ವರದಿ: ದಿನಕರ ನಾಯ್ಕ ಅಲಗೇರಿ
ಅಂಕೋಲಾ: ಜನವರಿ 22 ಕ್ಕೆ ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಜ. 23 ರಂದು ಅಂಕೋಲಾ ದಲ್ಲಿ ಬೃಹತ್ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಯುವ ಮುಖಂಡ ಹಾಗೂ ಹಿಂದೂ ಸಂಘಟನೆಯ ಪ್ರಮುಖ ಸುನಿಲ್ ನಾಯ್ಕ ಹೊನ್ನೇಕೇರಿ ಮಾತನಾಡಿ ಪಟ್ಟಣದ ಶ್ರೀ ವೆಂಕಟರಮಣ ದೇವಸ್ಥಾನದಿಂದ ಮೆರವಣಿಗೆ ಹೊರಟು ಮುಖ್ಯ ಬೀದಿಯಲ್ಲಿ ಸಂಚರಿಸಲಿದೆ. ತಾಲೂಕಿನ ಯುವಕರ ಒಗ್ಗಟ್ಟಿನ ಮೂಲಕ ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲ ನಾಗರಿಕರ ಸಹಾಭಾಗಿತ್ವದ ಅವಶ್ಯಕತೆಯಿದೆ ಎಂದರು.
ಪ್ರಮುಖರಾದ ಭಾಸ್ಕರ್ ನಾರ್ವೇಕರ್ ಮಾತನಾಡಿ ಇದು ನಮ್ಮ ಹಲವರು ತಲೆಮಾರುಗಳ ಅವಿರತ ಹೋರಾಟಕ್ಕೆ ಸಂದ ಜಯ. ಹಾಗಾಗಿ ಈ ಸುಸಂದರ್ಭವನ್ನು ನಾವೆಲ್ಲರೂ ಸಂಭ್ರಮದಿಂದ ಆಚರಿಸಬೇಕು ಎಂದರು.
ಲಕ್ಷ್ಮಣ ನಾಯಕ ಅಲಗೇರಿ ಮಾತನಾಡಿ ಹಲವಾರು ಸಮಾಜ ಸೇರಿ ಹಿಂದೂ ಸಮಾಜವಾಗಿದೆ. ಯಾವುದೇ ಜಾತಿ, ಮತ, ಪಂಗಡದವರಾಗಿದ್ದರೂ ಸಹ ನಾವೆಲ್ಲರೂ ಒಟ್ಟಾಗಿ ಸಂಕಲ್ಪವನ್ನು ಕಾರ್ಯಾರೂಪಕ್ಕೆ ತರಬೇಕು. ಅದಕ್ಕಾಗಿ ನಾವೆಲ್ಲರೂ ಸ್ವಯಂ ಆಸಕ್ತಿಯಿಂದ ಕಾರ್ಯಕ್ರಮಕ್ಕೆ ಭಾಗವಹಿಸಿ ಯಶಸ್ವಿಗೊಳಿಸಬೆಕು ಎಂದರು.
ವಿಶ್ವ ಹಿಂದೂ ಪರಿಷತ್ ತಾಲೂಕ ಕಾಯೆಯದರ್ಶಿ ಸುರೇಶ ಭೋವಿ ಮಾತನಾಡಿ ರಾಮಮಂದಿರ ಉದ್ಘಾಟನೆಯು ಸನಾತನ ಸಂಸ್ಕೃತಿಯ ದೀಪಾವಳಿಯಷ್ಟೇ ಪ್ರಾಮುಖ್ಯತೆ ಪಡೆದಿದ್ದು ಪ್ರತಿಯೊಂದು ಮನೆಯಲ್ಲೂ ಸಹ ಕನಿಷ್ಟ 5 ದೀಪಗಳನ್ನು ಹಚ್ಚುವ ಮೂಲಕ ಆಚರಣೆ ಮಾಡಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ಮಾತನಾಡಿ ನಮ್ಮ ಸಂಘದಿಂದ ಸಂಪೂರ್ಣ ಸಹಕಾರ ಹಾಗೂ ಬೆಂಬಲ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಎಲ್ಲ ಸಮಾಜ ಬಾಂಧವರು ಹಾಜರಿದ್ದು ಸಂಪೂರ್ಣ ಬೆಂಬಲ ಘೋಷಿಸಿದರು.
ತಾಲೂಕಿನ ಮುಸ್ಲಿಂ ಬಾಂಧವರೂ ಸಹ ರಾಮಮಂದಿರ ಉದ್ಘಾಟನೆಗೆ ಹರ್ಷ ವ್ಯಕ್ತಪಡಿಸಿದ್ದು ಅಕ್ಷತೆ, ಕರಪತ್ರ ಸ್ವೀಕರಿಸಿದ್ದಾರೆ.