ಕೌಶಲ್ಯ ತರಬೇತಿ ಮತ್ತು ಉದ್ಯೋಗಕ್ಕಾಗಿ ಅಭ್ಯರ್ಥಿಗಳ ಆಯ್ಕೆಗೆ ಆಪ್ತ ಸಮಾಲೋಚನೆ

ಕಾರವಾರ : ನಗರದ ದಿವೇಕರ್ ಕಾಮರ್ಸ್ ಕಾಲೇಜು ಹಾಗೂ ದೇಶಪಾಂಡೆ ಸ್ಕಿಲ್ಲಿಂಗ್ ಸಹಯೋಗದಲ್ಲಿ 2023-24 ನೇ ಸಾಲಿನ ಸ್ಕಿಲ್‌ಪ್ಲಸ್-ಜಾಬ್‌ನೆಕ್ಸ್ಟ ಯೋಜನೆಯಡಿ ತರಬೇತಿ ಹಾಗೂ ಉದ್ಯೋಗಕ್ಕಾಗಿ ವಿದ್ಯಾವಂತ ನಿರುದ್ಯೋಗ ಯುವಕ ಯುವತಿಯರ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.
14-03-2024 ಗುರುವಾರ ಬೆಳಿಗ್ಗೆ 10 ಗಂಟೆಗೆ ದಿವೇಕರ್ ಕಾಲೇಜಿನ ಸಭಾಭವನದಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಆಪ್ತ ಸಮಾಲೋಚನೆಯನ್ನು ಆಯೋಜಿಸಿದೆ.
ಕನಿಷ್ಠ ಯಾವುದೇ ಪದವಿ ಹೊಂದಿದವರಿಗೆ ಬ್ಯಾಂಕಿAಗ್, ಫೈನ್ಯಾನ್ಸ್, ಇನ್ಸೂರೆನ್ಸ್, ಹಣಕಾಸು ಹಾಗೂ ಸರ್ವೀಸ್ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉದ್ಯೋಗವಕಾ±ಗಳಿದ್ದು ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಆಪ್ತ ಸಮಾಲೋಚನೆಯಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಕಾರವಾರÀದಲ್ಲಿ ತರಬೇತಿಯನ್ನು ನೀಡಿ ಆಯ್ಕೆಯಾದ ಕ್ಷೇತ್ರಕ್ಕೆ ಅನುಗುಣವಾಗಿ ಶೇ. 100 ಪ್ರತಿಶತ ಉದ್ಯೋಗಾವಕಾಶಕ್ಕೆ ಪ್ರೇರಣೆ ನೀಡಲಾಗುತ್ತದೆ. ಈ ಹಿಂದೆ ತರಬೇತಿ ಪಡೆದ ಸಾವಿರಾರು ಅಭ್ಯರ್ಥಿಗಳು ಅನೇಕ ಬಹುರಾಷ್ಟಿçÃಯ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದು ಅವರಲ್ಲಿ ಕೆಲವರು ತಮ್ಮ ಅನಿಸಿಕೆಯನ್ನು ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಿದ್ದಾರೆ.
ಈ ಕಾರ್ಯಕ್ರಮವು ಸೀಮಿತ ಕಾಲವಕಾಶದ್ದಾಗಿದ್ದು ಆಸಕ್ತರು ಸ್ವ -ವಿವರ ಹಾಗೂ ವಿದ್ಯಾರ್ಹತೆಯ ದಾಖಲೆಗಳ ಪ್ರತಿಯೊಂದಿಗೆ ಆಪ್ತ ಸಮಾಲೋಚನೆಯಲ್ಲಿ ಭಾಗವಹಿಸಲು ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7259034150, 9364015936 ಹಾಗೂ 9741519647 ಗೆ ಸಂಪರ್ಕಿಸಬಹುದಾಗಿದೆ ಎಂದು ದೇಶಪಾಂಡೆ ಸ್ಕಿಲ್ಲಿಂಗ್‌ನ ವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
