ಜೋಯಿಡಾ : ಬಿ.ಜಿ.ವಿ.ಎಸ್ ಪದವಿ ಪೂರ್ವ ಕಾಲೇಜು ಮತ್ತು ಪೊಲೀಸ್ ಇಲಾಖೆ ಜೊಯಿಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಅಂತರ್ ರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ವಿರೋಧ ದಿನ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಜೊಯಿಡಾ ಪೊಲೀಸ್ ಉಪನಿರೀಕ್ಷಕಿ ಕಸ್ತೂರಿ ಕೆ ಮಾತನಾಡಿ ಇಂದಿನ ಯುವ ಜನಾಂಗ ಗಾಂಜಾ ತಂಬಾಕು ಮತ್ತು ಅನೇಕ ನಿಷೇಧಿತ ಮಾದಕ ದ್ರವ್ಯ ಸೇವನೆ ಮಾಡುತ್ತಿರುವುದು ಮತ್ತು ಇದರಿಂದ ಅನೇಕ ಅಪರಾಧಗಳು ನಡೆಯುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಇದರಲ್ಲಿ ಹೆಚ್ಚು ಯುವಕರೇ ಕಂಡುಬರುತ್ತಿದ್ದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಶೆಟ್ಟಿ ಮಾತನಾಡಿ ಇಂದಿನ ಯುವಕರೇ ನಾಳಿನ ಪ್ರಜೆಗಳು. ರಾಷ್ಟ್ರನಿರ್ಮಾಣ ಪ್ರಕ್ರಿಯೆಯಲ್ಲಿ ಸದೃಢ ವ್ಯಕ್ತಿಗಳು ಬೇಕಾಗಿದ್ದು ಸಣ್ಣ ಸಣ್ಣ ವಯಸ್ಸಿನಲ್ಲಿಯೇ ಯುವಕರು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ಸಮಾಜದ ಮಾರಕಕ್ಕೆ ಕಾರಣವಾಗಿದೆ. ಮಾದಕ ವಸ್ತುಗಳ ಜೊತೆಗೆ ಮೊಬೈಲ್ ಗಳ ಹೆಚ್ಚು ಬಳಕೆಯಿಂದಾಗಿ ಹೆಚ್ಚು ಹೆಚ್ಚು ಅಪರಾಧಗಳು ನಡೆಯುತ್ತಿವೆ ಇದು ಆತಂಕಕ್ಕೆ ಕಾರಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಸೈ ಡಿ ಜಿ ಭೋವಿ ಮತ್ತು ಸಿಬ್ಬಂದಿ ವರ್ಗ ಹಾಗೂ ಕಾಲೇಜಿನ ಉಪನ್ಯಾಸಕರಾದ ಪ್ರವೀಣ್ ನಾಯಕ್ ,ಪ್ರಕಾಶ ತಗಡಿನಮನೆ ಎನ್.ಎಸ್.ಎಸ್.ಕಾರ್ಯಕ್ರಮ ಅಧಿಕಾರಿ ಶಿವಾಜಿ ಜೋಮನ್ನವರ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಸುಮಾರು 300 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.