ಅಂಕೋಲಾ : ಅಂಕೋಲಾದ ಪ್ರತಿಷ್ಠಿತ ರೂರಲ್ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಅವರ್ಸಾದ ಜೇಸಿ ಶಾಲೆಯ ಮುಖ್ಯಾಧ್ಯಾಪಕ ರಾಘವೇಂದ್ರ ಭಟ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಶ್ರೀ ಮಹಾಗಣಪತಿ ಸ್ಟೋರ್ಸ್ನ ಮಾಲಕ ಪ್ರವೀಣ ಶೆಟ್ಟಿ ಬೊಬ್ರುವಾಡ, ಭಾರತೀಯ ಜೀವವಿಮಾ ನಿಗಮ ಅಂಕೋಲಾದ ಸೀನಿಯರ್ ಬ್ಯುಸಿನೆಸ್ ಅಸೋಸಿಯೇಟ್ ಆದ ಸಾಹಿಶ್ ಕೇಣಿಕರ್ ಅವರು ಖಜಾಂಚಿಯಾಗಿ, ನೇಮಕಗೊಂಡಿದ್ದಾರೆ.
ಪಟ್ಟಣದ ಶಾಂತಿನಿಕೇತನದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅಂಕೋಲಾ ರೂರಲ್ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ ಕೇಣಿಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
