TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ದೇವರ ಬೃಹತ ಮೂರ್ತಿಯನ್ನೆ ಕಯ್ದೊಯ್ದ ಭೂಪ್:

Feb 1, 2024 | ಅಪರಾಧ, ವಿಶೇಷ |

ದೇವರ ಬೃಹತ ಮೂರ್ತಿಯನ್ನೆ ಕಯ್ದೊಯ್ದ ಭೂಪ್:

ರಾಘು ಕಾಕರಮಠ.

ಅಂಕೋಲಾ : ನೀವು ಅನೇಕ ತರಹದ ವಸ್ತುಗಳನ್ನು ಕಳ್ಳತನ ನಡೆಸಿದ ವಿದ್ಯಮಾನವನ್ನು ನೋಡಿರಬಹುದು. ಆದರೆ ಇಲ್ಲೊಬ್ಬ ಆಸಾಮಿ ಶ್ರೀ ದೇವರ ಬೃಹತ ವಿಗ್ರಹವನ್ನೆ ಕಯ್ದೊಯ್ದು, ತನ್ನ ಮನೆಯ ತೋಟದ ಹಿತ್ತಲಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಕೂತುಹಲಕಾರಿ ಘಟನೆಯೊಂದು ತಾಲೂಕಿನಲ್ಲಿ ನಡೆದಿದೆ.

 ಹೌದು.. ಇತಂಹದೊ0ದು ಅಪರೂಪ ಘಟನೆ ನಡೆದದ್ದು ಹಿಚ್ಕಡದಲ್ಲಿ. ತಾಲೂಕಿನ ಹಿಚ್ಕಡದ ಮೈದಾನ ಎದುರಿನ ಗೊಂಬಳಿ ಮರಳ ಕೆಳಗೆ ಅನಾಧಿಕಾಲದಿಂದಲೂ ಶ್ರೀ ಮಹಾಸತಿ ವಿಗ್ರಹವಿತ್ತು. ಇದನ್ನು ಈ ಭಾಗದ ಜನತೆ ಭಕ್ತಿಯಿಂದ ಮಾಸ್ತಿಮನೆ ಎಂದೂ ಕರೆಯುತ್ತಿದ್ದರು. ಶ್ರೀ ದೇವರಿಗೆ ಪ್ರತಿ ವಾರವು ಪೂಜೆಯು ನಡೆಯುತ್ತಿತ್ತು.

 ಆದರೆ ಗುರುವಾರ ಬೆಳಿಗ್ಗೆ ಮಾತ್ರ 3.5 ಅಡಿ ಎತ್ತರ ವಿಗ್ರಹ ಮಾತ್ರ ಕಣ್ಮರೆಯಾಗಿತ್ತು. ಈ ಘಟನೆ ಹಿಚ್ಕಡದ ಜನತೆಗೆ ಆತಂಕಕ್ಕೆ ಕಾರಣವಾಗಿತ್ತು. 4 ಅಡಿ ಆಳಕ್ಕೆ ಅಗೆದು ಮೂರ್ತಿಯನ್ನು ತೆಗೆದುಕೊಂಡು ಹೋಗಲಾಗಿತ್ತು. ನಿಧಿಗಳ್ಳರ ಕೈ ಚಳಕ್ಕೆ ಈ ಮೂರ್ತಿ ವಶವಾಯಿತೆ ಎಂಬ ಸಂಶಯದಲ್ಲಿ ಗ್ರಾಮಸ್ಥರು ಈ ವಿಷಯವನ್ನು ಅಂಕೋಲಾ ಪೊಲೀಸರ ಗಮನಕ್ಕೆ ತಂದಿದ್ದರು.

 ತಕ್ಷಣ ಕಾರ್ಯಪ್ರವೃತ್ತರಾದ ಪಿಎಸೈ ಸುಹಾಸ ಅವರು ಈ ವಿಗ್ರಹ ತಳಗದ್ದೆಯ ಮುಕುಂದ ಗೋವಿಂದ ಗೌಡ ಅವರ ಮನೆಯ ಹಿಂಬದಿಯ ಹಿತ್ತಲಲ್ಲಿ ಹೂವಿನಿಂದ ಅಲಂಕಾರ ಭೂಷಿತನಾಗಿ ಇಟ್ಟಿರುವದನ್ನು ಪತ್ತೆ ಹಚ್ಚಿದ್ದರು. ಹಿಚ್ಕಡದ ಗ್ರಾಮಸ್ಥರು 5 ಕೀಮೀ ಅಂತರದಲ್ಲಿರುವ ತಳಗದ್ದೆಗೆ ಹೋದಾಗ, ತಮ್ಮೂರಲ್ಲಿ ಇರಬೇಕಾದ ಮಾಸ್ತಿಮನೆಯ ಮೂರ್ತಿಯು ತಳಗದ್ದೆಯಲ್ಲಿ ಇರುವದನ್ನು ಕಂಡು ಹೌಹ್ಹಾರಿದ್ದರು.

 ಪೊಲೀಸರು ಮುಕುಂದ ಗೋವಿಂದ ಗೌಡ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಇದನ್ನು ತಾನೆ ತನ್ನ ಸ್ವಂತ ಬುಲೇರೊ ವಾಹನದಲ್ಲಿ ಹಾಕಿಕೊಂಡು ಬಂದಿರುವದಾಗಿ ಒಪ್ಪಿಕೊಂಡಿರುವದಾಗಿ ತಿಳಿದುಬಂದಿದೆ.

 ಗ್ರಾಮಸ್ಥರ ಹಾಗೂ ಪೊಲೀಸ್ ಅಧಿಕಾರಗಳ ಎದುರೆ ಮುಕುಂದ ಗೌಡ ನನಗೆ ಸುಂದರವಾದ ಕಲಾ ಕೆತ್ತನೆ ಮಾಡುವ ಕಲೆ ಇದೆ. ಹಾಗಾಗಿ ರಾತ್ರಿ ನಾನೊಬ್ಬನೆ ಹಿಚ್ಕಡಕ್ಕೆ ತೆರಳಿ ಮೂರ್ತಿಯನ್ನು ಅಗೆದು ತಂದಿರುವದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವಿಗ್ರಹ ನಾಪತ್ತೆ ಹಿಂದಡೆ ಇರುವ ಅಸಲಿಯತ್ತು ಏನು..? ನಿಧಿಗಳ್ಳತವೆ..? ಅಥವಾ ಘಟನೆಗೆ ಇನ್ನಿತರ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಪಿಎಸೈ ಸುಹಾಸ ಕಾರ್ಯಪ್ರವೃತ್ತರಾಗಿದ್ದಾರೆ.

ಸಂಧಾನ ಮೂಲಕ ಪ್ರಕರಣ ಇತ್ಯರ್ಥ..

ಈ ಪ್ರಕರಣವು ಅಂಕೋಲಾ ಪೊಲೀಸ್ ಠಾಣೆಯ ಮೆಟ್ಟಿಲೆರಿತ್ತು. ಆದರೆ ಮುಕುಂದ ಗೌಡ ತಪ್ಪೊಪ್ಪಿಕೊಂಡು, ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ ನೂತನ ಮೂರ್ತಿ ಮಾಡಿಕೊಡುತ್ತೇನೆ. ನನ್ನನ್ನು ಕ್ಷಮಿಸಿ ಬಿಡಿ ಎಂದು ಗೊರೆರದುಕೊಂಡಿದ್ದ. ಸಹೃದಯಿ ಗ್ರಾಮಸ್ಥರು ಮಾನವೀಯತೆ ತೋರಿ, ಪ್ರಕರಣವನ್ನು ಅಲ್ಲಿಯೆ ಕೈ ಬಿಟ್ಟು ಸಂಧಾನ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಂಡಿದ್ದಾರೆ.

ಈ ದೊಡ್ಡ ಮೂರ್ತಿಯನ್ನ ಒಬ್ಬನೆ ಅಗೆದು ತಂದು ರಿಕ್ಷಾದಲ್ಲಿ ತರಲು ಸಾದ್ಯವಿಲ್ಲ. ಇದರಲ್ಲಿ ಇನ್ನೊಂದು ಕೈ ಕೂಡ ಕೆಲಸ ಮಾಡಿದೆ ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸುತ್ತಾರೆ. ಈ ಸಂದರ್ಭದಲ್ಲಿ ಮೊಕ್ತೇಸರರಾದ ವಿಠೋಬ ಬೊಮ್ಮಯ್ಯ ನಾಯಕ, ರಂಜನ ನಾಯಕ ಪ್ರಮುಖರಾದ ಚೇತನ ನಾಯಕ. ಹಿಚ್ಕಡ, ಗುರು ನಾಯಕ. ಹಿಚ್ಕಡ, ಅಮೋಘ ನಾಯಕ, ಆದಿತ್ಯ ನಾಯಕ, ವಿಠೋಬ ಹಮ್ಮಣ್ಣ ನಾಯಕ, ರಾಮು ಹಿಚ್ಕಡ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಗೋಪು ನಾಯಕ ಹುಂಡಿಮನೆ ಮೊದಲಾದವರು ಉಪಸ್ಥಿತರಿದ್ದರು.

Share:

Rate:

Previousಬೇಲೆಕೇರಿ ಬಂದರಿನಲ್ಲಿ ಮಟ್ಕಾ ಆಡಿಸುತ್ತಿದ್ದವನ ಬಂಧನ
Nextಅಂಕೋಲಾ ಠಾಣೆಯ ನೂತನ ಸಿಪಿಐ ಆಗಿ ಶ್ರೀಕಾಂತ ತೋಟಗಿ

Related Posts

ಮನೆಯ ಹಸು ಸತ್ತ ನಂತರ ಕಾಲು ಕಟ್ಟಿ ಸ್ಮಶಾನದಲ್ಲಿ ಎಸೆದು ಹೋದ ನಿರ್ದಯಿ ಜನ

ಮನೆಯ ಹಸು ಸತ್ತ ನಂತರ ಕಾಲು ಕಟ್ಟಿ ಸ್ಮಶಾನದಲ್ಲಿ ಎಸೆದು ಹೋದ ನಿರ್ದಯಿ ಜನ

August 10, 2023

ಅಂಕೋಲಾದಲ್ಲಿ ಮಹಿಳಾ ಕಂಡಕ್ಟರಳಿಂದ ಡಿಶುಂ.. ಡಿಶುಂ..

ಅಂಕೋಲಾದಲ್ಲಿ ಮಹಿಳಾ ಕಂಡಕ್ಟರಳಿಂದ ಡಿಶುಂ.. ಡಿಶುಂ..

July 11, 2023

ಹೆಗ್ರೆಯಲ್ಲಿ ಹಾವು  ಕಡಿದು ರೈತ ಸಾವು

ಹೆಗ್ರೆಯಲ್ಲಿ ಹಾವು  ಕಡಿದು ರೈತ ಸಾವು

September 5, 2022

ಸಾಲಕೊಡಿಸುವ ನೆಪದಲ್ಲಿ ಪಲ್ಲಂಗ ಏರಲು ಸಿದ್ದನಾದ ಬ್ಯಾಂಕ ಗುಮಾಸ್ತನಿಗೆ ಬಿತ್ತು ಧರ್ಮದೇಟು

ಸಾಲಕೊಡಿಸುವ ನೆಪದಲ್ಲಿ ಪಲ್ಲಂಗ ಏರಲು ಸಿದ್ದನಾದ ಬ್ಯಾಂಕ ಗುಮಾಸ್ತನಿಗೆ ಬಿತ್ತು ಧರ್ಮದೇಟು

February 8, 2025

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;
    ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;
  • ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
    ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
  • ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
    ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
  • ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
    ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
  • ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
    ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy