
ಅಂಕೋಲಾದ ಮಣ್ಣಿನ ಮಗ ಎಸಿಪಿ ರವೀಶ ನಾಯಕರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪುರಸ್ಕಾರ
ರವೀಶ್ ಎಸ್ ನಾಯಕರ ದಕ್ಷತೆಗೆ ಒಲಿದು ಬಂದ ಗೌರವ
ರಾಘು ಕಾಕರಮಠ.
ಅಂಕೋಲಾ : ತನ್ನ ದಕ್ಷತೆ ಮೂಲಕ ಪೋಲಿಸ್ ಇಲಾಖೆಯಲ್ಲಿ ಉತ್ತಮ ಅಧಿಕಾರಿಯಾಗಿ ಗುರುತಿಸಿಕೊಂಡು, ಸದ್ಯ ಮಂಗಳೂರಿನಲ್ಲಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ, ಅಂಕೋಲಾದ ತಾಲೂಕಿನ ಬಾಸಗೋಡ ಮೂಲದ ರವೀಶ್ ಎಸ್ ನಾಯಕ ಅವರು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
2001 ರ ಬ್ಯಾಚಿನ ಅಧಿಕಾರಿಯಾಗಿ ಬಿಜಾಪುರದಲ್ಲಿ ಪಿಎಸೈಯಾಗಿ ಸೇವೆ ಆರಂಭಿಸಿದ್ದ ಇವರು, ತದ ನಂತರ ಗುಲ್ಬರ್ಗ, ಯಾದಗಿರಿ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ, ಬಳಿಕ ಮಂಗಳೂರಿನ ವಿವಿಧ ಠಾಣೆಗಳಲ್ಲಿಯೂ ಪೊಲೀಸ್ ನಿರೀಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲದೇ, ಉಡುಪಿಯ ಕರಾವಳಿ ಕಾವಲು ಪಡೆ ಇನ್ಸೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.
ರವೀಶ ನಾಯಕ ಅವರು ತಾಯಿ ಲೀಲಾವತಿ ಅವರ ಆರ್ಶಿವಾದದೊಂದಿಗೆ, ಅಣ್ಣ ನಾಗರಾಜ್ ಹಾಗೂ ಕುಟುಂಬ ಹಾಗೂ ಊರ ನಾಗರಿಕರ ಪ್ರೋತ್ಸಾಹದೊಂದಿಗೆ ಅಂಕೋಲಾದ ಹಿರಿಮೆಗೆ ಗರಿ ತಂದಿದ್ದಾರೆ.