ಅಸಭ್ಯವಾಗಿ ವರ್ತಿಸಿದ ಮಾವನ ವಿರುದ್ದ ಪ್ರಕರಣ ದಾಖಲಿಸಿದ ಸೊಸೆ

ಅಂಕೋಲಾ : ಮಾವನೆ ಸೊಸೆಯನ್ನ ಅಸಭ್ಯ ರೀತಿಯಲ್ಲಿ ನೋಡಿ, ತನಗೆ ಸಹಕರಿಸುವಂತೆ ಬೆದರಿಕೆ ಹಾಕಿದ ವಿಲಕ್ಷಣ ಘಟನೆಯ ಕುರಿತು ಅಂಕೋಲಾ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.
ತಾಲೂಕಿನ ಹಿಚ್ಕಡದ ಮಹಿಳೆಯೊಬ್ಬಳು ತನ್ನ ಗಂಡ ಹಾಗೂ ಮಾವನ ವಿರುದ್ಧ ಪೊಲೀಸ್ ದೂರು ನೀಡಿದ್ದಾಳೆ. ಈ ಬಗ್ಗೆ ಪಿಎಸೈ ಜಯಶ್ರೀ ಪ್ರಭಾಕರ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಎಫ್.ಐ.ಆರ್ ನಲ್ಲಿರುವ ದೂರಿನ ಸಾರಾಂಶ :
ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ 23 ವರ್ಷದ ನಿಧಿ ( ಹೆಸರು ಬದಲಾಯಿಸಲಾಗಿದೆ) ಬೆಳಗಾವಿ ಜಿಲ್ಲೆಯ ಕಾವೇರಿ ನಗರದ ಸಂಪ್ರೀತ ತಂದೆ ಕೇಶವ ನಾಯಕ ಇತನೊಂದಿಗೆ 19-03-2023 ರಂದು ಅಂಕೋಲಾ ತಾಲೂಕಾ ನಾಡವರ ಸಭಾ ಭವನದಲ್ಲಿ ಗುರು ಹಿರಿಯರ ಸಮ್ಮುಖದಲಿ ಹಿಂದೂ ಸಂಪ್ರದಾಯದAತೆ ಮದುವೆ ಮಾಡಿಕೊಂಡಿದ್ದರು.
ಮದುವೆಯಾದ ನಂತರ ನಿಧಿ ತನ್ನ ಗಂಡನ ಮನೆಯಲ್ಲಿ ವಾಸವಾಗಿದ್ದು, ಮದುವೆಯಾದ ಹೊಸದರಲ್ಲಿ ಚೆನ್ನಾಗಿ ನೋಡಿಕೊಂಡಿದ್ದು ನಂತರ ಗಂಡ ಹಾಗೂ ಮಾವ ಸೇರಿ ಸಣ್ಣ ಪುಟ್ಟ ವಿಷಯಕ್ಕೆ ವಿನಾಕಾರಣ ಕೆಟ್ಟದಾಗಿ ಬೈದು ವಿನಾಕಾರಣ ತೊಂದರೆ ಕೊಡುತ್ತಿದ್ದರು ಎಂಬ ಆರೋಪವಿದೆ.
ಫಿರ್ಯಾದಿಯು ಬೆಳಗಾವಿಯಲಿ ತನ್ನ ಗಂಡನ ಮನೆಯಲಿ ಹಾಗೂ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾಗ ನಿಧಿಗೆ ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿದ್ದಾರೆ.
ನಿಧಿ ಬೆಳಗಾವಿ ತನ್ನ ಗಂಡ ಮನೆಯಲ್ಲಿ ಒಬ್ಬಳೇ ಮಲಗಿದ್ದಾಗ ಮಾವ ಕೆಟ್ಟ ರೀತಿಯಲ್ಲಿ ನೋಡಿ ತಾನು ಹೇಳಿದಂತೆ ಕೆಳದಿದ್ದಲ್ಲಿ ಇಲ್ಲ ಸಲ್ಲದ ಆಪಾದನೆ ಮಾಡಿ ಏನಾದರೂ ಮಾಡುತ್ತೇನೆ ಅಂತಾ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಹಾಗೆ ತನ್ನ ತವರು ಮನೆಯಲ್ಲಿ ಬಂದು ವಾಸವಾಗಿದ್ದಾಗಲೂ 14-05-2023 ರಂದು ರಾತ್ರಿ ತನ್ನ ಗಂಡ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಮಾನಸಿಕ-ದೈಹಿಕ ಕಿರುಕುಳ ನೀಡಿದ್ದಾನೆ. ಈ ಎಲ್ಲ ಕಹಿ ಘಟನೆಯನ್ನು ಸಹಿಸಿಕೊಂಡು ಬಂದರು ನನಗೆ ಕಿರುಕುಳ ಮಾತ್ರ ನಿಂತಿರಲಿಲ್ಲ.
ಅಂಕೋಲಾದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಹೋಗಿ ನನಗಾದ ಅನ್ಯಾಯ ವಿನಂತಿಸಿಕೊAಡಾಗ, ಅಲ್ಲಿಯೂ ಸಹ ನನ್ನ ಗಂಡ ಹೊಂದಾಣಿಕೆ ಮಾಡಿಕೊಂಡಿಲ್ಲ. ಹೀಗಾಗಿ ಮನೆಯವರೊಂದಿಗೆ ಚರ್ಚಿಸಿದ ನಂತರ ವಿಳಂಬವಾಗಿ ದೂರು ನೀಡುತ್ತಿದ್ದೇನೆ ಎಂದು ಸಂತ್ರಸ್ತ ಮಹಿಳೆ ತನ್ನ ದೂರಿನ ಸಾರಾಂಶದಲ್ಲಿ ವಿವರಿಸಿದ್ದಾಳೆ.