ರಾಘು ಕಾಕರಮಠ.
ಅ0ಕೋಲಾ : ತಾಲೂಕಿನಲ್ಲಿ ಅಕ್ರಮವಾಗಿ ಡಿಸೈಲ ಹಾಗೂ ಪೆಟ್ರೋಲ ಇಳಿಸುವ ಜಾಲ ಸಕ್ರೀಯವಾಗಿದೆ. ಆರಕ್ಷಕ ಇಲಾಖೆಯ ಹಿರಿಯ ಅಧಿಕಾರಿಗಳ ಹೆಸರನ್ನು ಬಳಸಿಕೊಂಡು ಈ ಅಕ್ರಮ ದಂಧೆ ನಿರಾತಂಕವಾಗಿ ಸಾಗಿದ್ದು ವ್ಯವಸ್ಥೆಗೆ ಹಿಡಿದ ಕನ್ನಡಿಯಂತಾಗಿದೆ.
ಯಲ್ಲಾಪುರ – ಬಾಳೆಗುಳಿಯ ನಡುವಿನ ಹೆಗ್ಗಾರದ ರಾಷ್ಟಿçÃಯ ಹೆದ್ದಾರಿ ಅಂಚಿನಲ್ಲಿ ಈ ದಂಧೆ ರಾಜಾರೋಷವಾಗಿ ತೆರೆದುಕೊಂಡಿದೆ. ಈ ವ್ಯವಹಾರವನ್ನು ಪ್ರಸನ್ನತೆಯಿಂದಲೆ ದಾದಾಗಿರಿಯಿಂದ ನಿರ್ವಹಿಸುತ್ತಿರುವ ಈ ವ್ಯಕ್ತಿಗೆ ಖಾಕಿ ಪಡೆಯ ಆರ್ಶಿವಾದ ಇರುವದು ಆತ ಮಾಡುವ ನಿರಾಂತಕ ವ್ಯವಹಾರದಿಂದಲೆ ಗೊತ್ತಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ನವಮಿ ಹೊಟೇಲ ಬಳಿ ಮತ್ತು ಅದರ ಹತ್ತಿರದಲ್ಲಿ ಯಾರಿಗೂ ಕಾಣದಂತೆ ಬೃಹತ ತಗಡಿನ ಸೀಟ್‌ಗಳನ್ನು ಅಳವಡಿಕೊಂಡು, ಅಕ್ರಮವಾಗಿ ಡಿಸೈಲ ಪೆಟ್ರೋಲಗಳನ್ನು ಅಕ್ರಮವಾಗಿ ತೆಗೆಯಲಾಗುತ್ತಿದೆ.
ಪ್ರತಿ ದಿನ 60 ಕ್ಕೂ ಹೆಚ್ಚು ಲಾರಿಗಳಿಂದ ಡಿಸೈಲ ಮತ್ತು ಪೆಟ್ರೋಲಗಳನ್ನು ಅಕ್ರಮವಾಗಿ ಇಳಿಸಲಾಗುತ್ತಿದೆ. ಪ್ರತಿ ಲಾರಿಯಿಂದ 500 ರೂ ನಂತೆ ಸುಮ್ಮನಿರುವ ಇಲಾಖೆಗೆ ಸಂದಾಯವಾಗುತ್ತಿರುವ ಬಲವಾದ ಆರೋಪಗಳು ಕೂಡ ಕೇಳಿ ಬಂದಿದೆ. ಈ ಮೊದಲು ರಾತ್ರಿ ವೇಳೆ ಮಾತ್ರ ನಡೆಯುತ್ತಿದ್ದ ಈ ಅಕ್ರಮ ವ್ಯವಹಾರವು ಈಗ ಹಗಲಿನಲ್ಲಿಯೂ ತೆರೆದುಕೊಂಡಿದೆ.
ಅಗತ್ಯ ವಸ್ತುಗಳ ಕಾಯ್ದೆಯ ಅಡಿ ಇತಂಹ ವ್ಯವಹಾರಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಸಹ ಅಕ್ರಮ ಪೆಟ್ರೋಲ– ಡಿಸೈಲ ದಂಧೆ ಖುಲಂ ಖುಲ್ಲಾ ಆಗಿ ನಡೆಯುತ್ತಿವ ಆರೋಪದ ಬಗ್ಗೆ ಜಿಲ್ಲಾ ಆರಕ್ಷಕ ಇಲಾಖೆ ಕ್ರಮ ಕೈಗೊಳ್ಳ ಬೇಕಿದೆ ಎಂಬ ಆಗ್ರಹದ ಮಾತು ಕೇಳಿ ಬಂದಿದೆ.
ಡಿಸೈಲ ಹಾಗೂ ಪೆಟ್ರೋಲನ್ನು ಅಕ್ರಮವಾಗಿ ಇಳಿಸಿಕೊಳ್ಳಲು 7 ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ದಾದಾಗಿರಿಯಿಂದಲೆ ಈ ಅಕ್ರಮ ದಂಧೆ ನಡೆಯುತ್ತಿದೆ. ಸುಂಕಸಾಳದ ಉಪ ಠಾಣೆಯ ಪೊಲೀಸರು ಮಾತ್ರ ಇದರ ಸಹವಾಸಕ್ಕೂ ಹೋಗದೆ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅಪಾರ ಪ್ರಮಾಣದಲ್ಲಿ ಡೀಸೈಲ – ಪೆಟ್ರೋಲ ಶೇಖರಿಸುತ್ತಿರವದಿಂದ ಏನಾದೃಉ ಬೆಂಕಿ ಅವಘಡವಾದರೆ ಯಾರು ಹೊಣೆ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗಿದೆ.
ಪೆಟ್ರೋಲ ಬಂಕಗಳಲ್ಲಿ ಇರುವ ದರಗಳಿಗಿಂದ 7 ರೂಪಾಯಿ ಕಡಿಮೆ ದರದಲ್ಲಿ ಇಲ್ಲಿ ಡಿಸೈಲ ಹಾಗೂ ಪೆಟ್ರೋಲಗಳನ್ನು ಮಾರಲಾಗುತ್ತಿದೆ ಎಂಬ ಆರೋಪವು ಕೇಳಿ ಬಂದಿದೆ. ಈ ಬಗ್ಗೆ ಆರಕ್ಷಕ ಇಲಾಖೆ ಕ್ರಮವಹಿಸಬೇಕಿದೆ. ಅಕ್ರಮ ಪೆಟ್ರೋಲ ಹಾಗೂ ಇಳಿಸುವ ಸಂಪೂರ್ಣ ದಾಖಲೆಗಳೊಂದಿಗೆ ಲೋಕಾಯುಕ್ತದ ಕದ ತಟ್ಟಲು ಇಲ್ಲಿಯ ನಾಗರಿಕರೊಬ್ಬರು ಸಿದ್ಧರಾಗಿದ್ದಾರೆ.