ಅಕ್ರಮವಾಗಿ ಮರಳು ತುಂಬಿಕೊ0ಡು ಸಾಗುತ್ತಿದ್ದ (ಟಾಟಾ 407) ವಾಹನವನ್ನು ವಶಕ್ಕೆ ಪಡೆದ ಅಂಕೋಲಾ ಪೊಲೀಸರು

ಅಂಕೋಲÁ : (ಟಾಟಾ 407) ವಾಹನದಲ್ಲಿ ಅಕ್ರಮವಾಗಿ ಮರಳು ತುಂಬಿಕೊ0ಡು ಸಾಗುತ್ತಿದ್ದ ವೇಳೆ ಅಂಕೋಲಾ ಪೊಲೀಸರು ದಾಳಿ ನಡೆಸಿ , ಮರಳು ಲಾರಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡ ಘಟನೆ ನಡೆದಿದೆ.
ರಾಷ್ಟಿçÃಯ ಹೆದ್ದಾರಿಯಿಂದ ಬಿಂದಾಸ್ ಆಗಿ ಅಕ್ರಮವಾಗಿ ಮರಳು ತುಂಬಿಕೊ0ಡು ಬರುತ್ತಿದ್ದ ಬಗ್ಗೆ ಮಾಹಿತಿಯ ಮೇರೆಗೆ ಪಿಎಸೈ ಉದ್ದಪ್ಪ ದರೆಪ್ಪನವರ್ ನೇತ್ರತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿ (ಟಾಟಾ 407) ಎರಡುವಾಹನವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಖಡಕ್ ಅಧಿಕಾರಿಯೆಂದೆ ಗುರುತಿಸಿಕೊಂಡ ಪಿಎಸೈ ಉದ್ಧಪ್ಪನವರ ಅವರ ದಕ್ಷತೆಯ ಕಾರ್ಯಾಚರಣೆಗೆ ಅಂಕೋಲಾದಲ್ಲಿ ಶ್ಲಾಘನೀಯ ಮಾತುಗಳು ಕೇಳಿ ಬಂದಿದೆ. ಲಾರಿಯನ್ನು ಬಿಟ್ಟು ಬಿಡುವಂತೆ ಲಕ್ಷಾಂತರ ರೂಪಾಯಿ ಆಮಿಷ ಒಡ್ಡಿದರೂ ಸಹ ಯಾವುದೇ ಮುಲಾಜಿಲ್ಲದೆ ಪಿಎಸೈ ಧರಪ್ಪನವರ್ ಕಾನೂನು ಕ್ರಮ ಕೈಗೊಂಡಿರುವದು ಪೊಲೀಸ್ ವ್ಯವಸ್ಥೆಯ ಮೇಲೆ ಜನರಿಗೆ ವಿಶ್ವಾಸ ಬರುವಂತಾಗಿದೆ.
ಚುನಾವಣೆಯ ನೀತಿ ಸಂಹಿತೆಯ ಬಿಗಿ ಕಾನೂನಿನ ಕಾವು ಅಂಕೋಲಾದಲ್ಲಿ ನಡೆಯುತ್ತಿದ್ದ ಮರಳು ಮಾಫಿಯಾಗೆ ಬಿಸಿ ಮುಟ್ಟುವಂತಾಗಿದೆ. ವಶಕ್ಕೆ ಪಡೆದ ವಾಹನವನ್ನು ಪೊಲೀಸ್ ವಸತಿಗ್ರಹದ ಆವಾರದಲ್ಲಿ ಇಡಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.