ಅಂಕೋಲಾ : ಪ್ರತಿಷ್ಠಿತ ಶ್ರೀರಾಮ ಸ್ಟಡಿ ಸರ್ಕಲ್‌ನಲ್ಲಿ ಮಂಗಳೂರು ಮತ್ತು ಧಾರವಾಡದ ಖ್ಯಾತ್ ಬೋಧಕರಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿಷಯಗಳಲ್ಲಿ ತರಬೇತಿ ಪಡೆದ ನಾರಾಯಣ ಪ್ರಶಾಂತ ನಾಯ್ಕ ತೆಂಕಣಕೇರಿ ಗಣಿತ, ಭೌತಶಾಸ್ತ್ರ & ರಸಾಯನಶಾಸ್ತ್ರ ವಿಷಯಗಳಲ್ಲಿ 100 ಕ್ಕೆ 100 ಅಂಕ ಗಳಿಸಿದರೆ, ಹೊನ್ನಾವರದ ಜಯಂತ ಹಬ್ಬು ಪಿಸಿಎಂಬಿಯಲ್ಲಿ 100/99/98/97 ಅಂಕಗಳಿಸಿ ಸಾಧನೆ ಮರೆದಿದ್ದಾರೆ.

12 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100 ಕ್ಕೆ 100 ಅಂಕ ಗಳಿಸಿದರೆ, 2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 42 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 100% ಫಲಿತಾಂಶ ದಾಖಲಿಸಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸ್ಟಡಿ ಸರ್ಕಲ್‌ನ ವ್ಯವಸ್ಥಾಪಕ ನಿರ್ದೇಶಕ ಸೂರಜ್ ನಾಯಕ ಸೇರಿದಂತೆ ಆಡಳಿತ ವರ್ಗ ಹರ್ಷ ವ್ಯಕ್ತಪಡಿಸಿದೆ.