TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ರೆಸಾರ್ಟ ಉದ್ಯಮದ ಬಗ್ಗೆಪ್ರಚಾರ ಮಾಡುತ್ತೇನೆಂದು ಹೇಳಿ ಲಕ್ಷಾಂತರ ರೂಪಾಯಿ ಯುವತಿಯಿಂದ ಪಂಗನಾಮ

Mar 17, 2024 | ಅಪರಾಧ |

ರೆಸಾರ್ಟ ಉದ್ಯಮದ ಬಗ್ಗೆಪ್ರಚಾರ ಮಾಡುತ್ತೇನೆಂದು ಹೇಳಿ ಲಕ್ಷಾಂತರ ರೂಪಾಯಿ ಯುವತಿಯಿಂದ ಪಂಗನಾಮ

ರೆಸಾರ್ಟ ಉದ್ಯಮದ ಬಗ್ಗೆ ಪ್ರಚಾರ ಮಾಡುತ್ತೇನೆಂದು ಹೇಳಿ ಲಕ್ಷಾಂತರ ರೂಪಾಯಿ ಯುವತಿಯಿಂದ ಪಂಗನಾಮ

ಮೋಸಕ್ಕೆಒಳಗಾದ ಗೋಕರ್ಣದ ನಿವಾಸಿ.

ರೆಸಾರ್ಟ ಉದ್ಯಮದ ಬಗ್ಗೆ ಪ್ರಚಾರ ಮಾಡುತ್ತೇನೆಂದು ಹೇಳಿ ಲಕ್ಷಾಂತರ ರೂಪಾಯಿ ಯುವತಿಯಿಂದ ಪಂಗನಾಮ

ಮೋಸಕ್ಕೆ ಒಳಗಾದ ಗೋಕರ್ಣದ ನಿವಾಸಿ.

ವರದಿ : ಹರೀಶ ಗೌಡ. ಗೋಕರ್ಣ.

ಗೋಕರ್ಣ : ರೆಸಾರ್ಟ ಉದ್ಯಮದ ಬಗ್ಗೆ ಪ್ರಚಾರ ಮಾಡುತ್ತೇನೆ ಎಂದು ಹೇಳಿ, ಒಳ್ಳೆಯ ಸ್ನೇಹ ಬೆಳೆಸಿ ವಿಶ್ವಾಸ ಬರುವಂತೆ ವರ್ತಿಸಿ ರೇಸಾರ್ಟ ಮಾಲಿಕನಿಂದ ಯುವತಿಯೊಬ್ಬಳು ಬರೋಬ್ಬರಿ 3 ಲಕ್ಷದ 29400 ರೂಪಾಯಿ ಪಡೆದುಕೊಂಡು ಪಂಗನಾಮ ಹಾಕಿ ನಾಪತ್ತೆಯಾದ ಘಟನೆ ಗೋಕರ್ಣದಲ್ಲಿ ನಡೆದಿದೆ.

 ಗೋಕರ್ಣದ ಬೀಚ್‌ನಲ್ಲಿರುವ ರೇಸಾರ್ಟ್ನ ವ್ಯಕ್ತಿ ಮೋಸಕ್ಕೆ ಒಳಗಾದವರಾಗಿದ್ದಾರೆ. ಬೆಂಗಳೂರಿನ ಹೇಮಾ ರಾಮ್ ಆಪಾದಿತೆಯಾಗಿದ್ದಾಳೆ.

ಈ ವ್ಯಕ್ತಿ ತನ್ನ ದೂರಿನಲ್ಲಿ ನೀಡಿರುವ ಸಾರಾಂಶವೆನೆ0ದರೆ ಇನ್ಸಾ÷್ಟಗ್ರಾಂ ಮೂಲಕ ಪರಿಚಯವಾದ ಬೆಂಗಳೂರಿನ ಹೇಮಾ ರಾಮ್ ಎಂಬಾಕೆ ಗೋಕರ್ಣದ ಬೇಲೆಖಾನದ ರೇಸಾರ್ಟ ಬಗ್ಗೆ ಪ್ರಚಾರ ಮಾಡುತ್ತೇನೆ ಎಂದು ಹೇಳಿ. ಒಳ್ಳೆಯ ಸ್ನೇಹ ಬೆಳೆಸಿ ವಿಶ್ವಾಸ ಬರುವಂತೆ ವರ್ತಿಸಿ 05-02-2023 ರಂದು ಗೋಕರ್ಣಕ್ಕೆ ಬಂದು ತನಗೆ ಭೇಟಿಯಾಗಿ, ತನ್ನ ರೆಸಾರ್ಟ ಬಗ್ಗೆ, ಪ್ರಚಾರ ಮಾಡುವುದಾಗಿ ತಿಳಿಸಿದ್ದರು.

ತನ್ನಿಂದ ಒಟ್ಟೂ 3 ಲಕ್ಷದ 29,400 ರೂಪಾಯಿ (2 ಲಕ್ಷದ 34,000/- ರೂಪಾಯಿಯನ್ನು ಆನ್ ಲೈನ್ ಮೂಲಕ ಮತ್ತು 95 ಸಾವಿರ ರೂಪಾಯಿ ನಗದು ರೂಪದಲ್ಲಿ. ಪಡೆದುಕೊಂಡಿದ್ದಳು. ಸ್ವಲ್ಪ ಸಮಯದ ಬಳಿಕ ತಾನು ಸಾಲವನ್ನು ಹಿಂತಿರುಗಿಸುವAತೆ ಕೇಳಿದಾಗ ಆಪಾದಿತೆಯು ಏನಾದರೊಂದು ಕಾರಣವನ್ನು ಹೇಳಿ ಕೊಟ್ಟ ಹಣವನ್ನು ಹಿಂತಿರುಗಿಸುವುದಾಗಿ ನಂಬಿಸುತ್ತಾ ಬಂದಿದ್ದಳು.

ಕಳೆದ ನವೆಂಬರ್ ತಿಂಗಳಲ್ಲಿ ತಾನು ಸಾಲವನ್ನು ಹಿಂತಿರುಗಿಸುವ0ತೆ ಒತ್ತಾಯಿಸಲು ಪ್ರಾರಂಭಿಸಿದಾಗ ಆಪಾದಿತೆಯು ಸರಿಯಾಗಿ ಮಾತನಾಡದೇ ತನ್ನ ಪೋನ್ ಕರೆಯನ್ನು ಸ್ವೀಕರಿಸಲು ನಿಲ್ಲಿಸಿದ್ದು ಇರುತ್ತದೆ. ಈ ಬಗ್ಗೆ ತಾನು ದಿನಾಂಕ: 11-11-2023 ರಂದು ಆಪಾದಿತೆಯ ವಿಳಾಸಕ್ಕೆ ಭೇಟಿ ನೀಡಿದರೂ ಆಪಾದಿತೆ ಸಿಕ್ಕಿರುವುದಿಲ್ಲ. ಬಳಿಕ ಕಳೆದ ಡಿಸೆಂಬರ್ ತಿಂಗಳಲ್ಲಿಯೂ ಸಹ ತಾನು ಆಪಾದಿಗೆ ಹಣವನು ಮರಳಿಸಲು ಕೇಳಿದ್ದು ಇನ್ನು 2 ವಾರದ ಒಳಗಾಗಿ ಮರಳಿಸುವುದಾಗಿ ತಿಳಿಸಿದ್ದಳು.

ಆ ನಂತರದಲ್ಲಿ ತಾನು ಹಣವನ್ನು ಹಿಂತಿರುಗಿಸುವAತೆ ಆಪಾದಿತೆಗೆ ಕೇಳಿದಾಗ ಇನ್ನೊಮ್ಮೆ ಹಣವನ್ನು ಕೇಳಿದ್ದೆ ಆದಲ್ಲಿ ತನ್ನ ಮೇಲೆ ಸುಳ್ಳು ದೂರು ನೀಡುವುದಾಗಿ ಹಾಗೂ ತನ್ನನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿ ಪಡೆದ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿದ್ದಾಳೆ ಎಂದು ಮೋಸ ಹೋದ ವ್ಯಕ್ತಿ ಕುಮಟಾ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಗೋಕರ್ಣ ಠಾಣೆಯ ಪಿಎಸೈ ಶಶಿಧರ ಕೆ.ಎಚ್. ಅವರು ಆಪಾದಿತೆ ಹೇಮಾ ರಾವ್ ಅವರ ವಿರುದ್ಧ ಈಪಿಸಿ 420 ಹಾಗೂ 506 ಕಲಂ ಅಡಿ ಪ್ರಕರಣ ದಾಖಲಿಸಿಕೊಮಡು ಕಾನೂನು ಕ್ರಮ ಕೈಗೊಂಡಿದ್ದಾರೆ.

Share:

Rate:

Previousನೂರಾರು ಜನರ ಎದುರೆ ಸೀನಿಮೀಯ ರೀತಿಯಲ್ಲಿ ಕುತ್ತಿಗೆಯಲ್ಲಿದ್ದ ಬಂಗಾರದ ಚೈನನ್ನು ಹರಿದುಕೊಂಡು ನಾಪತ್ತೆಯಾದ ಭೂಪ
Nextನೂರಾರು ಜನರ ಎದುರೆ ಸೀನಿಮೀಯ ರೀತಿಯಲ್ಲಿ ಕುತ್ತಿಗೆಯಲ್ಲಿದ್ದ ಬಂಗಾರದಚೈನನ್ನು ಹರಿದುಕೊಂಡು ನಾಪತ್ತೆಯಾಗಿದ್ದ ದರೋಡೆಕೋರನನ್ನು ಬಂಧಿಸಿದ ಗೋಕರ್ಣ ಪೊಲೀಸರು

Related Posts

ಬೈಕ್ ಹಾಗೂ ಕಾರ್ ಅಘಘಾತ : ಭೈಕ್ ಸವಾರ ಸಾವು

ಬೈಕ್ ಹಾಗೂ ಕಾರ್ ಅಘಘಾತ : ಭೈಕ್ ಸವಾರ ಸಾವು

December 18, 2023

ಆಶಾ ಕಾರ್ಯಕರ್ತೆಯೊರ್ವಳ ಮೇಲೆ ಅತ್ಯಾಚಾರಕ್ಕೆಯತ್ನ :<br>ಹುದ್ದೆತೊರೆದ ಮನ ನೊಂದ ಮಹಿಳೆ

ಆಶಾ ಕಾರ್ಯಕರ್ತೆಯೊರ್ವಳ ಮೇಲೆ ಅತ್ಯಾಚಾರಕ್ಕೆಯತ್ನ :
ಹುದ್ದೆತೊರೆದ ಮನ ನೊಂದ ಮಹಿಳೆ

July 15, 2022

ಬಸ್ ಚಲಿಸುತ್ತಿರುವಾಗಲೆ ಕಳಚಿ ಬಿದ್ದ ಬಾಗಿಲು : ಅಂಕೋಲಾದಲ್ಲಿ ತಪ್ಪಿದ ಭಾರಿ ಅನಾಹುತ

ಬಸ್ ಚಲಿಸುತ್ತಿರುವಾಗಲೆ ಕಳಚಿ ಬಿದ್ದ ಬಾಗಿಲು : ಅಂಕೋಲಾದಲ್ಲಿ ತಪ್ಪಿದ ಭಾರಿ ಅನಾಹುತ

July 8, 2023

 ಜಮಗೋಡ ಬಳಿ ಕಾರ ಪಲ್ಟಿ : ದಂಪತಿಗಳು ಸಾವು

 ಜಮಗೋಡ ಬಳಿ ಕಾರ ಪಲ್ಟಿ : ದಂಪತಿಗಳು ಸಾವು

January 12, 2025

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
  • ಕೊಡ್ಲಗದ್ದೆಯಲ್ಲಿ ಹೆಚ್ಚಿದ ಚಿರತೆ ಹಾವಳಿ: ಗ್ರಾಮಸ್ಥರಲ್ಲಿ ಭೀತಿ
    ಕೊಡ್ಲಗದ್ದೆಯಲ್ಲಿ ಹೆಚ್ಚಿದ ಚಿರತೆ ಹಾವಳಿ: ಗ್ರಾಮಸ್ಥರಲ್ಲಿ ಭೀತಿ
  • ಮಹಿಳೆ ಸ್ನಾನ ಮಾಡುವವದನ್ನು ಇಣಕಿ ನೋಡಲು ಹೋಗಿ ಸಿಕ್ಕಿಬಿದ್ದ ಮಾಜಿ ಮಟ್ಕಾ ಬುಕ್ಕಿ
    ಮಹಿಳೆ ಸ್ನಾನ ಮಾಡುವವದನ್ನು ಇಣಕಿ ನೋಡಲು ಹೋಗಿ ಸಿಕ್ಕಿಬಿದ್ದ ಮಾಜಿ ಮಟ್ಕಾ ಬುಕ್ಕಿ
  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy