ನೂರಾರು ಜನರ ಎದುರೆ ಸೀನಿಮೀಯ ರೀತಿಯಲ್ಲಿ ಕುತ್ತಿಗೆಯಲ್ಲಿದ್ದ ಬಂಗಾರದ ಚೈನನ್ನು ಹರಿದುಕೊಂಡು ನಾಪತ್ತೆಯಾಗಿದ್ದ ದರೋಡೆಕೋರನನ್ನು ಬಂಧಿಸಿದ ಗೋಕರ್ಣ ಪೊಲೀಸರು
ಗೋಕರ್ಣದ ತೇರು ಎಳೆಯುತ್ತಿದ್ದ ಸಂದರ್ಭದಲ್ಲಿ ನಡೆದಿದ್ದ ಘಟನೆ

ವರದಿ : ದಾಮು ಗೌಡ. ಗೋಕರ್ಣ
ಗೋಕರ್ಣ : ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಮಹಾಬಲೇಶ್ವರನ ತೇರು ಎಳೆಯುತ್ತಿದ್ದ ಸಂದರ್ಭದಲ್ಲಿ ಸಿನಿಮೀಯ ರೀತಿಯಲ್ಲಿ ಕುತ್ತಿಗೆಯಲ್ಲಿದ್ದ ಬಂಗಾರದ ಚೈನನ್ನು ಹರಿದುಕೊಂಡು ನಾಪತ್ತೆಯಾಗಿದ್ದ ದರೋಡೆಕೋರನನ್ನು ಇಲ್ಲಿನ ಗೋಕರ್ಣ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಮಹಾರಾಷ್ಟçದ ವಿಜಯ ನಗರ ಜಿಲ್ಲೆಯ ಪಾತ್ರಡಿಯ ಆಕಾಶ ಮೋಹನ ದೂಡೆ ಬಂಧಿತ ಆರೋಪಿಯಾಗಿದ್ದಾನೆ. ಇತನ ಜೊತೆ ಇನ್ನು ಸಹ ಮೂವರು ಮೂವರು ಆರೋಪಿಗಳಿದ್ದು ಅವರ ಪತ್ತೆಗೂ ಸಹ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.
ಘಟನೆಯ ಹಿನ್ನಲೆ..?
ವೃತ್ತಿಯಲ್ಲಿ ಸಾಪ್ಟವೇರ್ ಇಂಜೀನಿಯರ್ ಆಗಿರುವ ಅಗ್ರಗೋಣದ ವಿನಾಯಕ ಕೃಷ್ಣಮೂರ್ತಿ ನಾಗರಕಟ್ಟೆ (34) ಅವರು ತನ್ನ ತಮ್ಮ ನಾಗೇಂದ್ರ ಕೃಷ್ಣಮೂರ್ತಿ ನಾಗರಕಟ್ಟೆ ಮತ್ತು ಸ್ನೇಹಿತರಾದ ರಮಾನಂದ ಕಮಲಾಕರ ನಾಯಕ ಹಾಗೂ ಶಶಿಕಾಂತ ದೇವಿದಾಸ ನಾಯಕ ಇವರುಗಳೊಂದಿಗೆ ಗೋಕರ್ಣದ ಗಣೇಶ ಗೆಸ್ಟ್ ಹೌಸ್ ಎದುರು ನಿಂತುಕೊ0ಡು ರಥೋತ್ಸವವನ್ನು ನೋಡುತ್ತಿದ್ದರು.
ಈ ವೇಳೆ ಒಬ್ಬ ಅಪರಿಚಿತ ವ್ಯಕ್ತಿಯು ಹಿಂದಿನಿ0ದ ಬಂದು ವಿನಾಯಕ ಕೃಷ್ಣಮೂರ್ತಿ ನಾಗರಕಟ್ಟೆ ಕುತ್ತಿಗೆಗೆ ಕೈ ಹಾಕಿ, ಕುತ್ತಿಗೆಯಲ್ಲಿದ್ದ ಚೈನನ್ನು ಹರಿದುಕೊಂಡು ಓಡಿ ಹೋಗಿದ್ದಾನೆ.
ಚೈನನ್ನು ಹರಿದುಕೊಂಡು ಓಡಿ ಹೋದ ಅಪರಿಚಿತ ವ್ಯಕ್ತಿಗೆ ಸುಮಾರು 25 ವರ್ಷ ವಯಸ್ಸಾಗಿರಬಹುದು. ಸದೃಢ ಮೈಕಟ್ಟನ್ನು ಮತ್ತು ಕಪ್ಪು ಮೈ ಬಣ್ಣವನ್ನು ಹೊಂದಿದ್ದು, ಕ್ರೀಮ್ ಕಲರ್ ಅರ್ಧ ತೋಳಿನ ಟಿ ಶರ್ಟ ಹಾಗೂ ಬೂದು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ ಎಂದು ತನ್ನ ದೂರಿನಲ್ಲಿ ವಿನಾಯಕ ನಾಗರಕಟ್ಟೆ ತಿಳಿಸಿದ್ದರು.
ದರೋಡೆಗೊಳಗಾದ ಬಂಗಾರದ ಚೈನ್ 14 ಗ್ರಾಂ ಇದ್ದು, ಅದರ ಅಂದಾಜು ಮೌಲ್ಯ ಸುಮಾರು 84 ಸಾವಿರ ರೂಪಾಯಿ ಮೌಲ್ಯದ್ದಾಗಿರುವ ತನ್ನ ಚೈನನ್ನು ದೋಚಿಕೊಂಡು ಹೋದ ಸದರ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ತನ್ನ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಗೋಕರ್ಣ ಠಾಣೆಯ ಸಿಪಿಐ ಯೊಗೇಶ ಕೆ.ಎಮ್, ಪಿಎಸೈ ಶಶಿಧರ ಕೆ.ಎಚ್. ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿ, ನಾಗರಿಕರ ಆತಂಕವನ್ನು ದೂರ ಮಾಡುವಲ್ಲಿ ಕಾರಣೀಕರ್ತರಾಗಿದ್ದಾರೆ.
ಪೊಲೀಸ ಸಿಬ್ಬಂದಿಗಳಾದ ರಾಜೇಶ ನಾಯ್ಕ, ನಾಗರಾಜ್ ನಾಯ್ಕ, ಸಚೀನ ನಾಯ್ಕ, ಅನುರಾಜ್ ನಾಯ್ಕ, ಮಂಜುನಾಥ ನಾಯಕ, ಪರಮೇಶ್ವರ, ಚಾಲಕ ಗಣೇಶ ಕಾರ್ಯಾಚರಣೆಯಲ್ಲಿದ್ದರು.