ಕೇಣಿಯಲ್ಲಿ ಮಟ್ಕಾ ಆಡಿಸುತ್ತಿದ್ದ ಬುಕ್ಕಿಯ ಮೇಲೆ ಪ್ರಕರಣ

ಅಂಕೋಲಾ : ತಾಲೂಕಿನ ಕೇಣಿ ಗ್ರೌಂಡ ಹತ್ತಿರ ಗಾಬಿತ ಕೇಣಿಗೆ ಹೋಗುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತು ಮಟಕಾ ಆಟ ನಡೆಸುತ್ತಿದ್ದಾಗ ಇಲ್ಲಿನ ಪೊಲೀಸರು ದಾಳಿ ನಡೆಸಿ, ಓಸಿ ಆಡಿಸುತ್ತಿದ್ದ ಹಾಗೂ ಅದರ ಬುಕ್ಕಿಯ ಮೇಲೆ ಖಾಕಿ ಪಡೆ ಪ್ರಕರಣ ದಾಖಲಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಕೇಣಿಯ ಶ್ಯಾಮ ಗೋಪಿನಾಥ ಬಂಟ ಇವರ ಮೇಲೆ ಮಟಕಾ ಆಡಿಸುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಹಾಗೆ ಇತನಿಂದ ಸಂಗ್ರಹವಾದ ಮಟ್ಕಾ ಚೀಟಿ ಹಾಗೂ ಹಣವನ್ನು ತೆಗೆದುಕೊಳ್ಳುತ್ತಿದ್ದ ಆರೋಪದ ಮೇಲೆ ಸಂದೀಪ ಗಣಪತಿ ಬಂಟ ಅವರ ಮೇಲೆಯೂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಶ್ಯಾಮ ಗೋಪಿನಾಥ ಬಂಟನು ಕೇಣಿ ಗ್ರೌಂಡ ಹತ್ತಿರ ಗಾಬಿತ ಕೇಣಿಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಬದಿಯಲ್ಲಿ ನಿಂತು ಮಟಕಾ ಬರೆಯುತ್ತಿದ್ದಾಗ ಪಿಎಸೈ ಉದ್ದಪ್ಪ ಧರೆಪ್ಪನವರ್ ದಾಳಿ ಅವರು ಸಿಬ್ಬಂದಿಯೊAದಿಗೆ ದಾಳಿ ನಡೆಸಿದಾಗ 15970 ರೂ ನಗದು ಹಣ ಮತ್ತು ಮಟಕಾ ಆಡಲು ಬಳಸಿದ್ದ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಎಸೈ ಸುನೀಲ ಹುಳ್ಳೋಳ್ಳಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿ ಶ್ಯಾಮ ಗೋಪಿನಾಥ ಬಂಟ ಹಾಗೂ ಸಂದೀಪ ಬಂಟ ಅವರ ಮೇಲೆ ಕೆ.ಪಿ. ಆಕ್ಟ್ ಅನ್ವಯ 78(3) ಪ್ರಕರಣ ದಾಖಲಾಗಿದೆ.