ಎಸ್‌ಡಿಎಂಸಿ ಅಧ್ಯಕ್ಷರಾಗಿ ಮಂಜುನಾಥ ನಾಯ್ಕ ಆಯ್ಕೆ
ಅಂಕೋಲಾ ; ಕ್ರೀಯಾಶೀಲ ತರುಣ ಹಟ್ಟಿಕೇರಿಯ ಮಂಜುನಾಥ ಕೃಷ್ಣ ನಾಯ್ಕ ಅವರು ಅವರ್ಸಾದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಪೂರ್ವಿ ಪಾಂಡುರ0ಗ ನಾಯ್ಕ ಆಯ್ಕೆಯಾಗಿದ್ದಾರೆ.

ತನ್ನದೇ ಆದ ಸ್ನೇಹಿತರ ಬಳಗ ಹಾಗೂ ಸಾಮಾಜಿಕ ಚಟುವಟಿಕೆಯ ಮೂಲಕ ಗುರುತಿಸಿಕೊಂಡಿರುವ ಉದ್ಯಮಿ ಮಂಜುನಾಥ ನಾಯ್ಕ ಅವರು ಸಾಕಷ್ಟು ಸ್ಥಿತಿವಂತರು ಆಗಿದ್ದರು ಸಹ ತನ್ನ ಮಗನನ್ನು ಕನ್ನಡ ಶಾಲೆಗೆ ಸೇರಿಸುವ ಮೂಲಕ ಕನ್ನಡತನ ಭಾಷಾಭಿಮಾನ ಮರೆದು ಮಾದರಿಯಾಗಿದ್ದಾರೆ.
ಮಂಜುನಾಥ ನಾಯ್ಕ ಅವರು ಅವರ್ಸಾದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವದು ಶಾಲೆಯ ಅಭಿವೃದ್ಧಿಗೂ ಸಹ ಇನ್ನಷ್ಟು ವೇಗ ದೊರೆಯುವದು ಖಂಡಿತ ಎನ್ನುವದು ನಾಗರಿಕರ ಅಭಿಲಾಸೆಯು ಆಗಿದೆ.
ಮಂಜುನಾಥ ನಾಯ್ಕ ಅವರು ಶಾಲಾಬಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವದು ಅವರ ಆಪ್ತ ಸ್ನೇಹಿತರ ಬಳಗದಲ್ಲಿ ಹರ್ಷಕ್ಕೆ ಕಾರಣವಾಗಿದೆ. ಶಾಸಕ ಸತೀಶ ಸೈಲ ಹಾಗೂ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಮಂಜುನಾಥ ಅವರಿಗೆ ಶುಭ ಹಾರೈಸಿ ಅಭಿನಂದಿಸಿದ್ದಾರೆ.
