TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಕಾಂಗ್ರೆಸ್ ಗ್ಯಾರೆಂಟಿ  ಯೋಜನೆಯ  ಪ್ರಾಧಿಕಾರದ ಉಪಾಧ್ಯಕ್ಷರಾಗಿ ಪುರುಷೋತ್ತಮ  ನಾಯ್ಕ  ನೇಮಕ

Mar 11, 2024 | ವಿಶೇಷ |

ಕಾಂಗ್ರೆಸ್ ಗ್ಯಾರೆಂಟಿ  ಯೋಜನೆಯ  ಪ್ರಾಧಿಕಾರದ ಉಪಾಧ್ಯಕ್ಷರಾಗಿ ಪುರುಷೋತ್ತಮ  ನಾಯ್ಕ  ನೇಮಕ

ಕಾಂಗ್ರೆಸ್ ಗ್ಯಾರೆಂಟಿ ಯೋಜನೆಯ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಪುರುಷೋತ್ತಮ ನಾಯ್ಕ ನೇಮಕ

ಅಂಕೋಲಾ : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಆಪ್ತರಾಗಿ ಗುರುತಿಸಿಕೊಂಡಿರುವ ಅಂಕೋಲಾದ ಶಿರೂರಿನ ಪುರುಷೋತ್ತಮ ದೇವಪ್ಪ ನಾಯ್ಕ ಅವರಿಗೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಯ ಪ್ರಾಧಿಕಾರದ ಉಪಾಧ್ಯಕ್ಷರಾಗಿ ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

        ರಾಜ್ಯ ಸರಕಾರ ನೀಡಿರುವ ಗ್ಯಾರೆಂಟಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗ್ಯಾರೆಂಟಿ ಯೋಜನೆಯ ಪ್ರಾಧಿಕಾರವನ್ನು ಸ್ಥಾಪಿಸಿದ್ದು, ಅದರಲ್ಲಿ ಪುರುಷೋತ್ತಮ ನಾಯ್ಕ ಅವರಿಗೆ ಉಕ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆದೇಶ ನೀಡಿದ್ದಾರೆ.

        ಕಳೆದ ೩೫ ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ ಪುರುಷೋತ್ತಮ ದೇವಪ್ಪ ನಾಯ್ಕ ಅವರು ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿ ಹೆಮ್ಮೆಗೆ ಪಾತ್ರರಾಗಿದ್ದಾರೆ. ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷರಾಗಿ, ಯೂಥ ಕಾಂಗ್ರೆಸ್‌ನ ಜಿಲ್ಲಾ ಉಪಾಧ್ಯಕ್ಷರಾಗಿ, ಇಂಟೆಕ್ ವಿಭಾಗದ ಜಿಲ್ಲಾ ನಿರ್ದೇಶಕನಾಗಿ, ಅಂಕೋಲಾ ಬ್ಲಾಕ್ ಕಾಂಗ್ರೆಸ್‌ನ ಉಪಾಧ್ಯಕ್ಷನಾಗಿ, ಬೆಳಸೆ ಗ್ರಾಮ ಪಂಚಾಯತನ ಉಪಾಧ್ಯಕ್ಷನಾಗಿ ಪ್ರಸ್ತುತ ನೆಹರು ಮಂಚ್‌ನ ಜಿಲ್ಲಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

        ವಿದ್ಯಾರ್ಥಿ ಜೀವನದಿಂದಲೆ ಕ್ರಿಯಾಶೀಲವಾಗಿ ಗುರುತಿಸಿಕೊಂಡಿರುವ ಪುರುಷೋತ್ತಮ ನಾಯ್ಕ ಅವರು ಜಿಸಿ ಕಾಲೇಜಿನ ಜನರಲ್ ಸೆಕ್ರಟರಿಯಾಗಿ ಹಾಗೂ ಬಿಎಡ್ ಕಾಲೇಜಿನ ಜನರಲ್ ಸೆಕ್ರಟರಿಯಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದರು. ಹೀಗೆ ಹತ್ತಾರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿರುವ ಪುರುಷೋತ್ತಮ ದೇವಪ್ಪ ನಾಯ್ಕ ಅವರಿಗೆ ಗ್ಯಾರೆಂಟಿ ಯೋಜನೆಯ ಪ್ರಾಧಿಕಾರದ ಉಪಾಧ್ಯಕ್ಷರಾಗಿ ನೇಮಕಗೊಂಡಿರುವದು ಅವರ ಆಪ್ತ ವಲಯದಲ್ಲಿ ಹರ್ಷಕ್ಕೆ ಕಾರಣವಾಗಿದೆ.

Share:

Rate:

Previousಅಂಕೋಲಾದ ವೈಧ್ಯೆ ವಿರುದ್ದದ ಪೋಕ್ಸೋ ಕೇಸ್ ರದ್ದು
Nextಕೌಶಲ್ಯ ತರಬೇತಿ ಮತ್ತು ಉದ್ಯೋಗಕ್ಕಾಗಿ ಅಭ್ಯರ್ಥಿಗಳ ಆಯ್ಕೆಗೆ ಆಪ್ತ ಸಮಾಲೋಚನೆ

Related Posts

ನಾಲ್ವರು ಆರೋಪಿಗಳು ಅಫರಾಧಿಗಳೆಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ

ನಾಲ್ವರು ಆರೋಪಿಗಳು ಅಫರಾಧಿಗಳೆಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ

December 27, 2023

ಹುಟ್ಟೂರು ಅಲಗೇರಿಯಲ್ಲಿ ದಿನಕರರ 114 ನೆಯ ಜನ್ಮ ದಿನಾಚರಣೆ:

ಹುಟ್ಟೂರು ಅಲಗೇರಿಯಲ್ಲಿ ದಿನಕರರ 114 ನೆಯ ಜನ್ಮ ದಿನಾಚರಣೆ:

September 16, 2023

ಅಂಕೋಲಾದಲ್ಲಿ ಸಿಎಮ್ ಸಿದ್ಧರಾಮಯ್ಯ ಅವರ ದಿನಾಚರಣೆ

ಅಂಕೋಲಾದಲ್ಲಿ ಸಿಎಮ್ ಸಿದ್ಧರಾಮಯ್ಯ ಅವರ ದಿನಾಚರಣೆ

August 3, 2023

ಹಾವು ಕಚ್ಚಿ ಯುವಕ ಸಾವು

ಹಾವು ಕಚ್ಚಿ ಯುವಕ ಸಾವು

April 28, 2024

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
  • ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
    ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy