ಬಸ್ ನಿಲ್ದಾಣದಲ್ಲಿ ಮತ್ತೆ ಮುಂದುವರಿದ ಬೈಕ್ ಕಳ್ಳತನ

ಅಂಕೋಲಾ : ಇಲ್ಲಿಯ ಬಸ್ ನಿಲ್ದಾಣದಲ್ಲಿ ಬೈಕ್ ಕಳ್ಳರ ಕರಾಮತ್ತು ಮುತ್ತೆ ಮುಂದುವರಿದಿದೆ. ಪಾರ್ಕಿಂಗ್ ಸ್ಥಳದಲ್ಲಿ ಇಟ್ಟಿದ್ದ ಬೈಕ್‌ನ್ನು ಕದ್ದೊಯ್ದಲಾಗಿದ್ದು, ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಲಗೇರಿಯ ಕದಂಬ ವಾಟರ್ ಪ್ಯೂರಿಪಾಯರ್‌ನ ಹತ್ತಿರದ ನಿವಾಸಿ ಅಕ್ಷಯ ಆನಂದು ಆಚಾರಿ. ಹನುಮಟ್ಟಾ ಅವರ ಹಿರೋ ಹೊಂಡಾ ಪ್ಲಸ್ ಬೈಕ್ ಕಳ್ಳತನವಾಗಿದೆ. ಶುಕ್ರವಾರ ಬೆಳಿಗ್ಗೆ 7-30 ಗಂಟೆಯಿಂದ ಮದ್ಯಾಹ್ನ 2-45ರ ವೇಳೆಯ ನಡುವೆ ಬೈಕ್ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದಾರೆ. ಪಿಎಸೈ ಜಯಶ್ರೀ ಪ್ರಭಾಕರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಸಿಟಿಸಿಟಿಯಲ್ಲಿ ಸೆರೆ :
ಕಳೆದ 15 ದಿನದ ಹಿಂದಷ್ಟೇ ಇಲ್ಲಿಯ ಬಸ್ ನಿಲ್ದಾಣದಲ್ಲಿ ಸುರಕ್ಷತೆಯ ದೃಷ್ಠಿಯಿಂದ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿತ್ತು. ಸಿಸಿ ಕ್ಯಾಮೆರಾ ಅಳವಡಿಸಿದ ಮೇಲೆ ಇಲ್ಲಿ ನಡೆಯುವ ಕಳ್ಳತನಕ್ಕೆ ಕಡಿವಾಣ ಬೀಳಬಹುದು ಎಂಬ ಲೆಕ್ಕಾಚಾರ ಪೊಲೀಸ್ ಹಾಗೂ ನಾಗರಿಕರದ್ದಾಗಿತ್ತು. ಆದರೆ ಖತರ್ನಾಕ ಕಳ್ಳ ಮಾತ್ರ ಸಿಸಿಟಿವಿಯ ಕಣ್ಗಾವಲನ್ನು ಲೆಕ್ಕಿಸದೆ ಸಲೀಸಾಗಿ ಬೈಕ್‌ನ ಕದ್ದು ಸಾಗಿಸಿರುವದು ಸಿಸಿಟಿವಿಯಲ್ಲಿ ಸೆರೆಯಾಗಿದೆ.