ಮಾ. 24,25 ರಂದು ಬಳಲೆ – ಮಾದನಗೇರಿ ನಾಮಧಾರಿ ಸಮಾಜದ ಸುಗ್ಗಿ ಉತ್ಸವ
53 ವರ್ಷಗಳ ನಂತರ ಮತ್ತೆ ಮರು ಚಾಲನೆ ಪಡೆದುಕೊಳ್ಳಲಿರುವ ಸುಗ್ಗಿ

ಅಂಕೋಲಾ : ಬಳಲೆ – ಮಾದನಗೇರಿ ನಾಮಧಾರಿ ಸಮಾಜದ ಸುಗ್ಗಿ ಉತ್ಸವಕ್ಕೆ 53 ವರ್ಷಗಳ ನಂತರ ಮತ್ತೆ ಮರು ಚಾಲನೆ ನೀಡಲಾಗುತ್ತಿದೆ. ಮಾ. 24 ಮತ್ತು 25 ರಂದು ಸುಗ್ಗಿ ಉತ್ಸವವು ಸಂಭ್ರಮದಿAದ ನಡೆಯಲಿದೆ ಎಂದು ನಾಮಧಾರಿ ಸಮಾಜದ ಯಜಮಾನ ಜಟ್ಟಿ ನಾಯ್ಕ ಹೇಳಿದರು.
ಅವರು ಸುಗ್ಗಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಕಲೆ-ಸಂಸ್ಕçತಿಯನ್ನು ಕಾಪಿಟ್ಟುಕೊಂಡು, ನಾಮಧಾರಿ ಸಮಾಜದ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎನ್ನುವ ಉದ್ದೇಶದಿಂದ ಸಮಾಜದ ಎಲ್ಲರ ಒಮ್ಮತದ ಅಭಿಪ್ರಾಯದ ಮೇರೆಗೆ ಸುಗ್ಗಿ ಉತ್ಸವವನ್ನು 53 ವರ್ಷಗಳ ನಂತರ ಮತ್ತೆ ಪ್ರಾರಂಭಿಸಲಾಗುತ್ತಿದೆ. ಈ ಭಾಗದಲ್ಲಿ ಸಮಾಜದ 53 ಮನೆಗಳಿದ್ದು, ಅವರೆಲ್ಲರ ಮನೆ ಹಾಗೂ ಆಹ್ವಾನಿತರಿಂದ ಗೌರವ ಸ್ವೀಕರಿಸಲಾಗುತ್ತದೆ ಎಂದರು.
ಸಗಡಗೇರಿ ಗ್ರಾಪಂ ಅಧ್ಯಕ್ಷ ಶ್ರವಣ ಮುಕುಂದ ನಾಯ್ಕ ಮಾತನಾಡಿ, ಸುಗ್ಗಿ ಉತ್ಸವದಿಂದಾಗಿ ವಿಶೇಷವಾಗಿ ನಮ್ಮಲ್ಲಿ ಸಂಭ್ರಮ ವಾತಾವರಣ ಕಳೆ ಕಟ್ಟಿದೆ. ಇದನ್ನು ಪ್ರತಿ ವರ್ಷವು ಮುಂದುವರೆಸಿಕೊAಡು ಹೋಗುವ ಅಭಿಲಾಸೆಯು ನಮ್ಮಲ್ಲಿದೆ. ಬಂಕಿಕೊಡ್ಲ– ಹನೇಹಳ್ಳಿಯ ಭಾಗದ ನುರಿತ ಸುಗ್ಗಿ ತಂಡದವರು ನಮಗೆ ಸುಗ್ಗಿ ಕುಣಿತ ತರಭೇತಿ ನೀಡಿ, ಕುಣಿತಕ್ಕೆ ಅಣಿಗೊಳಿಸಿದ್ದಾರೆ. ಮಾ. 24 ಕ್ಕೆ ಸುಗ್ಗಿ ಪ್ರಾರಂಭಗೊAಡು, 25 ಕ್ಕೆ ಸಂಪನ್ನಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ನಾಮಧಾರಿ ಮೇತ್ರಿ ಮನೆತನದ ಬಳಗು ನಾರಾಯಣ ನಾಯ್ಕ, ಪ್ರಮುಖರಾದ ನಾರಾಯಣ ನಾಯ್ಕ, ಮಾದೇವ ನಾಯ್ಕ, ಗೋವಿಂದ ನಾಯ್ಕ, ಸತೀಶ ನಾಯ್ಕ, ಮಾಣಿ ನಾಯ್ಕ, ಜಟ್ಟಿ ಮಾಸ್ತಿ ನಾಯ್ಕ, ಬಾಬು ನಾಯ್ಕ, ಶಂಕರ ನಾಯ್ಕ, ಸುರೇಶ ನಾಯ್ಕ, ಅಶೋಕ ನಾಯ್ಕ, ವಿಠೋಬ ನಾಯ್ಕ, ವೆಂಕಟರಮಣ ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.