ಅಂಕೋಲಾದ ನೂತನ ಸಿಪಿಐ ಆಗಿ ಚಂದ್ರಶೇಖರ ಮಠಪತಿ ಅಧಿಕಾರ ಸ್ವೀಕಾರ
ರಾಘು ಕಾಕರಮಠ.
ಅಂಕೋಲಾ : ಇಲ್ಲಿಯ ಪೊಲೀಸ್ ಠಾಣೆಯ ನೂತನ ಸಿಪಿಐ ಆಗಿ ಚಂದ್ರಶೇಖರ ಮಠಪತಿ ಅವರು ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ.
ಧಾರವಾಡದ ಮಹಿಳಾ ಠಾಣೆಯಲ್ಲಿ ಪೊಲೀಸ್ ನೀರಿಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ ಮಠಪತಿ ಅವರನ್ನು ಕರ್ನಾಟಕ ಸರಕಾರ ಅಂಕೋಲಾಕ್ಕೆ ವರ್ಗಾವಣೆಗೊಳಿಸಿ ಆದೇಶ ನೀಡಿದೆ.
ದಕ್ಷ ಹಾಗೂ ಖಡಕ್ ಆಫೀಸರ್ ಆಗಿ ಎಂದೇ ಹೆಸರುವಾಸಿ ಆಗಿರುವ ಚಂದ್ರಶೇಖರ ಮಠಪತಿ ಅವರು 2005 ನೇ ಬ್ಯಾಚಿನ ಪೊಲೀಸ್ ಅಧಿಕಾರಿ ಆಗಿದ್ದಾರೆ.
ಬಾಗಲಕೋಟೆ, ದಾರವಾಡ, ವಿಜಾಪುರ ಜಿಲ್ಲೆಗಳಲ್ಲಿ ಹೆಚ್ಚಿನ ಸೇವೆ ಸಲ್ಲಿಸಿರುವ ಇವರು ಅನೇಕ ಅಫರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ ಇಲಾಖೆಯಲ್ಲಿ ಉತ್ತಮ ಹೆಸರನ್ನು ಸಂಪಾಧಿಸಿದ ಅಧಿಕಾರಿಯಾಗಿದ್ದಾರೆ.
ಚಂದ್ರಶೇಖರ ಮಠಪತಿ ಅವರ ಸಹೋದರ ಮಲ್ಲಯ್ಯ ಮಠಪತಿ ಅವರು ಕೂಡ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕರ್ನಾಟಕದ ಆರಕ್ಷಕ ಇಲಾಖೆಯಲ್ಲಿ ಜೋಡೆತ್ತುಗಳಾಗಿ ಕಾನೂನು ಸುವ್ಯಸ್ಥೆಗೆ ತನ್ನದೆ ಆದ ಕೊಡುಗೆ ನೀಡುತ್ತಿದ್ದಾರೆ.
ಈ ಹಿಂದೆ ಅಂಕೋಲಾ ಠಾಣೆಯಲ್ಲಿ ಜನಸ್ನೇಹಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶ್ರೀಕಾಂತ ತೋಟಗಿ ಅವರು ಬೆಳಗಾವಿಯ ವೃತ್ತಕ್ಕೆ ವರ್ಗಾವಣೆಗೊಂಡಿದ್ದಾರೆ.