ನಿಗಧಿತ ಸಮಯಕ್ಕಿಂತ ಮುಂಚಿತವಾಗಿ ಓಪನ್ ಆದ ಪಿಕಾಕ ಬಾರ್
ಅಬಕಾರಿ ನೀರಿಕ್ಷಕ ಚಾಲುಕ್ಯ ಅವರಿಂದ ದಾಳಿ

ಅಂಕೋಲÁ : ನಿಗಧಿತ ಸಮಯಕ್ಕಿಂತ ಮುಂಚಿತವಾಗಿ ಬಾರ್ ಓಪನ್ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದ ಇಲ್ಲಿನ ರಾಷ್ಟಿçÃಯ ಹೆದ್ದಾರಿ ಅಂಚಿನಲ್ಲಿರುವ ಪಿಕಾಕ್ ಬಾರಗೆ ಅಬಕಾರಿ ನೀರಿಕ್ಷಕ ಚಾಲುಕ್ಯ ಶಾಪುರ ಅವರು ದಾಳಿ ನಡೆಸಿ ದಂಡ ವಿಧಿಸಿದ ಘಟನೆ ಮಂಗಳವಾರ ನಡೆದಿದೆ.
ಪಿಕಾಕ್ ಬಾರನ ಲೈಸೆನ್ಸ್ ವೆಂಡರ್ ನವೀನಕುಮಾರ ಅವರ ಮೇಲೆ ಅಬಕಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ.
ಬಾರ್ ಲೈಸನ್ಸ್ ಪಡೆದವರು ಬೆಳಿಗ್ಗೆ 10 ಘಂಟೆಯಿAದ ರಾತ್ರಿ 11-30 ರ ತನಕ ವ್ಯಹಿವಾಟು ನಡೆಸಬೇಕು ಎಂಬುದು ಅಬಕಾರಿ ನಿಯಮದಲ್ಲಿದೆ. ಆದರೆ ಬೆಳಿಗ್ಗೆ 9-15 ರ ಸುಮಾರಿಗೆ ಅಬಕಾರಿ ನೀರಿಕ್ಷಕ ಚಾಲುಕ್ಯ ಅವರು ತಮ್ಮ ಸಿಬ್ಬಂದಿಗಳೊAದಿಗೆ ತೆರಳಿ ಪರಿಶೀಲನೆಗೆ ನಡೆಸಿದಾಗ ಬಾರ್ ಓಪನ್ ಆಗಿರುವದು ಕಂಡು ಬಂದಿದೆ.
ಈ ಬಗ್ಗೆ ಪರಿಶೀಲನೆ ನಡೆಸಿದ ಅಬಕಾರಿ ನೀರಿಕ್ಷಕರು ಪಿಕಾಕ್ ಬಾರನವರು ಅಬಕಾರಿ ಲೈಸನ್ಸ್ ಶರತ್ತು ಉಲ್ಲಂಘನೆ ಮಾಡಿದ್ದು ಮೇಲ್ನೋಟಕ್ಕೆ ಸಾಬೀತುಗೊಂಡಿದ್ದರಿ0ದ ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅಬಕಾರಿ ಹೆಡ್ ಕಾನಸ್ಟೇಬಲಗಳಾದ ನಾಗೇಂದ್ರ ಬೋವಿವಡ್ಡರ, ಕೃಷ್ಣಮೂರ್ತಿ ಬಂಟ ದಾಳಿಯಲ್ಲಿದ್ದರು.