ವರದಿ : ದಿನಕರ ನಾಯ್ಕ. ಅಲಗೇರಿ.
ಅಂಕೋಲಾ : ಪಾರ್ಟಿಗೆ ತೆರಳಿದ್ದ ವೇಳೆ ಈಜಾಡುತ್ತಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಸಂತೆಪೇಟೆಯಲ್ಲಿ ಬುಧವಾರ ನಡೆದಿದೆ.
ಕುಮಟಾದ ಸೆವೆನ್ ಹೆವೆನ್ ರೇಸಾರ್ಟ್ನಲ್ಲಿ ಕುಕ್ ಆಗಿದ್ದ ನೇಪಾಳ ಮೂಲದ ದೇವ ಮೃತಪಟ್ಟವ.
ನಡೆದದ್ದೇನು..?
ಕುಮಟಾದ 8 ಜನರ ಗೆಳೆಯರ ತಂಡ ಸಂತೆಪೇಟೆಯ ಹನಿ ಹೊಟೇಲ ಹಿಂಬ0ದಿಯಲ್ಲಿರುವ ಗಂಗಾವಳಿ ನದಿಗೆ ಈಜಲು ಇಳಿದಿದ್ದರು. ಈ ವೇಳೆ ದೇವ ನೋಡು ನೋಡುತ್ತಲೆ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ.
ಅಂಕೋಲಾ ಪೊಲೀಸ್ ಠಾನೆಯ ಪಿಎಸೈ ಉದ್ದಪ್ಪ ಧರೆಪ್ಪನವರ್, ಎಎಸೈ ಲಲಿತಾ ರಜಪೂತ್, ಪೊಲೀಸ್ ಸಿಬ್ಬಂದಿ ನಾಗರಾಜ್ ಗೌಡ ಘಟನೆಯ ಸಂಪೂಣ್ ವಿವರ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.