
ಮಟ್ಕಾ ತೆವಲಿಗೆ ಪತ್ನಿಯ ಮಾಂಗಲ್ಯ ಸರ ಮಾರಿದ ಭೂಪ್..!
ರಾಘು ಕಾಕರಮಠ.
ಮಟ್ಕಾದ ಆಟದ ತೆವಲಿಗೆ ಬಿದ್ದು, ಪತ್ನಿಯ ಮಾಂಗಲ್ಯ ಸರವನ್ನೆ ಯಾರಿಗೂ ತಿಳಿಯದಂತೆ ಮನೆಯಿಂದ ಕದ್ದೊಯ್ದು, ಮಾರಿದ ಘಟನೆ ಅಂಕೋಲಾದಲ್ಲಿ ಹಸಿಬಿಸಿ ಚರ್ಚೆಗೆ ಗ್ರಾಸ್ವಾಗಿದೆ.
ಕಳೆದ 4 ದಿನದ ಹಿಂದೆ ಪಟ್ಟಣದ ಮಹಿಳೆಯೊಬ್ಬಳ ಮಾಂಗಲ್ಯ ಸರವು ಮನೆಯಿಂದ ಏಕಾಏಕಿ ನಾಪತ್ತೆಯಾಗಿತ್ತು. ಮನೆಯಲ್ಲಿ ಎಷ್ಟೆ ಹುಡುಕಾಡಿದರೂ ಮಾಂಗಲ್ಯ ಸರ ಸಿಗದಾಗಿತ್ತು. ಈ ಮಹಿಳೆಯ ಪತಿ ಮಾತ್ರ ಮನೆಯಲ್ಲಿ ಮಾಂಗಲ್ಯ ಸರ ಹುಡುಕಾಟ ನಡೆಸಿದವನಂತೆ ನಾಟಕ ಆಡಿ “ಜನಾರ್ಧನ” ನಾಗಿದ್ದ.
ಕಷ್ಟಪಟ್ಟು ದುಡಿದ ಮಾಂಗಲ್ಯ ಸರ ಮನೆಯಿಂದ ನಾಪತ್ತೆಯಾಗಿದ್ದರಿಂದಾಗಿ ಮಹಿಳೆ ಕಣ್ಣಿರಲ್ಲೆ ಕೈ ತೊಳೆಯುಂತಾಗಿತ್ತು. ಎರಡು ದಿನ ಬಿಟ್ಟು ಪತಿಯ ಶರ್ಟ್ ತೊಳೆಯಲು ಮುಂದಾದಾಗ, ಕಿಸೆಯಲ್ಲಿ 3.22 ಗ್ರಾಂ ಚಿನ್ನದ ಸರ ಮಾರಾಟ ಮಾಡಿದ ಚೀಟಿಯು ಪತ್ತೆಯಾಗಿದೆ. ಈ ಬಂಗಾರ ಮಾರಿದ ಚೀಟಿ ಯಾವುದೆಂದು ಪತ್ನಿ ವಿಚಾರಿಸಿದಾಗ ಪತಿ ಮನೆಯಿಂದ ನಾಪತ್ತೆಯಾಗಿದ್ದಾನೆ, ರಾತ್ರಿ ಸಾರಾಯಿ ಕುಡಿದು ಬಂದು ಮನೆಯಲ್ಲಿ ರಂಪಾಟ ಮಾಡಿದ್ದಾನೆ ಎನ್ನಲಾಗಿದೆ. ಪತ್ನಿಯ ರಾದ್ದಾಂತಕ್ಕೆ ಹೆದರಿ ಪತ್ನಿ ಸುಮ್ಮನಾಗಿದ್ದಾಳೆ.
ತೆರೆಯ ಮರೆಯಲ್ಲೆ ಮಟ್ಕಾ ಬುಕ್ಕಿ ದಂಧೆ ನಡೆಸುತ್ತಿರುವ ಮಹೇಶ ನಾಯ್ಕ ಸನ್ನಿಧಾನಕ್ಕೆ ಮಾಂಗಲ್ಯ ಸರದ ಹಣ ಸಂದಾಯ ಮಾಡಿದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಮಾಂಗಲ್ಯ ಸರ ಮಾರಾಟದಿಂದ ಕಂಗಾಲು ಆದ ಪತ್ನಿ ಮಾತ್ರ 1 ಗ್ರಾಂ ಗೋಲ್ಡ್ಗೆ ಹೋದ ಘಟನೆಯು ವಿಲಕ್ಷಣತೆಗೆ ಸಾಕ್ಷಿಯಾಗಿದೆ.
ಅಂಕೋಲಾ ಪಟ್ಟಣದಲ್ಲಿಯೆ ಬಿಂದಾಸ್ ಆಗಿ ತೆರೆದುಕೊಂಡಿರುವ ಮಟ್ಕಾ ದಂಧೆಯಿ0ದಾಗಿ ಅನೇಕರು ಬೀದಿಗೆ ಬೀಳುವಂತಾಗಿದೆ. ಸಿಪಿಐ ಶ್ರೀಕಾಂತ ತೋಟಗಿ ಮಟ್ಕಾ ದಂಧೆಯ ಕಡಿವಾಣಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಆದರೆ ಕೆಲ ಸಿಬ್ಬಂದಿಗಳ ಮಟ್ಕಾ ದಂಧೆಯ ಕುಳಗಳೊಂದಿಗೆ ಶಾಮೀಲಾಗಿದ್ದರಿಂದಾಗಿ ದಾಳಿಯ ಮೊದಲೆ ಮಾಹಿತಿ ಮಟ್ಕಾ ಬುಕ್ಕಿಗಳ ಕಿವಿಗೆ ಸೇರುವಂತಾಗಿದೆ. ಕೊಲೆ ಪ್ರಕರಣದಲ್ಲಿ ಜೈಲು ಸೇರಿದವರು ಮಟ್ಕಾ ಬುಕ್ಕಿಯ ಸಾರಥ್ಯದ ಕರಾಮತ್ತು ಪೊಲೀಸರು ಭೇಧಿಸಬೇಕಿದೆ. ಸಿಪಿಐ ಶ್ರೀಕಾಂತ ತೋಟಗಿ ಅವರ ದಕ್ಷತೆಗೆ ಕೆಲ ಸಿಬ್ಬಂದಿಗಳ ಸಹಕಾರ ಸಿಗುತ್ತಿಲ್ಲ ಎಂಬ ಮಾತುಗಳು ಪೊಲೀಸ್ ಮೂಲಗಳಿಂದಲೆ ತಿಳಿದುಬಂದಿದೆ.