ಅಂಕೋಲಾ: ತಾಲೂಕಿನ ಕಲ್ಲೇಶ್ವರದ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಶಿರಸಿಯ “ಶ್ರೀ” ಟ್ರಸ್ಟ್ ವತಿಯಿಂದ ಅಮೋದ ಶಿರ್ಶಿಕರ ಅವರು ಶಾಲೆಯ ಎಲ್ಲಾ ವಿದ್ಯಾರ್ಥಿ ಗಳಿಗೆ ಬ್ಯಾಗಗಳನ್ನ ವಿತರಿಸಿ ತಮ್ನ ಶೈಕ್ಷಣಿಕ ಪ್ರೇಮವನ್ನು ಸಾದರಪಡಿಸಿದ್ದಾರೆ.
ನಂತರ ಮಾತನಾಡಿದ ಅಮೋದ ಶಿರ್ಶಿಕರ ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದರು.ಅವರು ಪುನಃ ಶಾಲೆ ಗೆ ಬರುವಂತೆ ಪ್ರೇರೇಪಿಸುವ ಸಲುವಾಗಿ ಈ ಯೋಜನೆ ಹಾಕಿಕೊಂಡಿದ್ದೆವು ಎಂದು ತಿಳಿಸಿದರು.
ಶಾಲಾ ಅಧ್ಯಕ್ಷ ವಿ ಎಸ್ ಭಟ್ಟ ಮಾತನಾಡಿ 2019 ಮತ್ತು 2021 ರ ಮಳೆಗಾಲದಲ್ಲಿ ನಮ್ಮ ಶಾಲೆಗೆ ನೆರೆ ಬಂದಿತ್ತು, ಆಗ ಕೆಲವು ವಿದ್ಯಾರ್ಥಿಗಳ ಪಠ್ಯಪುಸ್ತಕಗಳು ನೀರಿನಿಂದ ಮುಳುಗಡೆ ಆಗಿತ್ತು.ಆಗಲೂ ಕೆಲವು ದಾನಿಗಳು ಪಟ್ಟಿ ಪುಸ್ತಕ ನೀಡಿದ್ದರು. ಸತತ ನೆರೆಯಿಂದ ನಮ್ಮ ಈ ಭಾಗವು ರಸ್ತೆ ಸಂಪರ್ಕವನ್ನು ಕಳೆದುಕೊಂಡು ಕುಗ್ರಾಮದಂತಾಗಿದೆ. ಇಂತಹ ಸಮಯದಲ್ಲೂ ಕಷ್ಟ ಪಟ್ಟು ನಮ್ಮ ಶಾಲೆಗೆ ಬಂದು ಎಲ್ಲ ಮಕ್ಕಳಿಗೂ ಬ್ಯಾಗ್ ಗಳನ್ನು ವಿತರಿಸಿದ್ದು, ಶ್ಲಾಘನೀಯ ಸಂಗತಿ ಎಂದರು.
ಶಾಲಾ ಮುಖ್ಯಾದ್ಯಾಪಕ ಅಬ್ದುಲ್ ಮುತಲಿಪ್ ಸ್ವಾಗತಿಸಿದರು. ಗಣೇಶ ಭಟ್ಟ ಪ್ರಾಸ್ತಾವಿಕ ಮಾತನಾಡಿ ದರು. ಶಿಕ್ಷಕಿ ನಾಗಪಪ್ರಿಯಾ ವಂದಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ವಿ ಎಸ್ ಭಟ್ಟ, ಪಂಚಾಯತ ಉಪಾಧ್ಯಕ್ಷ ವಿನೋದ ಭಟ್ಟ, ಪ್ರೌಢ ಶಾಲೆ ಅಧ್ಯಕ್ಷ ಮಾಬ್ಲೇಶ್ವರ ಭಟ್ಟ, ಗ್ರಾಮ ಪಂಚಾಯತಿ ಸದಸ್ಯರಾದ ಪ್ರೇಮಾ ಹೆಬ್ಬಾರ್, ಮೋಹನ ಪಟಗಾರ, ಎಸ್.ಡಿ.ಎಂ.ಸಿ ಸದಸ್ಯರುಗಳಾದ ಗಣೇಶ ಭಟ್ಟ, ನಾರಾಯಣ ಹೆಗಡೆ, ಆರ್ ಎಮ್ ಹೆಗಡೆ, ಗಣಪತಿ ಹೆಗಡೆ, ಶೇಖರ ಗಾಂವ್ಕರ, ನರಸಿಂಹ ಗಾಂವ್ಕರ, ಅಂಗನವಾಡಿ ಶಿಕ್ಷಕಿ ಸ್ಮೀತಾ ಭಟ್ಟ, ಪಾಲಕರು, ಶಿಕ್ಷಕರು, ಊರಿನ ನಾಗರಿಕರು, ವಿದ್ಯಾರ್ಥಿಗಳು ಇದ್ದರು.
