TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಬಡವರ ಪ್ರಾಣ ಹಿಂಡುತ್ತಿದೆ ಮೈಕ್ರೋ ಫೈನಾನ್ಸ್ ಭೂತ :

Feb 6, 2025 | ಅಪರಾಧ, ವಿಶೇಷ |

ಬಡವರ ಪ್ರಾಣ ಹಿಂಡುತ್ತಿದೆ ಮೈಕ್ರೋ ಫೈನಾನ್ಸ್ ಭೂತ :

ಒತ್ತಡದಲ್ಲಿ ಉದ್ಯೋಗಿಗಳು: ಸಂಕಟದಲ್ಲಿ ಸಾಲಗಾರರುಹೆಸರಿಗೆ ಮಾತ್ರ ಸಣ್ಣ ಸಾಲ ಜನರಿಗೆ ಮಾತ್ರ ದೊಡ್ಡ ಉಪಟಳ

ವರದಿ: ದಿನಕರ ನಾಯ್ಕ ಅಲಗೇರಿ

ಅಂಕೋಲಾ: ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿ ಕುಖ್ಯಾತಿ ಗಳಿಸಿರುವ ಮೈಕ್ರೋ ಫೈನಾನ್ಸ್ ಎಂಬ ಸಾಲ ನೀಡುವ ಸಂಸ್ಥೆಗಳು ಇಂದು ತಾಲೂಕಿನ ಗ್ರಾಮೀಣ ಜನರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಸುಲಭ ಸಾಲ ಎಂದು ತೆಗೆದುಕೊಂಡಿದ್ದಕ್ಕೆ ಕಂತು ತುಂಬುವುದಕ್ಕೆ ಕೊಂಚ ತಡವಾದರೂ ಸಹ ಮನೆ ಬಾಗಿಲಿಗೆ ಬಂದು ಬಾಯಿಗೆ ಬಂದ ಹಾಗೆ ಬಯ್ಯುವುದು, ನಿಂದಿಸುವುದು ಪರಿಪಾಠವಾಗಿ ಬೆಳೆದು ಬಂದಿದ್ದು ಪ್ರಜ್ಞಾವಂತ ನಾಗರಿಕರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ.

ಕಷ್ಟಕ್ಕೆ ಮೈಕ್ರೋ ಫೈನಾನ್ಸ್ ಮೊರೆ ಹೋಗುವ ಬಡವರು:

ಸಾಲ ಕೊಡುವಾಗ ಯಾವುದೇ ಪ್ರಮುಖ ದಾಖಲೆಗಳನ್ನು ಪಡೆಯದೆ ಅತಿ ಸುಲಭವಾಗಿ ತಟಕ್ಕನೆ ನಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಹಾಕಿ ಬಿಡುತ್ತಾರೆ. ಆರ್ಥಿಕ ಅಡಚಣೆಯಲ್ಲಿ ಇರುವ ಬಡ ಜನ ಅನಿವಾರ್ಯವಾಗಿ ಸಾಲ ಪಡೆದುಕೊಳ್ಳುತ್ತಾರೆ. ಅದರೆ ಅಸಲಿ ಆಟ ಶುರುವಾಗುವುದು ನಂತರದಲ್ಲಿ.

ಹೌದು…. ಸಾಲ ಪಡೆದ ದಿನದಿಂದ ಯಾವುದಾದರೂ ಒಂದು ತಿಂಗಳು ಕಂತಿನ ಹಣ ತುಂಬಲು ಸ್ವಲ್ಪ ತಡವಾದರೂ ಸಹ ಎರಡು ಮೂರು ಜನ ಒಂದೇ ಬೈಕ್ ಇರಿ ಹಠಾತ್ತನೆ ಸಾಲಗಾರರ ಮನೆ ಮುಂದೆ ಪ್ರತ್ಯಕ್ಷರಾಗಿ ಬಿಡುತ್ತಾರೆ. ಹಣದ ಬಾಬತ್ತು ಕೊಡುವ ವರೆಗೂ ಅಲ್ಲಿಂದ ಕಡಲುವುದಿಲ್ಲ. ಬೆಳಗ್ಗೆಯಿಂದಲೇ ಸಾಲಗಾರರ ಮನೆಯ ಮುಂದೆ ಜಾಂಡಾ ಹೂಡಿ ಬಾಯಿಗೆ ಬಂದ ಹಾಗೆ ಬಯ್ಯುತ್ತ, ಅಕ್ಕಪಕ್ಕದವರ ಮುಂದೆ ಅವಮಾನಿಸುತ್ತಾ ಹಣಕ್ಕಾಗಿ ಅತೀವ ಪೀಡಿಸುತ್ತಾರೆ. ಎಷ್ಟೋ ಬಡ ಸಾಲಗಾರರು ಇವರ ಕಾಟ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ ಕುರಿತು ಸಹ ವರದಿಯಾಗಿವೆ. ಕಣ್ಣ ಮುಂದೆಯೇ ಅನ್ಯಾಯ ನಡೆದರೂ ಖಂಡಿಸಲಾಗದ ಅಸಹಾಯಕ ಪರಿಸ್ಥಿತಿಗೆ ತಲುಪಿದ್ದಾನೆ ಪಡಪಾಯಿ ಬಡವ.

ಟಾರ್ಗೆಟ್ ಪೂರೈಸದಿದ್ದರೆ ಕೆಲಸದಿಂದ ವಜಾ:

ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲಗಾರರಿಗೆ ಕಿರುಕುಳದ ಟಾರ್ಗೆಟ್ ಹಿಂದೆಯೇ ಕೊಟ್ಟಿರುತ್ತಾರೆ. ಕಂತು ತರುವ ವರೆಗೆ ಫೀಲ್ಡ್ ಉದ್ಯೋಗಿಗಳಿಂದ ಸಾಲಗಾರರಿಗೆ ಕಿರುಕುಳ, ಕಂತು ತರದಿದ್ದರೆ ಫೈನಾನ್ಸ್ ಮಾಲೀಕನಿಂದ ಫೀಲ್ಡ್ ಉದ್ಯೋಗಿಗೆ ಕಿರುಕುಳ. ಒಟ್ಟಿನಲ್ಲಿ ಮೈಕ್ರೋ ಫೈನಾನ್ಸ್ ಎಂಬ ಮಹಾಮಾರಿ ಕಿರುಕುಲದ ತಳಹದಿಯ ಮೇಲೆಯೇ ನಿರ್ಮಾಣಗೊಂಡಿದೆ ಎಂದರೆ ತಪ್ಪಾಗಲಾರದು.

ಕೇವಲ 40 ಸಾವಿರಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ಉದ್ಯೋಗಿ:

ಮೈಕ್ರೋ ಫೈನಾನ್ಸ್ ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಅಲ್ಲಿ ಸಾಲ ತೆಗೆದುಕೊಂಡ ಸಾಲಗಾರರಿಗಿಂತ ಬಡವರಾಗಿದ್ದಾರೆ. ಸಾಲಗಾರರಿಂದ ವಸೂಲಿ ಮಾಡಿದ 40 ಸಾವಿರ ಹಣ ಎಲ್ಲಿಯೋ ಕಾಣೆಯಾಗಿದ್ದ ಕಾರಣಕ್ಕೆ ಉದ್ಯೋಗಿ ಆತ್ಮಹತ್ಯೆಗೆ ಯತ್ನಿಸಿ ಅದೃಷ್ಟವಶಾತ್ ಬದುಕಿದ್ದ. ನಂತರ ಈ ಕುರಿತು ಅಂಕೋಲಾ ಠಾಣೆಯಲ್ಲಿ ದೂರು ದಾಖಲಾಗಿ ಸಿಪಿಐ ಚಂದ್ರಶೇಖರ್ ಮಠಪತಿ ಅಸ್ಪತ್ರೆಗೆ ತೆರಳಿ ಆತನ ಆರೋಗ್ಯ ವಿಚಾರಿಸಿ ವಿಚಾರಣೆ ನಡೆಸಿದ್ದರು. ಕೇವಲ 40 ಸಾವಿರಕ್ಕೆ ಆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸುತ್ತಾನೆಂದರೆ ಆತ ಕೆಲಸ ನಿರ್ವಹಿಸುವ ಸಂಸ್ಥೆ ಎಷ್ಟು ಭಯದ ವಾತಾವರಣ ನಿರ್ಮಿಸಿರಬಹುದು. ಜೊತೆಗೆ ಆತ ಎಷ್ಟು ಬಡ ಉದ್ಯೋಗಿಯಾಗಿರಬಹುದು ಎಂಬುದನ್ನು ಊಹಿಸಬಹುದು.

ಮಾಲೆ ಹಾಕಿದರೂ ಬಿಡಲಿಲ್ಲ, ಮುಂದಿನ ವಾರ ತುಂಬುತ್ತೇನೆಂದರೂ ಬಿಡಲಿಲ್ಲ

ಪಟ್ಟಣದ ನಿವಾಸಿಯೊಬ್ಬರು ಕಳೆದ ಎರಡು ತಿಂಗಳ ಹಿಂದೆ ಅಯ್ಯಪ್ಪ ಮಾಲೆ ಧಾರಣೆ ಮಾಡಿದ್ದರು. ಸನ್ನಿದಾನದಲ್ಲಿ ಹೆಚ್ಚಿನ ಕಾಲ ಕಳೆಯಬೇಕೆಂಬ ಮನಸ್ಸಿನಿಂದ ಬೇಗನೆ ಕೆಲಸದಿಂದ ಹಿಂತಿರುಗುತ್ತಿದ್ದರು. ಕಾರಣ ಅವರಿಗೆ ದಿನಗೂಲಿ ಕಡಿಮೆ ಸಿಗುತ್ತಿತ್ತು. ಕೇವಲ ಎರಡು ವಾರದ 1 ಸಾವಿರ ರೂ ಕಟ್ಟಬಾಕಿ ಮಾಡಿದ್ದಕ್ಕೆ ಫೀಲ್ಡ್ ಸಿಬ್ಬಂದಿ ಅವರ ಮನೆಯ ಮುಂದೆ ಬಂದು ರಾದ್ದಾಂತ ಮಾಡಿದ. ಸನ್ನಿದಾನದಲ್ಲಿ ಇರುವ ಮಾಹಿತಿ ಪಡೆದು ಸೀದಾ ಅಲ್ಲಿಗೆ ಬಂದು ಬಾಯಿಗೆ ಬಂದ ಹಾಗೆ ಮಾತನಾಡಿದ. ಹಣ ಕೊಡುವ ವರೆಗೂ ಇಲ್ಲಿಂದ ಹೋಗುವುದಿಲ್ಲ ಎಂದು ಬೆಳಗ್ಗೆಯಿಂದ ಮದ್ಯಾಹ್ನದ ವರೆಗೂ ಅಲ್ಲಿಯೇ ಕಾದು ನಂತರ ತಮ್ಮ ಮ್ಯಾನೇಜರ್ ನೊಂದಿಗೆ ಬಂದು ಪೀಡಿಸಿದ್ದರು. ಕೊನೆಗೆ ಆ ಸಾಲಗಾರ ಅವರಿವರ ಕಡೆ ಹಣ ಪಡೆದು ಹೇಗೋ ಹಣ ಹೊಂದಿಸಿ ಕೊಟ್ಟಿದ್ದರಿಂದ ಸಂಜೆ 7 ಗಂಟೆಗೆ ಅಧಿಕಾರಿಗಳು ಅಲ್ಲಿಂದ ತೆರಳಿದ್ದಾರೆ.

Share:

Rate:

Previousಅಶ್ಲೀಲ ಸಂದೇಶ ಕಳುಹಿಸಿದ ಪುರೋಹಿತನ ಗ್ರಹಚಾರ ಬಿಡಿಸಲು ಪೊಲೀಸ್  ಠಾಣೆಯ ಮೆಟ್ಟಿಲೇರಿದ ಮಹಿಳೆ
Nextಅವರ್ಸಾದಲ್ಲಿ ಜನಪ್ರತಿಯೊಬ್ಬನ ರಾಜಾತಿಥ್ಯದಲ್ಲಿ ತೆರೆದುಕೊಂಡಿರುವ ಮಟ್ಕಾ ದಂಧೆ

Related Posts

ಸಿಬಿಐ ಅಧಿಕಾರಿ ಎಂದು ಹೇಳಿ ತಮಾಷೆ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿಕೊಂಡನೆ ಹೊಸ್ಕೇರಿಯ ರಾಘವ ನಾಯಕ..?

ಸಿಬಿಐ ಅಧಿಕಾರಿ ಎಂದು ಹೇಳಿ ತಮಾಷೆ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿಕೊಂಡನೆ ಹೊಸ್ಕೇರಿಯ ರಾಘವ ನಾಯಕ..?

November 29, 2023

ಇಲಾಖೆಯ ಗೌರವ ಹೆಚ್ಚಿಸಿದ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ : ಚೈತನ್ಯ

ಇಲಾಖೆಯ ಗೌರವ ಹೆಚ್ಚಿಸಿದ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ : ಚೈತನ್ಯ

August 1, 2023

 ಜಮಗೋಡ ಬಳಿ ಕಾರ ಪಲ್ಟಿ : ದಂಪತಿಗಳು ಸಾವು

 ಜಮಗೋಡ ಬಳಿ ಕಾರ ಪಲ್ಟಿ : ದಂಪತಿಗಳು ಸಾವು

January 12, 2025

ಕಾರವಾರದದ ಕುಂಠಿ ಮಹಾಮ್ಮಾಯ ದೇವಸ್ಥಾನದ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ

ಕಾರವಾರದದ ಕುಂಠಿ ಮಹಾಮ್ಮಾಯ ದೇವಸ್ಥಾನದ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ

July 19, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;
    ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;
  • ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
    ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
  • ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
    ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
  • ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
    ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
  • ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
    ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy