ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ನಡೆಸುತ್ತಿದ್ದವನ ಬಂಧನ

ವರದಿ : ದಾಮು ಗೋಕರ್ಣ.
ಗೋಕರ್ಣ ಹಾಗೂ ಅಂಕೋಲಾದಲ್ಲಿ ಕಾಣಿಸಿಕೊಂಡ ಡೆಂಗ್ಯೂ ಜ್ವರ ಕ್ಷೀಣಿಸುತ್ತ ಬಂದಿದೆ. ಆದರೆ ಐಪಿಎಲ್ ಕ್ರಿಕೇಟ್ ಜ್ವರದ ಟೆಂಪ್ರೇಚರ್ ಮೀತಿ ಮೀರಿದ್ದು, ಬೆಟ್ಟಿಂಗ್ ದಂಧೆಯ ಮೂಲಕ ಕೆಲವು ಕ್ರಿಕೇಟ್ ಪ್ರೇಮಿಗಳು ತಮ್ಮ ಜ್ವರದ ದಣಿವನ್ನು ಆರಿಸಿಕೊಳ್ಳುತ್ತಿದ್ದಾರೆ.
ಈ ನಡುವೆ ಗೋಕರ್ಣ ಪೊಲೀಸರು ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪದ ಮೇಲೆ ಮೇಲಿನ ಹಿರೇಗುತ್ತಿಯ, ಚಾಲಕ ವೃತ್ತಿಯ ನಾಗರಾಜ ವಿಷ್ಣು ಭಂಡಾರಿ (37) ಅವರನ್ನು ವಶಕ್ಕೆ ಪಡೆದು ಎಫ್‌ಐಆರ್ ದಾಖಲಿಸಿದ್ದಾರೆ.
ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಬಂಗ್ಲೆಗುಡ್ಡದ ಐ.ಬಿ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ನಾಗರಾಜ ವಿಷ್ಣು ಭಂಡಾರಿ, ಈತನು ಐಪಿಎಲ್ ಟಿ-20 ಯ ಆರ್‌ಸಿಬಿ ಮತ್ತು ರಾಜಸ್ಥಾನ ತಂಡಗಳ ನಡುವೆ ನಡೆಯುವ ಪಂದ್ಯದಲ್ಲಿ ಯಾರು ಹೆಚ್ಚು ರನ್ ಗಳಿಸುತ್ತಾರೋ, ಯಾರು ಹೆಚ್ಚು ವಿಕೇಟ್ ತೆಗೆಯುತ್ತಾರೋ ಅವರ ಮೇಲೆ ಜನರಿಂದ ಹಣವನ್ನು ಪಂಥವಾಗಿ ಕಟ್ಟಿಸಿಕೊಳ್ಳುತ್ತಿದ್ದಾಗ ಸಿಪಿಐ ಯೊಗೇಶ ಕೆ.ಎಮ್. ತಮ್ಮ ಸಿಬ್ಬಂದಿಗಳೊAದಿಗೆ ದಾಳಿ ನಡೆಸಿ 15 ಸಾವಿರ ನಗದು ಸೇರಿದಂತೆ ಬೆಟ್ಟಿಂಗ್‌ಗೆ ಬಳಸಿದ ವಿವಿಧ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂಕೋಲಾದ ದೀಪು ಎಂಬಾತನು ಕೂಡ ಈ ಬೆಟ್ಟಿಂಗ್ ದಂಧೆಯಲ್ಲಿ ಪಾಲ್ಗೊಂಡಿರುವ ಅನುಮಾನದ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸಿದ್ದಾರೆ.
ಎಎಸೈ ಯಲ್ಲಪ್ಪ ಕಾಗವಾಡ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.