27 ರಂದು ತಿರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು 2024 ರ ಜನವರಿ 2 ರಂದು ಪ್ರಕಟಿಸುದಾಗಿ ಆದೇಶಿಸಿದ್ದರು.
ಜನವರಿ 2 ರಂದು ನ್ಯಾಯಾಲಯದ ಕಾರ್ಯ ಕಲಾಪ ನಡೆದು, ಜನವರಿ 3 ಕ್ಕೆ ತಿರ್ಪು ಕಾಯ್ದಿಟ್ಟಿದ್ದರು. ಜನವರಿ 3 ರ ಬುಧವಾರದಂದು ಅಫರಾದಿಗಳ ಪರ ನ್ಯಾಯವಾದಿಗಳು ಅಪಡವೇಟ್ ಸಲ್ಲಿಸಿ ಈ ಅಫರಾಧಿಗಳಿಗೆ ಯಾವುದೇ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಕೇವಲ ಮನೆಯನ್ನು ಕಳವು ಮಾಡಲು ಬಂದಿದ್ದರು. ಈ ಹತ್ಯೆ ಎನ್ನುವದು ಕೇವಲ ಆಕಸ್ಮಿಕ ಹಾಗಾಗಿ ಶಿಕ್ಷೆಯನ್ನು ಕಡಿಮೆಗೊಳಿಸಿ ನೀಡುವಂತೆ ಮಾನ್ಯ ನ್ಯಾಯಾಲಯದಲ್ಲಿ ತಮ್ಮ ವಾದವನ್ನು ಮಂಡಿಸಿದ್ದರು.
ಈ ವೇಳೆ ಸರಕಾರಿ ಸರಕಾರದ ವಿಶೇಷ ಅಭಿಯೋಜಕರಾದ ಶಿವಪ್ರಸಾದ ಆಳ್ವ ಕೆ. ಅವರು ಅಫರಾಧಿಗಳು ರಾಕ್ಷಿಸಿ ಪ್ರವೃತಿಯಂತೆ ಅತ್ಯಂತ ಬರ್ಬರವಾಗಿ ಹತ್ಯೆಗೈದಿದ್ದಾರೆ. ಹೀಗಾಗಿ ಅವರಿಗೆ ಗರಿಷ್ಠ ಕಠಿಣ ಜೀವಾವಧಿ ಶಿಕ್ಷೆ ನೀಡುವಂತೆ ಮನವಿ ಮಾಡಿದರು.
ಮಾನ್ಯ ನ್ಯಾಯಾಧೀಶರು ಉಭಯ ನ್ಯಾಯಾವಾದಿಗಳ ವಾದವನ್ನು ದಾಖಲಸಿಕೊಂಡು ಜ. 9 ರ ಮಂಗಳವಾರದAದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವದಾಗಿ ಆದೇಶಿಸಿದರು.
ಜ. 9 ರಂದು ಆರೋಪಿಗಳ ಎದುರು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಘೋಷಿಸಲಿದ್ದಾರೆ. ಈಗಾಗಲೇ ಸಾಂದರ್ಬಿಕ ಸಾಕ್ಷಿಯ ಅಡಿಯಲ್ಲಿ ದಂಡ ಪ್ರಕ್ರಿಯಾ ಸಂಹಿತೆ ಕಲಂ ಅಡಿಯಲ್ಲಿ 302, 201, ಮತ್ತು 449, 235(2), 120 (ಬಿ) ಹಾಗೂ 392 ರ ಅಡಿಯಲ್ಲಿ ಇವರು ಅಪರಾಧ ಎಸೆಗಿರುವದು ಸ್ಪಷ್ಠವಾದ ಹಿನ್ನಲೆಯಲ್ಲಿ ಅಫರಾಧಿಗಳಿಗೆ ಗಲ್ಲು ಶಿಕ್ಷೆಯ ಉರುಳೊ ಅಥವಾ ಜೀವಾವಧಿಯ ಶಿಕ್ಷೆಯೊ ಎನ್ನುವದು ನ್ಯಾಯಾಲಯದ ತೀರ್ಪಿನ ಮೇಲೆ ನಿರ್ಧರಿತವಾಗಲಿದೆ.
ಈ ಪ್ರಕರಣದಲ್ಲಿ ಪ್ರಮುಖವಾಗಿ ಕೊಲೆ ಮಾಡಿದ್ದು ಸಾಬೀತಾಗಿರುವದು (ಐಪಿಸಿ 302), ಸಾಕ್ಷಿ ನಾಶ (ಐಪಿಸಿ 201), ಕೊಲೆಗೆ ಪೂರ್ವ ಸಂಚು (ಐಪಿಸಿ 120 (ಬಿ)) ಹಾಗೂ ಕೊಲೆ ಮಾಡುವ ಉದ್ದೇಶದಿಂದ ಮನೆಗೆ ಪ್ರವೇಶ (ಐಪಿಸಿ 449) ಹಾಗೂ ದರೋಡೆ (ಐಪಿಸಿ 392) ಈ ಆಪಾದನೆಗಳು ಸಾಭೀತಾಗಿದೆ.
ಪ್ರಕರಣ ಏನಾಗಿತ್ತು :
2019 ರ ಡಿ. 19 ರಂದು ತಾಲೂಕಿನ ಮೊಗಟಾ ಗ್ರಾಪಂ ವ್ಯಾಪ್ತಿಯ ಆಂದ್ಲೆಯಲ್ಲಿ ಕೈಕಾಲು ಕಟ್ಟಿ ವೃದ್ದ ದಂಪತಿಗಳನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು.
ಗುತ್ತಿಗೆದಾರ ನಾರಾಯಣ ಬೊಮ್ಮಯ್ಯ ನಾಯಕ (78) ಹಾಗೂ ಇವರ ಪತ್ನಿ ಸಾವಿತ್ರಿ ನಾರಾಯಣ ನಾಯಕ (68) ಅವರು ಕೊಲೆಯಾಗಿದ್ದರು.
ಕೊಲೆಯಾದ ನಾರಾಯಣ ನಾಯಕ ಅವರ ತಮ್ಮನ ಮಗ ಸುಖೇಶ ಚಂದ್ರು ನಾಯಕ (42), ಬೆಂಗಳೂರಿನ ಇಂಡಸ್ಟ್ರೀಯಲ ಜಿಗಣೆ ಏರಿಯಾದ ವೆಂಕಟರಾಜಪ್ಪ, ಭರತ್ ಇ, ನಾಗರಾಜ್ ವಾಯ್ ಈ ದುಷ್ಕರ್ಮಿಗಳು ಮನೆಯ ಹಿಂಬದಿಯ ಬಾಗಿಲಿನಿಂದ ಒಳ ನುಗ್ಗಿ, ದಂಪತಿಗಳ ಮೇಲೆ ಖಾರದ ಪುಡಿ ಎರಚಿ ಹತ್ಯೆಗೈದಿದ್ದರು.
ಮನೆಯ ಹಿಂಬದಿಯ ಬಾಗಿಲಿನ ಹೊರಗಡೆ ನಾರಾಯಣ ನಾಯಕ ಅವರ ಮೃತ ದೇಹವು ಕೈಕಾಲು ಕಟ್ಟಿ ಹಾಕಿದ ರೀತಿಯಲ್ಲಿ ಮತ್ತು ಸಾವಿತ್ರಿ ನಾಯಕ ಅವರ ಮೃತ ದೇಹವು ಮನೆಯೊಳಗಿನ ಕೊಠಡಿಯಲ್ಲಿ ಬೆಡ್‌ಶೀಟ್‌ನಿಂದ ಕೈ ಕಾಲುಗಳನ್ನು ಕಟ್ಟಿ, ಬಾಯಿಗೆ ಗಮ್‌ಟೇಪ್ ಸುತ್ತಿ ಕೊಲೆಗೈದು, ಸಾಕ್ಷö್ಯ ನಾಶ ಮಾಡಿ ನಾಪತ್ತೆಯಾಗಿದ್ದರು.