ಅಂಕೋಲಾ : ಇಲ್ಲಿನ ಪೊಲೀಸ್ ಠಾಣೆಯಲ್ಲಿ ಜನಸ್ನೇಹಿ ಪಿಎಸೈ ಆಗಿ ಗುರುತಿಸಿಕೊಂಡಿದ್ದ ಪ್ರವೀಣಕುಮಾರ ಆರ್. ಅವರು ಉಡುಪಿಯ ಮಲ್ಪೆ ಪೊಲೀಸ್ ಠಾಣೆಯ ಪಿಎಸೈ ಆಗಿ ಅಧಿಕಾರ ಸ್ವೀಕರಿಸಿದರು.
2015 ರ ಬ್ಯಾಚಿನ್ ಪಿಎಸೈ ಆಗಿರುವ ಪ್ರವೀಣಕುಮಾರ ಆರ್. ಅವರು ಉಕ ಜಿಲ್ಲೆಯ ದಾಂಡೇಲಿ, ಮುಂಡಗೋಡ ಹಾಗೂ ಕಾರವಾರದ ಚಿತ್ತಾಕುಲ ಹಾಗೂ ಅಂಕೋಲಾದಲ್ಲಿ ಸೇವೆ ಸಲ್ಲಿಸಿದ್ದರು.
ಪ್ರವೀಣಕುಮಾರ ಅವರು ಮೂಲತ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕಟ್ಟಿಗೆಹಳ್ಳದವರಾಗಿದ್ದು, ಕ್ರಿಯಾಶೀಲ ಪಿಎಸೈ ಎಂದೇ ಗುರುತಿಸಿಕೊಂಡಿದ್ದಾರೆ.