
ಅಕ್ರಮವಾಗಿ ಡಿಸೈಲ ಇಳಿಸದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ..?
ಕೊಡ್ಲಗದ್ದೆಯಲ್ಲಿ ಅಕ್ರಮವಾಗಿ ಡಿಸೈಲ ಹಾಗೂ ಪೆಟ್ರೋಲ ಮಾಫಿಯಾ
ವಿಷ್ಣು ಗೌಡ.
ಅ0ಕೋಲಾ : ರಾಷ್ಟಿçÃಯ ಹೆದ್ದಾರಿ 66 ರ ಕೊಡ್ಲಗದ್ದೆಯಲ್ಲಿ ಡಿಸೈಲ ಹಾಗೂ ಪೆಟ್ರೋಲ ಮಾಫಿಯಾದ ದೌಲತ್ತು ಮೀತಿ ಮೀರಿದೆ. ಕೊಡ್ಲಗದ್ದೆಯ ಬ್ರೀಜ್ನ ಎಡಭಾಗದಲ್ಲಿ ನಿರಾಂತಕವಾಗಿ ಅಕ್ರಮವಾಗಿ ಡಿಸೈಲ ಹಾಗೂ ಪೆಟ್ರೋಲ ಇಳಿಸುವ ಜಾಲ ಸಕ್ರೀಯವಾಗಿದ್ದು, ಸಂಜೆಯಾದೊಡನೆ ಇಲ್ಲಿ ಚಾಲಕರನ್ನು ಬೆದರಿಸಿ ಡಿಸೈಲ ಪೆಟ್ರೋಲ ಇಳಿಸುವ ಜಾಲ ಗಟ್ಟಿಯಾಗಿದೆ,
ಸೋಮವಾರ ರಾತ್ರಿ ಗೋವಾದಿಂದ ಯಲ್ಲಾಪುರಕ್ಕೆ ಸಾಗುತ್ತಿದ್ದ ಲಾರಿಯನ್ನು ಹಿಂಬಾಲಿಸಿ ಬಂದ ಈ ಮಾಫಿಯಾ ಗ್ಯಾಂಗ್ ಕೊಡ್ಲಗದ್ದೆ ಡಿಸೈಲ ಇಳಿಸುವಂತೆ ಲಾರಿ ಚಾಲಕನಲ್ಲಿ ಹೇಳಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಹಲ್ಲೆ ನಡೆಸಿದ ಘಟನೆಯು ವರದಿಯಾಗಿದೆ. ಅಂತೂ ಇಂತೂ ಈ ಸುಧಾ ಆಕರ ಗ್ಯಾಂಗ್ನಿAದ ತಪ್ಪಿಸಿಕೊಂಡು ಬಂದ ಚಾಲಕ ಲಾರಿಯೇರಿ ಊರಿನತ್ತ ಮರಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊಡ್ಲಗದ್ದೆಯಲ್ಲಿ ಡಿಸೈಲ ಹಾಗೂ ಪೆಟ್ರೋಲ ಇಳಿಸುವ ಜಾಲ ಸಕ್ರೀಯವಾಗಿದೆ. ಆರಕ್ಷಕ ಇಲಾಖೆಯ ಹಿರಿಯ ಅಧಿಕಾರಿಗಳ ಹೆಸರನ್ನು ಬಳಸಿಕೊಂಡು ಈ ಅಕ್ರಮ ದಂಧೆ ನಿರಾತಂಕವಾಗಿ ಸಾಗಿದ್ದು ವ್ಯವಸ್ಥೆಗೆ ಹಿಡಿದ ಕನ್ನಡಿಯಂತಾಗಿದೆ.
ಕೊಡ್ಲಗದ್ದೆಯ ಬ್ರೀಜ್ನ ಎಡಭಾಗದಲ್ಲಿ ರಾಷ್ಟಿçÃಯ ಹೆದ್ದಾರಿ ಅಂಚಿನಲ್ಲಿ ಈ ದಂಧೆ ರಾಜಾರೋಷವಾಗಿ ತೆರೆದುಕೊಂಡಿದೆ. ಪ್ರತಿ ದಿನ 55 ಕ್ಕೂ ಹೆಚ್ಚು ಲಾರಿಗಳಿಂದ ಡಿಸೈಲ ಮತ್ತು ಪೆಟ್ರೋಲಗಳನ್ನು ಅಕ್ರಮವಾಗಿ ಇಳಿಸಲಾಗುತ್ತಿದೆ. ಈ ದಂಧೆ ರಾತ್ರಿಯಾದೊಡನೆ ತೆರೆದುಕೊಳ್ಳುತ್ತದೆ.. ಕೆಲವು ಲಾರಿಯವರು ಹೊಂದಾಣಿಕೆ ಮಾಡಿಕೊಂಡು ಡಿಸೈಲ ಅಡ್ಡೆಗೆ ಬಂದು ಇಳಿಸಿ ಹೋಗುತ್ತಾರೆ. ಇದರಿಂದ ತೃಪ್ತಿಯಾಗದ ಈ ಮಾಫಿಯಾದವರು ಇನ್ನು ಹೆಚ್ಚಿನ ಲಾರಿಯಿಂದ ಡಿಸೈಲ ಇಳಿಸಿಕೊಳ್ಳಲು ಲಾರಿಯ ಚಾಲಕರನ್ನು ಹೆದರಿಸಿ ಡಿಸೈಲ ಇಳಿಸಲು ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬಂದಿದೆ.
ಡಿಸೈಲ ಹಾಗೂ ಪೆಟ್ರೋಲನ್ನು ಅಕ್ರಮವಾಗಿ ಇಳಿಸಿಕೊಳ್ಳಲು 5 ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ದಾದಾಗಿರಿಯಿಂದಲೆ ಈ ಅಕ್ರಮ ದಂಧೆ ನಡೆಯುತ್ತಿದೆ. ಸುಂಕಸಾಳದ ಉಪ ಠಾಣೆಯ ಪೊಲೀಸರು ಮಾತ್ರ ಇದರ ಸಹವಾಸಕ್ಕೂ ಹೋಗದೆ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅಪಾರ ಪ್ರಮಾಣದಲ್ಲಿ ಡೀಸೈಲ – ಪೆಟ್ರೋಲ ಶೇಖರಿಸುತ್ತಿರುವದರಿಂದ ಏನಾದರೂ ಬೆಂಕಿ ಅವಘಡವಾದರೆ ಯಾರು ಹೊಣೆ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗಿದೆ. ಪೆಟ್ರೋಲ ಬಂಕಗಳಲ್ಲಿ ಇರುವ ದರಗಳಿಗಿಂದ 9 ರೂಪಾಯಿ ಕಡಿಮೆ ದರದಲ್ಲಿ ಇಲ್ಲಿ ಡಿಸೈಲ ಹಾಗೂ ಪೆಟ್ರೋಲಗಳನ್ನು ಮಾರಲಾಗುತ್ತಿದೆ ಎಂಬ ಆರೋಪವು ಕೇಳಿ ಬಂದಿದೆ. ಈ ಬಗ್ಗೆ ಆರಕ್ಷಕ ಇಲಾಖೆ ಕ್ರಮವಹಿಸಬೇಕಿದೆ.